ಬಾಗೇಪಲ್ಲಿ: ವಿಶ್ವಕರ್ಮರು ಈ ನೆಲದ ದೇವರ ಸೃಷ್ಟಿಕರ್ತರು. ಯಾವುದೇ ದೇವಸ್ಥಾನಗಳಾಗಲಿ, ಐತಿಹಾಸಿಕ ಸ್ಥಳಗಳಾಗಲಿ, ಮತ್ತಿತರ ಗುಡಿ ಗೋಪುರಗಳ ಕೆತ್ತನೆಯ ಹಿಂದೆ ವಿಶ್ವಕರ್ಮರ ಅಪಾರ ಶ್ರಮವಿದೆ ಎಂದು ತಹಸೀ ಲ್ದಾರ್ ಮನೀಶಾ ಮಹೇಶ್ ಪತ್ರಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲ್ಲೂಕು ಪಂಚಾ ಯಿತಿ, ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ವಿಶ್ವಕರ್ಮ ಸಮಾಜಕ್ಕೆ ಮತ್ತು ಅವರ ವೃತ್ತಿಗೆ ದೇಶದಲ್ಲಿಯೇ ಗೌರವ ಸಿಗುವಂತಹ ಕೆಲಸವನ್ನು ವಿಶ್ವಕರ್ಮರು ಮಾಡಿದ್ದಾರೆ. ಜನಸಾಮಾನ್ಯರ ಯಾವುದೇ ದಿನಬಳಕೆಯ ವಸ್ತುಗಳ ಹಿಂದೆ ವಿಶ್ವಕರ್ಮರ ತ್ಯಾಗವಿದೆ. ಈ ನಿಟ್ಟಿನಲ್ಲಿ ಈ ಸಮಾಜವನ್ನು ಗೌರವದಿಂದ ಕಾಣಬೇಕು ಎಂದರು.
ವೇದ ಪುರಾಣಗಳಲ್ಲಿ ವಿಶ್ವಕರ್ಮರನ್ನು ಕಲೆ ವಾಸ್ತುಶಿಲ್ಪದ ಸೃಷ್ಟಿಕರ್ತ ಎಂದು ಬಣ್ಣಿಸಲಾಗಿದೆ. ಹಾಗಾಗಿ ವಿಶ್ವ ಕರ್ಮ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ಪ್ರತಿಯೊಬ್ಬರು ವಿಶ್ವಕರ್ಮರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಿಇಓ ವೆಂಕಟೇಶಪ್ಪ ಮಾತನಾಡಿ ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ವಿಶ್ವಕರ್ಮರ ಪಾತ್ರ ಮಹತ್ತರ ವಾದುದು. ವಿಶ್ವಕರ್ಮ ಸಮುದಾಯದವರ ವಾಸ್ತುಶಿಲ್ಪ ರಚನಾ ಶೈಲಿಯು ಪ್ರತಿಯೊಬ್ಬರನ್ನು ಬೆರಗುಗೊಳಿಸುತ್ತದೆ ಎಂದರು.
ಪಂಚಮುಖಿ ವಿಶ್ವಕರ್ಮರನ್ನು ಸಮಾಜ ನಾನಾ ರೀತಿಯಲ್ಲಿ ನೆನೆಪಿನಲ್ಲಿಟ್ಟು ಕೊಳ್ಳುತ್ತದೆ. ಮರಗೆಲಸ, ಕಬ್ಬಿಣದ ಕೆಲಸ, ಚಿನ್ನ-ಬೆಳ್ಳಿ ತಯಾರಕರು, ಶಿಲ್ಪಕಲೆ, ಕಂಚು-ಹಿತ್ತಾಳೆ ಕುಸುರಿ ಕೆಲಸ ನಿರ್ವಹಿಸುವವರಿಗೆ ಮೂಲ ಪುರುಷ ವಿಶ್ವಕರ್ಮರು. ಇವರ ಉಲ್ಲೇಖ ನಮ್ಮ ಪುರಾಣಗಳಲಲಿ ವ್ಯಾಪಕವಾಗಿ ಬರುತ್ತ ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರಮೇಶ್, ಲೋಕೋಪಯೋಗಿ ಇಲಾಖೆ ಪ್ರದೀಪ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆರ್,ಶಿವಪ್ಪ, ಕೃಷಿ ಇಲಾಖೆ ಲಕ್ಷ್ಮಿ, ಪಶು ಇಲಾಖೆ ಕೃಷ್ಣಮೂರ್ತಿ, ರಾಜಸ್ವ ನಿರೀಕ್ಷಕ ವೇಣು ಗೋಪಾಲ್, ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀನಿವಾಸ ಚಾರಿ, ಪದಾಧಿಕಾರಿಗಳಾದ ಸುಕನ್ಯಾ ವಿನಾಯಕ ಮೂರ್ತಿ, ಜಿ.ವಿ.ಚಂದ್ರಶೇಖರ ವಿಷ್ಣುಚಾರಿ, ವೀರಚಾರಿ, ಮಮತ, ಅನಿತ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಮತ್ತು ಸಮುದಾಯ ಮುಖಂಡರು ಹಾಜರಿದ್ದರು.