Wednesday, 11th December 2024

ಎಂಟು ತಿಂಗಳ ನಂತರ ಕೊಲೆ ಪ್ರಕರಣ ಭೇದಿಸಿದ ಚೇಳೂರು ಪೊಲೀಸರು

ಗುಬ್ಬಿ : ತಾಲ್ಲೂಕಿನ ಕಲ್ಲರ್ದಗೆರೆ ಭೋವಿ ಕಾಲೋನಿಯಲ್ಲಿ ವೃದ್ದನೋರ್ವನ ಕೊಲೆಯಾಗಿ ಎಂಟು ತಿಂಗಳ ನಂತರ ಕೊಲೆ ಪ್ರಕರಣವನ್ನ ಚೇಳೂರು ಪೋಲೀಸರು ಭೇಧಿಸಿದ್ದು ಮೂರು ಆರೋಪಿಗಳನ್ನು ಬಂಧಿಸಲು ಚೇಳೂರು ಪೊಲೀಸರು ಯಶಸ್ವಿ ಯಾಗಿದ್ದು ಕಲ್ಲರ್ದಗೆರೆಯ ಗೋವಿಂದಪ್ಪ 75 ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಈ ವಿಚಾರವಾಗಿ ಕೊಲೆಯಾಗಿರುವ ಗೋವಿಂದಪ್ಪನ ಮೊಮ್ಮಗ ಮೋಹನ್ ಆತನ ಸ್ನೇಹಿತರು ಸೇರಿ ದಿನಾಂಕ 22/1/22ರಂದು ಗೋವಿಂದಪ್ಪನ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿ ಕಲ್ಲರ್ದಗೆರೆಯ ತಮ್ಮ ಜಮೀನಿನಲ್ಲಿ ಗುಂಡಿ ತೆಗೆದು ಅದರಲ್ಲಿ ಮುಚ್ಚಿ ಏನು ಗೋತ್ತಲ್ಲದಂತೆ ಇದ್ದರು.
ಮೃತ ಗೋವಿಂದಪ್ಪ ಅವಾಗ ಅವಾಗ ವಾರಗಟ್ಟಲೇ ಬೇರೆ ಊರುಗಳಿಗೆ ಹೋಗುವ ಅಭ್ಯಾಸವಿದ್ದ ಕಾರಣ ಗೋವಿಂದಪ್ಪನ ನಾಪತ್ತಗೆ ತಲೆಕೆಡಿಸಿಕೊಂಡಿರಲಿಲ್ಲ ಸುಮಾರು ಏಳೆಂಟು ತಿಂಗಳು ನಂತರ ಕೊಲೆ ಮಾಡಿದ್ದ ಗುಸು ಗುಸು ಮಾತುಗಳು ಕೇಳಿ ಬಂದ ನಂತರ ಮೃತ ಗೋವಿಂದಪ್ಪನ ಮಗ ವೆಂಕಟರಮಣ ದಿನಾಂಕ 2/9/22ರಂದು ಚೇಳೂರು ಠಾಣೆಯಲ್ಲಿ ನಾಪತ್ತೆ ಪ್ರಕರಣಾ ದಾಖಲಿಸಿದ ನಂತರ ತನಿಖೆಗೆ ಇಳಿದ ಪೋಲೀಸರಿಗೆ ಸಿಕ್ಕ ಹಲವು ಸುಳಿವಿನ ಮೇಲೆ ಕೊಲೆಯಾದ ವ್ಯಕ್ತಿಯ ಮೊಮ್ಮಗ ಮೋಹನ್ ಹಾಗೂ ಸ್ನೇಹಿತ ರಾದ ಪ್ರಜ್ವಲ್ , ಚೇತನ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಡಿರುತ್ತಾರೆ ಎಂದು ಚೇಳೂರು ಪೋಲೀಸರು ತಿಳಿಸಿರುತ್ತಾರೆ.
ಆರೋಪಿಗಳ ಖಚಿತ ಮಾಹಿತಿ ಮೇಲೆ ಬುಧವಾರ ತಹಶೀಲ್ದಾರ್ ಆರತಿ ಹಾಗೂ ಗುಬ್ಬಿ ಸಿಪಿಐ ನಧಾಫ್ ಹಾಗೂ ಸಿಬ್ಬಂದಿಗಳು ಕೊಲೆ ಮಾಡಿ ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟಿರುತ್ತಾರೆ. ಚೇಳೂರು ಠಾಣೆಯಲ್ಲಿ 139/2022 ಪ್ರಕರಣಾ ದಾಖಲಾಗಿ ಚೇಳೂರು ಪೋಲೀಸರು ತನಿಖೆ ಮುಂದು ವರಿಸಿದ್ದಾರೆ.
ಸಿಪಿಐ ನಧಾಪ್ ಮಾತನಾಡಿ ಆರೋಪಿಗಳನ್ನು ಮೂರು ದಿನ ಪೋಲೀಸ್ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದೇವೆ ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ.
ಚೇಳೂರು ಪಿಎಸ್ ನವೀನ್ ಕುಮಾರ್ ಮಾತನಾಡಿ ನಾಪತ್ತೆ ಪ್ರಕರಣಾ ದಾಖಲಾದ ನಂತರ ಹಲವು ಆಯಾಮಗಳಲ್ಲಿ ತನಿಖೆ ಮಾಡಿದರಿಂದ ಕೊಲೆ ಆರೋಪಿಗಳನ್ನ ಬಂಧಿಸಲು ಸಾಧ್ಯವಾಗಿದೆ ಎಂದು  ತಿಳಿಸಿದರು.