Friday, 22nd November 2024

Chikkaballapur News: ಮಾರಕ ಕುಲಾಂತರಿ ತಳಿ ಬಿತ್ತನೆ ಬೀಜದ ವಿಷ ವರ್ತುಲಕ್ಕೆ ಸರಕಾರ ಅವಕಾಶ ನೀಡಬಾರದು- ಎಂ.ಆರ್.ಲಕ್ಷ್ಮೀನಾರಾಯಣ

ಚಿಕ್ಕಬಳ್ಳಾಪುರ: ಮಾರಕ ಕುಲಾಂತರಿ ತಳಿಯ ಬಿತ್ತನೆ ಬೀಜದ ವಿಷ ವರ್ತುಲಕ್ಕೆ ಅವಕಾಶ ನೀಡದಿರುವುದು, ಜಿಲ್ಲೆಯ ಕೆರೆಗಳಿಗೆ ಕೃಷ್ಣಾನದಿ ನೀರನ್ನು ತುಂಬಿಸುವುದು ಸೇರಿ ಇನ್ನಿತರೆ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ರೈತ ಸಂಘದಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟಿಸಲಾಯಿತು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಆರ್.ಲಕ್ಷ್ಮೀನಾರಾಯಣ್, ಹಿಂದಿನ ಸಾವಯವ ಪದ್ದತಿ ಯಲ್ಲಿ ಉತ್ಪಾದಿಸುತ್ತಿದ್ದ ಬಿತ್ತನೆ ಬೀಜವು ಸತ್ವಭರಿತ, ಗುಣಮಟ್ಟದಿಂದ ಕೂಡಿರುತ್ತಿತ್ತು. ಆದರೆ, ವಿದೇಶಿ ಖಾಸಗಿ ಕಂಪನಿಗಳು ಲಾಭದ ಲೆಕ್ಕಾಚಾರದಲ್ಲಿ ಹೊಸ ತಳಿಗಳನ್ನು ಸೃಷ್ಟಿಸಿ ದೇಶಕ್ಕೆ ಪೂರೈಸುವ ನಿಟ್ಟಿನಲ್ಲಿ ಯತ್ನಿಸು ತ್ತಿದ್ದು, ಇದರಿಂದ ಬೆಳೆಗಳಿಗೆ ಹೊಸ ಹೊಸ ರೋಗಗಳು ಆವರಿಸುವ ಜೊತೆಗೆ ರೈತರು ದಿವಾಳಿಯತ್ತ ಸಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಬಗರ್‌ಹುಕುಂ ಸಾಗುವಳಿ ಸಮಿತಿಗಳನ್ನು ರಚಿಸಿ ಹಲವು ದಶಕಗಳಿಂದ ದಾಖಲಾತಿಯಿಲ್ಲದೆ ಕೃಷಿ ಮಾಡುತ್ತಿರುವ ಅರ್ಹ ರೈತರಿಗೆ ಸಾಗುವಳಿ ಚೀಟಿಗಳನ್ನು ವಿತರಿಸಬೇಕು, ರೈತರ ಕೃಷಿ ಬೋರ್‌ವೆಲ್‌ಗಳಿಗೆ ಆಧಾರ್ ಜೋಡಣೆ ಮಾಡಿ ಖಾಸಗೀಕರಣ ಮಾಡಲು ಹೊರಟಿರುವ ವಿದ್ಯುತ್ ಇಲಾಖೆ ತನ್ನ ಆದೇಶ ಹಿಂಪಡೆಯಬೇಕು, ರೈತ ಕೃಷಿ ಪಂಪ್‌ಸೆಟ್‌ ಗಳಿಗೆ ಈ ಹಿಂದಿನಂತೆ ಅಕ್ರಮ ಸಕ್ರಮದಡಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮಳೆಯ ಪ್ರಮಾಣವು ಕುಂಠಿತಗೊAಡು ಭೂಮಿಯಲ್ಲಿ ತೇವಾಂಶ ಇಲ್ಲವಾಗಿದೆ. ಇದರಿಂದ ಬೆಳೆಗಳು ಮೊಳಕೆಯಲ್ಲಿಯೇ ಒಣಗುವ ಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಸರ್ಕಾರ ಅತಿವೃಷ್ಟಿ, ಅನಾವೃಷ್ಟಿ ವಿಪತ್ತು ನಿರ್ವಜಣಾ ಪ್ರಾಧಿಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ,ಜಂಗಮಕೋಟೆ ಹೋಬಳಿ ಅರಿಕೆರೆ ಸೇರಿ ನಾನಾ ಗ್ರಾಮಗಳ ಮುಗ್ದ ಅಮಾಯಕ ರೈತರಿಗೆ ಆಸೆ ಆಮಿಷಗಳನ್ನು ತೋರಿಸಿ 525 ಎಕರೆ ಭೂಮಿಯನ್ನು ಮಧ್ಯವರ್ತಿಗಳು ಲಪಟಾಯಿಸಿದ್ದಾರೆ.ಈಗಳೂ ಕೂಡ ಆ ಭೂಮಿ ರೈತರ ಸ್ವಾಧೀನದಲ್ಲಿಯೇ ಇದ್ದು ಪಹಣಿ ದಾಖಲೆಗಳಲ್ಲಿ ಪಿಎಸ್‌ಐಎಲ್ ಕಂಪನಿ ಎಂದು ನಮೂದಾಗಿದೆ.ಈ ಜಮೀನು ಕೆಐಎಡಿಬಿ ಭೂಸ್ವಾಧೀನಕ್ಕೆ ಒಳಪಟ್ಟಿದೆ. ಸರಕಾರ ಮೂಲರೈತರನ್ನು ಗುರುತಿಸಿ ಪರಿಹಾರದ ಹಣವನ್ನು ನೀಡುವಾಗ ಅವರಿಗೇ ನೀಡಬೇಕು ಎಂದು ಆಗ್ರಹಿಸಿದರು.

