Saturday, 21st September 2024

Chickballapur News: ಜನಪ್ರತಿನಿಧಿ ಸಂಸ್ಥೆಗಳ ಕಾರ್ಯ ವೈಖರಿ ಬಗ್ಗೆ ಅರಿವು ಮೂಡಿಸುವುದೇ ಶಾಲಾ ಸಂಸತ್-ಬಿಇಒ ವೆಂಕಟೇಶ್

ಬಾಗೇಪಲ್ಲಿ: ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಶಾಲಾ ಸಂಸತ್ತು ಸ್ಪರ್ಧೆ ಯಲ್ಲಿ ವಿವಿಧ ಶಾಲೆಗಳ ೬೦  ಮಕ್ಕಳು ಶಾಲಾ ಸಂಸತ್ತು ಸ್ಪರ್ಧೆಯಲ್ಲಿ ಭಾಗವಹಿಸಿ ಸಂಸತ್‌ನ ಕಾರ್ಯ ವೈಖರಿ ಬಗ್ಗೆ ನೈಜಾನುಭವ ಪಡೆದರು.

ಶಾಲಾ ಸಂಸತ್ತು ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ ಬಿಇಒ ವೆಂಕಟೇಶಪ್ಪ ಜನಪ್ರತಿನಿಧಿ ಸಂಸ್ಥೆಗಳ ಪಾತ್ರದ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಪ್ರಜಾಪ್ರಭುತ್ವದ ಬುನಾದಿಯನ್ನು ಭದ್ರಪಡಿಸುವ ಹಾಗೂ ಅಭಿಪ್ರಾಯ ಬೇದಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಮುಖ್ಯ. ಈ ಮೂಲಕ ತಾಳ್ಮೆ ಹಾಗೂ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಕೌಶಲ್ಯ ಬೆಳೆಸಲು ಶಾಲಾ ಸಂಸತ್ ನೆರವಾಗಲಿದೆ.

ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ವಿಧಾನಸಭೆಯ ಕಾರ್ಯ ಕಲಾಪಗಳ ಬಗ್ಗೆ ತಿಳುವಳಿಕೆ ಮೂಡಿಸುವುದು. ವಿದ್ಯಾರ್ಥಿ ದೆಸೆಯಿಂದಲೇ ವಾಕ್‌ಚಾತುರ್ಯ, ಸಮಯ ಪ್ರಜ್ಞೆ, ಸೂಕ್ಷ್ಮತೆ, ಧೈರ್ಯ ಮನೋಭಾವ, ಉತ್ತಮ ವಿಷಯ ಮಂಡನೆ ಸೇರಿ ನಾಯಕತ್ವ ಗುಣಗಳನ್ನು ಬೆಳೆಸುವುದು ಯುವ ಸಂಸತ್ ಸ್ಪರ್ಧೆಯ ಉದ್ದೇಶವಾಗಿದೆ ಎಂದು ಬಿಇಒ ವೆಂಕಟೇಶಪ್ಪ ತಿಳಿಸಿದರು

ಈ ಸಂದರ್ಭದಲ್ಲಿ ಇಓ ರಮೇಶ ,ಸಮನ್ವಯಾಧಿಕಾರಿ ವೆಂಕಟರಾಮ್,ಬಿ.ಆರ್.ಸಿ. ರಮೇಶ, ಪದ್ಮಾವತಿ, ಶಿಕ್ಷಕರಾದ ಶಿವಪ್ಪ, ರವೀಂದ್ರ,ಸಾಕ್ಷರತೆ ಶಿವಪ್ಪ, ಸಿ.ನಾರಾಯಣ ಸ್ವಾಮಿ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.