Sunday, 24th November 2024

Chikkaballapur News: ಸರ್ವ ಸಮಾನತೆ ಮತ್ತು ಸಹಿಷ್ಣುತೆ ಸನಾತನ ಸಂಸ್ಕೃತಿಯ ತಿರುಳು: ಸದ್ಗುರು ಶ್ರೀ ಮಧುಸೂದನ ಸಾಯಿ

ಚಿಕ್ಕಬಳ್ಳಾಪುರ : ಸೃಷ್ಟಿಕರ್ತನಾದ ಸವಸಕ್ತನು ಸರ್ವತ್ರ ವ್ಯಾಪಿಯಾಗಿದ್ದಾನೆ. ಕಾಯಾ ವಾಚಾ ಮನಸಾ ನುಡಿದಂತೆ ನಡೆದು ಅನುಷ್ಠಾನಕ್ಕೆ ತರುವ, ಆ ಮೂಲಕ ದಿವ್ಯತ್ವಕ್ಕೆ ಏರುವ ಸುವರ್ಣ ಅವಕಾಶ ಸನಾತನ ಸಂಸ್ಕೃತಿಯಲ್ಲಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.

ತಾಲೂಕಿನ ಮುದ್ದೇಹಳ್ಳಿಯ ಶ್ರೀಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ದಸರಾ ಮಹೋತ್ಸವದ ಯಾಗಶಾಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜಗತ್ತಿನ ಬೇರೆ ಯಾವುದೇ ಸಂಸ್ಕೃತಿಯಲ್ಲಿ  ಈ ರೀತಿಯ ಸರಳ ಸುಲಭ ಸುಲಭ್ಯವಾದ ಚಿಂತನೆಗಳಿದ್ದರೂ ಗೌಣ ವಾಗಿದೆ. ಭಾರತದ ಸಂಸ್ಕೃತಿಯಲ್ಲಿ ಪ್ರತಿಯೊಬ್ಬನಿಗೂ ಜ್ಞಾನವನ್ನು ಪಡೆದು ಸದಾಚಾರ ಸಂಪನ್ನನಾಗಿ ಸಂತೃಪ್ತ ಜೀವನ ನಡೆಸುವ ಅವಕಾಶವಿದೆ. ಇದೇ ಅಂಶಗಳನ್ನು ದೇಶದಾದ್ಯಂತ ಆಗಿ ಹೋದ ಸಂತರು ಶರಣರು ತಮ್ಮ ದಿವ್ಯ ಬೋಧನೆಯಲ್ಲಿ ತಿಳಿಸಿದ್ದಾರೆ ಎಂದರು.

ಅವರೆಲ್ಲರ  ಕಳಕಳಿ ಅಂತರAಗ ಶುದ್ಧಿಯ ವಿಚಾರವಾಗಿದೆ. ಜನ್ಮತಹ ಎಲ್ಲರೂ ಜಂತುಗಳೇ, ಆದರೆ ಸದಾಚಾರಗಳ ಅನುಷ್ಠಾನದಿಂದ ಮಾನವರಾಗುತ್ತಾರೆ. ತೋರಿಕೆಯ ಅನುಷ್ಠಾನದಿಂದ ಸಾವಿರಾರು ಜನ್ಮವೆತ್ತಿ ಬಂದರು ಮುಕ್ತಿ ದೊರೆಯದು. ಸನಾತನ ಸಂಸ್ಕೃತಿಯೆAದು ವರ್ತಮಾನ ಕಾಲದಲ್ಲೂ  ತಾರತಮ್ಯ ತೋರುವ ದೇಗುಲಗಳಲ್ಲಿ ದರ್ಶನ ಪಡೆಯುವ ಧಾರ್ಮಿಕ ಸ್ವಾತಂತ್ರ‍್ಯಗಳಿಗೆ ನಿರ್ಬಂಧವಿದೆ. ಆದರೆ ಈ ರೀತಿಯ  ಪಕ್ಷಪಾತದ ಧೋರಣೆ ಸನಾತನ ಸಂಸ್ಕೃತಿಯ  ಭಾಗವಲ್ಲ. ಇಂತಹ ಅನಿಷ್ಟ ಪರಂಪರೆಯು  ಸಮಾಜದಿಂದ ಪ್ರತ್ಯೇಕವಾದರೆ ತಾರತಮ್ಯದ  ಪ್ರಮೇಯವೇ ಉದ್ಭವಿಸುವುದಿಲ್ಲ. ಸಹಿಷ್ಣುತೆಯ ಪಾಠವನ್ನು ಎಲ್ಲರೂ ಕಲಿಯಬೇಕು. ಶ್ರದ್ಧಾ ಕೇಂದ್ರಗಳಲ್ಲಿ ಜಾತಿ ನೀತಿಗಳೆಂಬ ತಡೆಗೋಡೆ ಯಾರಿಗೂ ಅಡ್ಡಿಯಾಗಬಾರದು. ಸರ್ವ ಸಮಾನತೆಯನ್ನು ಕಾಪಾಡುತ್ತಾ ಎಲ್ಲರೊಂದಿಗೆ ಬೆರೆತು ಬಾಳುವುದೇ ಸನಾತನ ಧರ್ಮ, ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತಿಳಿಸಿದರು.

