ಗೆಳೆಯರ ಬಳಗದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ತಹಶೀಲ್ದಾರ್ ಮಹೇಶ್ ಪತ್ರಿ
ಚಿಕ್ಕಬಳ್ಳಾಪುರ : ಹುಟ್ಟು ಹಬ್ಬ ಎನ್ನುವುದು ಭವಿಷ್ಯದ ಬದುಕಿನ ಎಚ್ಚರಿಕೆಯ ಗಂಟೆಯಾಗಿದೆ.ನಾನು ಒಂದು ತಾಲೂಕಿನ ದಂಡಾಧಿಕಾರಿ ಆಗಿದ್ದರೂ ಕೂಡ ಗೆಳೆಯರ ಸಮ್ಮುಖದಲ್ಲಿ ನನ್ನ ಹುಟ್ಟಿದ ದಿನ ಆಚರಿಸಿಕೊಳ್ಳುವುದು ಅತ್ಯಂತ ಸಂತೋಷವನ್ನು ತರುವ ವಿಚಾರವಾಗಿದೆ ಎಂದು ಗೌರಿಬಿದನೂರು ತಾಲೂಕು ತಹಶೀಲ್ದಾರ್ ಮಹೇಶ್ ಎಸ್ ಪತ್ರಿ ಅಭಿಪ್ರಾಯಪಟ್ಟರು.
ನಗರದ ಗೋಲ್ಡನ್ ಗ್ಲೀಮ್ಸ್ ಕಾಲೇಜಿನಲ್ಲಿ ಪ್ರಾಂಶುಪಾಲ ಪ್ರೊ.ಮುನಿಕೃಷ್ಣ, ಪ್ರೊ.ಮೋಹನ್ ಮತ್ತು ತಂಡ ಏರ್ಪಡಿ ಸಿದ್ದ ತಹಶೀಲ್ದಾರ್ ಮಹೇಶ್‌ಪತ್ರಿ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ದರು.
ಅಧಿಕಾರಿ ಇರಲಿ ಸಾಮಾನ್ಯ ನಾಗರೀಕರೇ ಆಗಿರಲಿ ತಮ್ಮ ಜೀವಿತಾವಧಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಯಾರಿಗೂ ತೊಂದರೆ ಕೊಡದೆ ನಾಲ್ಕು ಮಂದಿಗೆ ನೆರವಾಗುವ ಹಾಗೆ ಬಾಳಿದರೆ,ಈ ಜನ್ಮಕ್ಕೆ ಸಾರ್ಥಕ್ಯ ಪ್ರಾಪ್ತಿಯಾಗುತ್ತದೆ.ಈ ನಡುವೆ ಪ್ರತಿ ವರ್ಷ ಬರುವ ಹುಟ್ಟುಹಬ್ಬದ ದಿನ ಮತ್ತು ಆಮೂಲಕ ನಡೆಸುವ ಆಚರಣೆಗಳು ನಮ್ಮ ಜವಾಬ್ದಾರಿ ಯನ್ನು ಹೆಚ್ಚುಮಾಡಿ, ಎಚ್ಚರಿಕೆಯ ಹೆಜ್ಜೆಗಳನ್ನು ಇಡಲು ಅವಕಾಶ ಮಾಡಿಕೊಡುತ್ತವೆ. ಚಿಕ್ಕಬಳ್ಳಾಪುರದ ಸ್ನೇಹಿತರೆಲ್ಲಾ ಕೂಡಿ ಅಭಿಮಾನದಿಂದ ನನ್ನನ್ನು ಇಲ್ಲಿಗೆ ಕರೆಸಿಕೊಂಡು ಸರಳವಾಗಿ ನನ್ನಹುಟ್ಟು ಆಚರಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಪ್ರಾ0ಶುಪಾಲ ಪ್ರೊ.ಮುನಿಕೃಷ್ಣಪ್ಪ ಮಾತನಾಡಿ ಮಿತ್ರರಾದ ಮಹೇಶ್ ಪತ್ರಿ ದಂಪತಿಗಳು ತಾಲೂಕು ದಂಡಾಧಿಕಾರಿ ಗಳಾದರೂ ಯಾವ ಹಮ್ಮುಬಿಮ್ಮು ತೋರದೆ ವಿಶ್ವಾಸಕ್ಕೆ ಬೆಲೆಕೊಟ್ಟು ನಮ್ಮ ಕಾಲೇಜಿಗೆ ಬಂದಿದ್ದಾರೆ. ನಮ್ಮ ಗೆಳೆಯರಾದ ಮಹೇಶ್ ಪತ್ರಿ ದಂಪತಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಇನ್ನೂ ಎತ್ತರದ ಸ್ಥಾನಗಳಿಗೆ ಏರುವ ಮೂಲಕ ಜನಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಲಿ ಎಂದು ಹಾರೈಸಿದರು.
ಈ ವೇಳೆ ವಕೀಲ ಮಂಜುನಾಥ್, ಆಕಾಶ್ ಕಾಲೇಜಿನ ಡಾ.ಆನಂದ್, ಇಂಗ್ಲೀಷ್ ಉಪನ್ಯಾಸಕ ನರಸಿಂಹ ಮೂರ್ತಿ, ನ್ನಡ ಉಪನ್ಯಾಸಕ ಪಾಟೀಲ್, ಮುನಿರಾಜು ಎಂ ಅರಿಕೆರೆ ಮತ್ತಿತರರು ಇದ್ದರು.