Friday, 25th October 2024

Chikkaballapur News: ಡಿವೈಎಸ್‌ಪಿಗೆ ಮನವಿ ಸಲ್ಲಿಸಿದ ಅಂಬೇಡ್ಕರ್ ಸೇನೆ ಮುಖಂಡರು ಸoಘಟನೆ ಮುಖಂಡರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸದಂತೆ ಆಗ್ರಹ

ಚಿಕ್ಕಬಳ್ಳಾಪುರ: ಚುನಾವಣೆ ಪೂರ್ವ ಮತ್ತು ನಂತರದಲ್ಲಿ ದಲಿತರನ್ನು  ದೇವರು ಎನ್ನುತ್ತಿದ್ದ ಶಾಸಕ ಪ್ರದೀಪ್ ಈಶ್ವರ್ ಈಗ ಅವರ ವಿರುದ್ದವೇ ತಿರುಗಿಬಿದ್ದಿದ್ದು, ಸಂಘಟನೆಯ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸುತ್ತಿದ್ದಾರೆಂದು, ಇದನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿ ಮಹಾನಾಯಕ ಡಾ ಬಿಆರ್ ಅಂಬೇಡ್ಕರ್ ಸೇನೆ ಮುಖಂಡರು ಡಿವೈಎಸ್ಪಿ ಅವರಿಗೆ ಮನವಿಪತ್ರ ಸಲ್ಲಿಸಿದರು.

ನಗರದ ಡಿವೈಎಸ್ಪಿ ಕಚೇರಿಗೆ ತೆರಳಿದ ಮಹಾನಾಯಕ ಡಾ ಬಿಆರ್ ಅಂಬೇಡ್ಕರ್ ಸೇನೆಯ ನೂರಾರು ಕಾರ್ಯ ಕರ್ತರು ಮುಖಂಡರು ಶಾಸಕರ ಚಿತಾವಣೆಗೆ ಒಳಗಾಗಿ ಅನುಮತಿ ಪಡೆದು ಪ್ರತಿಭಟನೆ ಮಾಡುತ್ತಿದ್ದ ಮುಖಂಡರ ಮೇಲೆ ದುರುದ್ದೇಶದಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸಿ ದಲಿತ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ತಿಂಗಳ ಹಿಂದೆ ಮಹಾನಾಯಕ ಅಂಬೇಡ್ಕರ್ ಸೇನೆ ಸಹಯೋಗದಲ್ಲಿ ದಲಿತಪರ ಸಂಘಟನೆ ವತಿಯಿಂದ ಎಸ್ಸಿ ಎಸ್ಟಿ ಬಚಾವೋ ಪ್ರದೀಪ್ ಈಶ್ವರ್ ಹಠಾವೋ ಎಂಬ ಕಾರ್ಯಕ್ರಮ ಮಾಡಲಾಗಿತ್ತು.ಇದಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದೇ ಪ್ರತಿಭಟನೆ ಆಯೋಜನೆ ಮಾಡಲಾಗಿತ್ತು, ಮಾಜಿ ಶಾಸಕ ಎಸ್.ಎಂ.ಮುನಿ ಯಪ್ಪ ಅವರ ಮಗ ಯುವಕಾಂಗ್ರೆಸ್‌ನ ಎಸ್.ಎಂ.ಜಗದೀಶ್ ಅವರ ಬೆಳವಣಿಗೆ ಸಹಿಸದ ಶಾಸಕರ ವಿರುದ್ಧ ನಡೆಸಿದ ಪ್ರತಿಭಟನೆ ಇದಾಗಿತ್ತು.ಇದೇ ಕಾರಣಕ್ಕೆ ಪ್ರತಿಭಟನೆ ನಡೆಸಿದ ದಲಿತ ಮುಖಂಡರ ಮೇಲೆ ಸುಳ್ಳು ದೂರು ದಾಖಲಿಸಿ ಕೊಂಡು ಪ್ರಶ್ನಿಸುವ ದನಿಗಳನ್ನು ಹತ್ತಿಕ್ಕುವ ಕೆಲಸವನ್ನು ಪೊಲೀಸ್ ಇಲಾಖೆ ಬಳಸಿಕೊಂಡು ಮಾಡಿದ್ದಾರೆ ಎಂದು ದೂರಿದರು.

ಸೆಪ್ಟೆಂಬರ್ ೧೯ ರಂದು ನಡೆದ ಪ್ರತಿಭಟನೆಯಲ್ಲಿ ಚಿಕ್ಕಬಳ್ಳಾಪುರ ದಲಿತ ಜನರಿಗೆ ಅನ್ಯಾಯವಾಗಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹಠಾವೋ ಎಸ್ಸಿ ಎಸ್ಟಿ ಗಳು ಬಚಾವೋ ಎಂಬ ಪ್ರತಿಭಟನೆಗೆ ನಡೆಸಿದ್ದ ವೇಳೆ ರಾಜಕೀಯ ದುರದ್ದೇಶದಿಂದ ನಗರ ಠಾಣೆಯಲ್ಲಿ ೭ ಜನರ ಮೇಲೆ ದೂರು ದಾಖಲಿಸಿದ್ದರು. ಆದರೆ ಅದರಲ್ಲಿ ಮೂರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಅಂತಹ ಅಮಾಯಕರ ಮೇಲೆಯೂ ಸುಳ್ಳು ಕೇಸು ದಾಖಲಿಸಿರುವುದು ಖಂಡನೀಯ ಎಂದು ಮಹನಾಯಕ ಬಿಆರ್ ಅಂಬೇಡ್ಕರ್ ಸೇನೆ ವತಿಯಿಂದ ಡಿವೈಎಸ್ಪಿ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಸುಳ್ಳು ಕೇಸುಗಳನ್ನು ಹಿಂಪಡೆಯುವ0ತೆ ಮನವಿ ಮಾಡಲಾಯಿತು.

ಡಿವೈಎಸ್ಪಿಗೆ ಮನವಿ ಪತ್ರ ಕೊಡುವ ನಿಯೋಗದಲ್ಲಿ ಮಹಾನಾಯಕ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ, ಹಳ್ಳಿ ಮಕ್ಕಳ ಸಂಘದ ವೆಂಕಟರೋಣಪ್ಪ, ಅ0ಬೇಡ್ಕರ್ ಸೇನೆಯ ಶಂಕರ್, ಸಾದಲಿ ಮಂಜುನಾಥ್,ದಿಬ್ಬೂರಹಳ್ಳಿ ನಾರಾಯಣಸ್ವಾಮಿ,ಗೌರಿಬಿದನೂರು ಜಗದೀಶ್,ಜ್ಯೋತಿ, ಸುಜಾತಮ್ಮ,ವಕೀಲ ರಾಮಕೃಷ್ಣ, ಬಾಕೃಷ್ಣ ಮತ್ತಿತರರು ಇದ್ದರು.

ಇದನ್ನೂ ಓದಿ: Chikkaballapur News: ಮಳೆಹಾನಿ ತ್ವರಿತ ಪರಿಹಾರಕ್ಕೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚನೆ