ಗೌರಿಬಿದನೂರು: ತಾಲೂಕಿನ ಕಾದಲವೇಣಿ ಕಾಚ ಮಾಚೇನಹಳ್ಳಿ ಮತ್ತು ಹೊಸೂರು ಗ್ರಾಮಗಳಲ್ಲಿ ಮಳೆಯಿಂದ ಹಾನಿಯಾಗಿರುವ ಮನೆ ಮತ್ತು ಬೆಳೆಗಳನ್ನು ಪರಿಶೀಲನೆ ಮಾಡಿದ ಶಾಸಕ ಪುಟ್ಟಸ್ವಾಮಿಗೌಡ ಪರಿಹಾರ ನೀಡಿವ ಉದ್ದೇಶದಿಂದ ಸಮೀಕ್ಷೆ ಮಾಡಿ ಮಾತನಾಡಿದರು.
ಶಾಸಕರು ಕೆ.ಎಚ್ .ಪುಟ್ಟಸ್ವಾಮಿಗೌಡ ಮಾತನಾಡಿ, ಜಿಲ್ಲೆಯಾದ್ಯಂತ ಒಂದು ವಾರದಿಂದ ಮಳೆಸುರಿದಂತೆ ತಾಲೂಕಿ ನಲ್ಲಿ ಕೂಡ ಮುಂಗಾರು ಮಳೆ ಹೆಚ್ಚಾಗಿ ಬಿದಿದ್ದರಿಂದ ಜನಜಾನುವಾರುಗಳಿಗೆ ಹಾನಿಯಾಗಿತ್ತು. ಇಂತಹ ಸಂದರ್ಭ ದಲ್ಲಿ ಶಾಸಕನಾಗಿ ನಾನು ಕ್ಷೇತ್ರವನ್ನು ಸುತ್ತಾಡಿ ಜನರ ಸಂಕಷ್ಟವನ್ನು ಆಲಿಸುವ ಕೆಲಸ ಮಾಡುತ್ತಿದ್ದೇನೆ.
ಗೌರಿಬಿದನೂರು ಕೂಡ ಹೆಚ್ಚು ಮಳೆ ಬಿದ್ದಿದ್ದರಿಂದ ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ. ಅದರಂತೆ ಬೆಳೆಯೂ ಹಾನಿಯಾಗಿದೆ.ಒಂದು ರೀತಿಯಲ್ಲಿ ಮಳೆಯಾಗಿರೋದು ಬಹಳ ಸಂತೋಷ. ಮಳೆ ಬಾರದೆ ಜಿಲ್ಲೆಯು ಬರಗಾಲಕ್ಕೆ ತುತ್ತಾಗಿ ಜನತೆ ಆತಂಕದಲ್ಲಿದ್ದರು. ಜನರ ಕಷ್ಟ ದೇವರಿಗೆ ಮುಟ್ಟಿದೆ ಅನ್ನಿಸುತ್ತೆ. ಹಿಂಗಾರು ಕೈಹಿಡಿದು ಒಳ್ಳೆ ಮಳೆ ಬಿದ್ದಿದ್ದು ಉತ್ತರ ಪಿನಾಕಿನಿ ನದಿ ಕೂಡ ತುಂಬಿ ಹರಿಯುತ್ತಿರುವುದು ತುಂಬಾ ಸಂತೋಷದ ವಿಚಾರ. ಏಕೆಂದರೆ ಪಿನಾಕಿನಿ ಒಂದು ಸಲ ಹರಿದರೆ ೩ ವರ್ಷಗಳ ಕಾಲ ತುಂಬಿ ಹರಿಯುತ್ತದೆ. ಬೋರುಗಳಲ್ಲಿ ಹಾಗೂ ಪಟ್ಟಣದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ. ಹೆಚ್ಚು ಮನೆಗಳು ಕುಸಿದು ಬಿದ್ದಿದೆ. ಸರ್ಕಾರದ ಅನುದಾನದಲ್ಲಿ ಮನೆಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದ್ದರೆ ೬,೫೦೦ ಸಾವಿರ ರೂ, ಸಂಪೂರ್ಣ ಹಾನಿಯಾಗಿದ್ದರೆ ೧.೨೦ ಲಕ್ಷ ರೂ. ಪರಿಹಾರ ನಿಗದಿ ಮಾಡಲಾಗಿದೆ.
ಅದೇ ರೀತಿ ರೈತರಿಗೆ ಬೆಳೆ ಹಾನಿಯಾದರೆ ೧೩,೬೦೦ ಗಳು ಕೊಡುವ ಪದ್ಧತಿ ಇದೆ. ಅದರ ಪ್ರಕಾರ ನಮ್ಮ ತಾಲೂಕಿ ನಲ್ಲಿ ಎಷ್ಟು ಮನೆಗಳು ಬಿದ್ದಿದೆ ಎಷ್ಟು ಮನೆಯ ಹಾನಿಯಾಗಿದೆ. ಇದರ ಪರಿಶೀಲನೆ ಮಾಡಿ ರೈತರಿಗೆ ಮತ್ತು ಮನೆಗಳಿಗೆ ಹಾನಿ ಹಾಗಿರುವ ಶೀಘ್ರದಲ್ಲಿ ಇದರ ಪರಿಹಾರವನ್ನು ಬಗೆಹರಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಾನ್ಯ ತಹಸೀಲ್ದಾರ್ ಮಹೇಶ್ ಎಸ್ ಪತ್ರಿ ಇ ಒ ಜೆ.ಕೆ. ಹೊನ್ನಯ್ಯ ಆರಕ್ಷಕ ಅಧಿಕಾರಿ ಸತ್ಯನಾರಾಯಣ ಕಾದಲ ವೇಣಿ ಪಂಚಾಯಿತಿ ಪಿ ಡಿ ಒ ಕರಿಯಣ್ಣ ಶ್ರೀನಿವಾಸ್ ಗೌಡ ಪಂಚಾಯತಿ ಮೆಂಬರ್ ಅಂಬರೀಶ್ ಹಾಗೂ ಇನ್ನೂ ಉಪಸ್ಥಿತರಿದ್ದರು.