ಗೌರಿಬಿದನೂರು: ನಗರದ ಕೋಟೆಯಲ್ಲಿ ಇದೇ ಮೊದಲ ಬಾರಿಗೆ ನವರಾತ್ರಿ ಉತ್ಸವದ ಅಂಗವಾಗಿ ಪಿನಾಕಿನಿ ಯೂತ್ಸ್ ವತಿಯಿಂದ, ದುರ್ಗಾ ಮಾತೆಯನ್ನು ಪ್ರತಿಷ್ಟಾಪನೆ ಮಾಡಿ ಅತ್ಯಂತ ಶ್ರದ್ದಾಭಕ್ತಿಯಿಂದ ಪೂಜೆ ಪುನಸ್ಕಾರಗಳನ್ನು ನೆರೆವೇರಿಸಲಾಗುತ್ತಿದೆ.
ಇದಕ್ಕಾಗಿ ಸುಮಾರು ಅರವತ್ತು ಅಡಿ ಎತ್ತರದ ಬಂಗಾರ ವರ್ಣದ ಮಂಟಪವನ್ನು ನಿರ್ಮಿಸಲಾಗಿದ್ದು,ದುರ್ಗಾ ಮಾತೆಯ ಮೂರ್ತಿಯ ನಿರ್ಮಾಣಕ್ಕಾಗಿ ದೇಶದ ವಿವಿಧ ಭಾಗಗಳಿಂದ ಏಳು ಪವಿತ್ರ ನದಿಗಳ ಮಣ್ಣನ್ನು ಬಳಸಲಾಗಿದೆ ಎಂಬ ಮಾಹಿತಿಯಿದೆ.
ಮೂರ್ತಿಯನ್ನು ದುರ್ಗಾ ಮಾತೆಯ ಆರಾಧಕರಾದ ಸಪ್ಪನ್ ಸ್ವಾಮೀಜಿಯ ನೇತೃತ್ವದಲ್ಲಿ ಒಡಿಸ್ಸಾ ರಾಜ್ಯದ ನುರಿತ ಕಲಾವಿದರು ಸುಮಾರು ಒಂದು ತಿಂಗಳ ಕಾಲ ರಾತ್ರಿ ಹಗಳೆನ್ನದೆ ಶ್ರಮವಹಿಸಿ ಸುಂದರವಾಗಿ ನಿರ್ಮಿಸಿಕೊಟ್ಟಿದ್ದಾರೆ.
ನವರಾತ್ರಿ ಅಂಗವಾಗಿ ದುರ್ಗಾ ಮಾತೆಯ ದರ್ಶನಕ್ಕಾಗಿ ಪ್ರತಿದಿನವೂ ಸಾವಿರಾರು ಮಂದಿ ಭಕ್ತರು ಅದರಲ್ಲೂ ವಿಶೇಷವಾಗಿ ಮಹಿಳೆಯರು ದುರ್ಗಾ ಮಾತೆಯ ಮಂಟಪಕ್ಕೆ ಆಗಮಿಸಿ,ತಾಯಿ ದುರ್ಗಾ ಮಾತೆಯನ್ನು ಪೂಜಿಸಿ ತಮ್ಮ ಇಷ್ಟಾರ್ಥಗಳನ್ನು ನೆರೆವೇರಿಸುವಂತೆ ಬೇಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.ನಗರದ ಪ್ರಮುಖ ರಸ್ತೆಯನ್ನು ಜಗಮಗಿಸುವ ವಿದ್ಯುತ್ ದೀಪಾಲಂಕಾರದಿ0ದ ಸಿಂಗರಿಸಲಾಗಿದೆ.
ಪ್ರತಿದಿನವೂ ಸಂಜೆ ಮಹಾ ಮಂಗಳಾರತಿ ನಂತರ ಭಕ್ತಾಧಿಗಳಿಗೆ ತೀರ್ಥ ಪ್ರಸಾದವನ್ನು ವಿನಿಯೋಗಸಲಾಗುತ್ತಿದೆ. ಕಳೆದ ಒಂದು ತಿಂಗಳಿ0ದ ನವರಾತ್ರಿ ಉತ್ಸವದ ಯಶಸ್ವಿಗಾಗಿ ಹಗಳಿರುಳು ಶ್ರಮಿಸುತ್ತಿರುವ ವಿ.ಆರ್.ಮಂಜುನಾಥ್ ನೇತೃತ್ವದಲ್ಲಿ ಮಹೇಂದ್ರ, ರಾಜುರೆಡ್ಡಿ, ಲಕ್ಷ್ಮಣ್, ಅನಿಲ್, ಹರೀಶ್, ಅರವಿಂದ್ ಬಾಬು, ಆನಂದ್, ಕೌಶಲ್, ನ0ದಕಿಶೋರ್ ಹಾಗೂ ಇನ್ನಿತರರ ಕಾರ್ಯಕ್ಕೆ ಸಾರ್ವಜನಿಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಕಂಡು ಬರುತ್ತಿದೆ.