Sunday, 24th November 2024

Chikkaballapur News: ಛಲವಾದಿ ಮಹಾಸಭಾ ಉಳಿದ ಇತರೆ ಛಲವಾದಿ ಸಂಘಟನೆಗಳಿಗೆ ತಾಯಿ ಇದ್ದಂತೆ: ಟಿ.ರಾಮಪ್ಪ

ಚಿಕ್ಕಬಳ್ಳಾಪುರ: ಶೋಷಿತ ಸಮುದಾಯಗಳಲ್ಲಿ ಒಂದಾದ ಛಲವಾದಿ ಮಹಾಸಭಾಕ್ಕೆ ಬಲಗೈ ಸಮಾಜದ ಬಹು ದೊಡ್ಡ ಸಂಘಟನೆ ಆಗಿದೆ. ಛಲವಾದಿ ಮಹಾಸಭಾ ಸಂಘಟನೆಯು ಎಲ್ಲಾ ಉಳಿದ ಛಲವಾದಿ ಸಂಘಟನೆಗಳಿಗೆ ತಾಯಿ ಇದ್ದಂತಿದೆ ಇದನ್ನು ಇನ್ನಷ್ಟು ಬಲಗೊಳಿಸೋಣ ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಟಿ.ರಾಮಪ್ಪ ಹೇಳಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿ, ‘ಸಂಘಟನೆ ಬಲಿಷ್ಠ ವಾದಷ್ಟು ಸಮಾಜ ಅಭಿವೃದ್ಧಿಯತ್ತ ಹೋಗಲು ಸಾಧ್ಯ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ ಸೂತ್ರಗಳನ್ನು ಉಸಿರಾಗಿಸಿಕೊಳ್ಳಬೇಕು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸಮಾಜದ ಶ್ರೇಯಸ್ಸು ಮತ್ತು ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಉಪಾಧ್ಯಕ್ಷರಾಗಿ ಗಂಗರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ  ಟಿ.ಎಂ. ನರಸಿಂಹಪ್ಪ, ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾಗಿ ಮುನಿನಾರಾಯಣಪ್ಪ,ಚಿಂತಾಮಣಿ ತಾಲ್ಲೂಕು ಅಧ್ಯಕ್ಷರಾಗಿ ಜಿ.ಶ್ರೀನಿವಾಸ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷರಾಗಿ ದೇವರಾಜು ಮತ್ತು ಬಾಗೇಪಲ್ಲಿ ತಾಲ್ಲೂಕು ಅಧ್ಯಕ್ಷರಾಗಿ ಓಬಳೇಶ ಅವರನ್ನು ರಾಜ್ಯಾಧ್ಯಕ್ಷೆ ಶ್ರೀಮತಿ ವಾಣಿ ಕೆ ಶಿವರಾಮ್ ಆದೇಶ ಮೇರೆಗೆ ಜಿಲ್ಲಾಧ್ಯಕ್ಷನಾದ ಟಿ.ರಾಮಪ್ಪ ನೇಮಕವಾಡಿದ್ದಾರೆ ಎಂದು ತಿಳಿಸಿದ ಅವರು ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳ ಹೆಸರುಗಳನ್ನು ಜಿಲ್ಲಾ ಅಧ್ಯಕ್ಷರಾದ ನನ್ನ ಸಮೂಖದಲ್ಲಿ ನೇಮಕಗೊಳಿಸಿ ಆಯಾ ತಾಲ್ಲೂಕುಗಳಲ್ಲಿ ಕಾರ್ಯನಿರತರಾಗಿ ಎಂದು ಆದೇಶಿದ್ದು, ನಮ್ಮ ಛಲವಾದಿ ಮಾರ್ ಮಹಾಸಭಾ ಸಂಘದ ಅಭಿವೃದ್ಧಿಗೆ ಜೊತೆಯಾಗಿ ನಿಲ್ಲಲು ಸೂಚಿಸಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ  ಆಯ್ಕೆಯಾದ ಟಿ.ಎಂ.ನರಸಿಂಹಪ್ಪ ಮಾತನಾಡಿ, ಛಲವಾದಿ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಕೆ. ಶಿವರಾಮು ಅವರು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಅನುದಾನ ಪಡೆದು ಬೆಂಗಳೂರಿನ ಕೆಂಗೇರಿಯಲ್ಲಿ ಸಮುದಾಯದ ಬೃಹತ್ ಸಮುದಾಯ ಭವನ ನಿರ್ಮಾಣ ಮಾಡಿಸುತ್ತಿದ್ದರು. ಈಗ ಆ ಸಮುದಾಯ ಭವನ ಪೂರ್ಣಗೊಳ್ಳುತ್ತಿದೆ, ಅಲ್ಲಿ ಶಿವರಾಮು ಅವರ ಆಶಯದಂತೆ ಛಲವಾದಿ ಸಮುದಾಯದ ಮಕ್ಕಳಿಗೆ ಐಎಎಸ್,  ಐಪಿಎಸ್, ಕೆಎಎಸ್, ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು ಎಂದರು.

ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಗಂಗರಾಜು ಮಾತನಾಡಿ, ಛಲವಾದಿ ಸಮುದಾಯಕ್ಕೆ ಐತಿಹಾಸಿಕ ಇತಿಹಾಸ ವಿದೆ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರ ಸಹಕಾರದಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಾ ಸಂಟನೆಯನ್ನು ಬಲಗೊಳಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮುನಿನಾರಾಯಣಪ್ಪ ಜಿ.ಶ್ರೀನಿವಾಸ, ದೇವರಾಜು, ಓಬಳೇಶ ಮತ್ತಿತರರು ಇದ್ದರು.

ಇದನ್ನೂ ಓದಿ: Chikkaballapur News: ಗೌರಿಬಿದನೂರು ನಗರದಲ್ಲಿ ದುರ್ಗಾಮಾತೆ ಪ್ರತಿಷ್ಟಾಪಿಸಿ ದಸರಾ ಅಚರಣೆ