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಕರ್ಪ ಪಡೆಯಲು ರೂಪಿಸಿರುವ ನೂತನ ನೀತಿ ಬೇಡ. ಈ ಹಿಂದೆ ಇದ್ದ ಮಾನದಂಡಗಳಂತೆ ಅಕ್ರಮ ಸಕ್ರಮ ಯೋಜನೆಯನ್ನೇ ಮುಂದುವರೆಸಿ ಎಂದು ಒತ್ತಾಯಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಸಣ್ಣ ಸಣ್ಣ ರೈತರನ್ನು ಒಕ್ಕಲೆಬ್ಬಿಸುತ್ತಿದ್ದು, ಈನಡೆಯನ್ನು ತಕ್ಷಣವೇ ನಿಲ್ಲಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಅತಿಕ್ರಮ ಮಾಡಲು ಪ್ರಯತ್ನ ಪಡು ತ್ತಿದ್ದು ಇಲಾಖೆ ಜಂಠಿ ಸರ್ವೇ ಮಾಡುವವರೆಗೂ ಯಾವುದೇ ರೀತಿಯಲ್ಲಿ ರೈತರನ್ನು ಒಕ್ಕಲೆಬ್ಬಿಸದಂತೆ ಕ್ರಮ ಇದೇ ವೇಳೆ ಸುಮಾರು ೧೦ಕ್ಕೂ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ರವೀಂದ್ರ ಅವರಿಗೆ ಮನವಿ ಸಲ್ಲಿಸಿದರು.

ಗೌರಿಬಿನೂರು ತಾಲೂಕು ಅಧ್ಯಕ್ಷ ಲೋಕೇಶ್ ಗೌಡ, ಸಂಘದ ಸನತ್ ಕುಮಾರ್, ರಾಮಚಂದ್ರರೆಡ್ಡಿ, ರಾಜಣ್ಣ, ಮುದ್ದರಂಗಪ್ಪ, ಸುರೇಶ್‌ಕುಮಾರ್, ಮುನೇಗೌಡ ನವೀನಚಾರಿ, ಸಂತೋಷ್, ಸತೀರ್ಶ, ವಸಂತ, ವೆಂಕಟೇಶ್, ಮುನಿಯಪ್ಪ, ಆವಲರೆಡ್ಡಿ, ನವೀನ್, ಶಶಿಕುಮಾರ್, ಅನಂತರಾಜು, ಕದಿರೇಗೌಡ, ಆಂಜನಪ್ಪ, ರಮೇಶ್, ಎಸ್.ಎನ್.ಮಾರಪ್ಪ ಇದ್ದರು.