ದಸರಾ ಮಹೋತ್ಸವದ ಪ್ರಯುಕ್ತ ನಡೆಯುತ್ತಿರುವ ನವರಾತ್ರಿ ಹೋಮದ ಭಾಗವಾಗಿ ನಡೆದ ಗಾಯತ್ರಿ ಹೋಮ ಮತ್ತು ಲಕ್ಷ್ಮೀನರಸಿಂಹ ಹವನದ  ಪೂರ್ಣಹುತಿಯನ್ನು, ಹವಿಸ್ಸನ್ನು ದೇಶದ ಜನತೆಯ ಪರವಾಗಿ ಕಲ್ಯಾಣ ಕರ್ನಾಟಕದ ಸಮಾಜ ಸುಧಾರಕ ನಿಕಟ ಪೂರ್ವ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯ  ಹಿರಿಯ ಮುತ್ಸದ್ದಿ ಶ್ರೀ ಬಸವರಾಜ ಪಾಟೀಲ್ ಸೇಡಂ ಅವರು ಅರ್ಪಿಸಿ ಮಾತನಾಡಿ ಮಂಗಳ ಪ್ರಸನ್ನವಾದ ನವರಾತ್ರಿಯ ಸಂದರ್ಭದಲ್ಲಿ ಸತ್ಯ, ಧರ್ಮ ಮತ್ತು ಸೇವೆಗಾಗಿ ಸಮರ್ಪಿತವಾದ ಧಾರ್ಮಿಕ ವಿಧಿ ವಿಧಾನಗಳು ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ಯನ್ನು ತರುತ್ತವೆ. ನಾಡ ನುಡಿಗೆ ನಾಡ ಗುಡಿಗೆ   ಸಂತೋಷದ ಬೆಳಕು ಬರಲಿ, ಸುಖ ಶಾಂತಿ ನೆಮ್ಮದಿಗಳು ಇಡೀ ಪ್ರಪಂಚಕ್ಕೆ  ದೊರೆಯುವಂತಾಗಲಿ, ಎಂದು ಆಶಿಸಿದರು.

ಮಾಜಿ ಉಪಮುಖ್ಯಮಂತ್ರಿ ಹಾಲಿ ವಿಧಾನಸಭಾ ಸದಸ್ಯ ಡಾ. ಅಶ್ವತ್ಥ್ ನಾರಾಯಣ್  ಮಹಾರುದ್ರ ಯಾಗದ ಪೂರ್ಣಾಹುತಿಗೆ  ಸಹಧರ್ಮಿನಿಯ ಜೊತೆಗೂಡಿ ಹವಿಸ್ಸನ್ನು ಸಮರ್ಪಿಸಿದರು. ನಂತರ ಮಾತನಾಡಿ ತಮ್ಮ ಸಂದೇಶ ದಲ್ಲಿ ದುಷ್ಟಸಂಹಾರ ಶಿಷ್ಟ ಪರಿಪಾಲನೆಯ  ಪರಿಕಲ್ಪನೆಯಲ್ಲಿ ಪರಂಪರಾನುಗತವಾಗಿ ನಡೆದು ಬಂದ ಆಚರಣೆ ಗಳು ಸಮಾಜವನ್ನು ಸುವ್ಯವಸ್ಥಿತವಾಗಿ ನಡೆದುಕೊಂಡು ಹೋಗಲು ಸಹಕರಿಸುತ್ತವೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ವಿವಿಧ ಕ್ಷೇತ್ರಗಳಲ್ಲಿ ಸೇವಾ ಕಾರ್ಯವನ್ನು ಕೈಗೊಂಡು ಸಮಾಜಕ್ಕೆ ಮಾರ್ಗದರ್ಶನ ಮಾಡು ತ್ತಿದ್ದಾರೆ. ಇದು ಜಗತ್ತಿಗೊಂದು ಮಾದರಿ. ಜನಪ್ರತಿನಿಧಿಯಾದ ನನಗೂ ಒಂದು ಪಾಠ, ಎಂದು ತಿಳಿಸುತ್ತಾ  ಮುದ್ದೇನ ಹಳ್ಳಿಯಲ್ಲಿ ನಡೆಯುತ್ತಿರುವ ಪುಣ್ಯ ಕಾರ್ಯದಿಂದಾಗಿ ಜಗತ್ತಿಗೆ ಸದ್ಬುದ್ಧಿ, ಸಂತೃಪ್ತಿ, ಸನ್ಮತಿ ದೊರೆಯಲಿ, ಎಂದು ಆಶಿಸಿದರು.

ನವರಾತ್ರಿಯ ಎಂಟನೇ ದಿನವಾದ ಇಂದು  ದುರ್ಗಾಮಾತೆಯ ಆಷ್ಟಮ ಅವತಾರದ ನಿಮಿತ್ತ ಕುಮಾರಿ ಪೂಜೆ ನಡೆಯುವ ಸಂಪ್ರದಾಯವಿದೆ. ಅದರಂತೆ ಸಂಪ್ರದಾಯ ರೀತ್ಯಾ ಕುಮಾರಿ ಪೂಜೆ ನೆರವೇರಿತು.  ದುರ್ಗಾರ್ಚಕರು ಮತ್ತು ಮುತ್ತೆöÊದೆಯರು ಈ ವಿಧಿ ವಿಧಾನಗಳನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು. ದುರ್ಗಾಮಾತೆಯ  ಪೂಜೆಯು ನಾನಾ ರೀತಿಯ ಅರ್ಪಣೆಗಳೊಂದಿಗೆ ನೆರವೇರಿತು.

ಯಜ್ಞ ಸಭೆಯ ವೇದಿಕೆಯಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ ಬಿ ಎನ್ ನರಸಿಂಹಮೂರ್ತಿ ಉಪಸ್ಥಿತರಿದ್ದು, ಪ್ರಾಸ್ತಾವಿಕ ಮಾತುಗಳನ್ನಾಡಿ ಯಜ್ಞ ಸಭೆಗೆ ಆಗಮಿಸಿದ ಅತಿಥಿ ಗಣ್ಯರನ್ನು  ಪರಿಚಯಿಸಿ, ಸಭೆಯ ದಿಕ್ಸೂಚಿ ಭಾಷಣ ಮಾಡಿದರು.