ಬಯಲುಸೀಮೆ ಭಾಗದಲ್ಲಿ ಬರದ ವಾತಾವರಣ ಸೃಷ್ಟಿಯಾಗುವ ಆತಂಕ ಮೂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೇಲೆ ಮುನಿಸಿ ಕೊಂಡಿರುವ ವರುಣ ದೇವನಿಗಾಗಿ ಜನತೆ ದೇವರ ಮೊರೆ ಹೋಗುತ್ತಿದ್ದಾರೆ.
ವರುಣನಿಗಾಗಿ ಮಲೆನಾಡಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದ್ದು, 3 ದಶಕದ ಬಳಿಕ ಕಾಫಿನಾಡಿನಲ್ಲಿ ಬರದ ಆತಂಕ ಮನೆ ಮಾಡಿದೆ. ಆದರೆ ಈ ಬಾರಿ 30 ವರ್ಷಗಳ ಬಳಿಕ ಮಳೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕೈ ಕೊಟ್ಟಿದ್ದು ವರುಣ ದೇವನ ದೇವರಿಗೆ ಪೂಜೆ ಮಾಡುವ ಸ್ಥಿತಿ ಬಂದಿದೆ.
ಮಳೆಗಾಗಿ ಮಲೆನಾಡ ಭಾಗವಾದ ಎನ್ ಆರ್ ತಾಲೂಕಿನ ಮೆಣಸೂರು ಗ್ರಾಮದಲ್ಲಿ ವಿಶೇಷವಾದ ಗಡಿ ಮಾರಿಗೆ ಪೂಜೆ ಮಾಡಿ ಇನ್ನಾದರೂ ಮಳೆ ಸುರಿಸು, ರೈತರ ಸಂಕಷ್ಟಕ್ಕೆ ನೆರವಾಗು ಎಂದು ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿದ್ದಾರೆ.
10 ವರ್ಷಗಳ ಬಳಿಕ ಮಳೆಗಾಗಿ ಗಡಿ ಮಾರಿಗೆ ಪೂಜೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಲಾಗಿದೆ.
ಒಟ್ಟಾರೆಯಾಗಿ, ಮಳೆ ಮಾತ್ರ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವಾಡಿಕೆಯಷ್ಟು ಸುರಿದಿಲ್ಲ. 30 ವರ್ಷಗಳ ನಂತರ ಚಿಕ್ಕಮಗಳೂರು ಜಿಲ್ಲೆಯ ಮೇಲೆ ಮುನಿಸಿಕೊಂಡಿರುವ ಮಳೆಗಾಗಿ ಮಲೆನಾಡಿಗರು ದೇವರ ಮೊರೆ ಹೋಗಿದ್ದಾರೆ.
Read E-Paper click here