Sunday, 24th November 2024

Chikkaballapur News: ಗಡಿಭಾಗದಲ್ಲಿಯೂ ಕನ್ನಡದ ಕಂಪಿದೆ: ನೆಲಜಲದ ಬಗ್ಗೆ ಅಭಿಮಾನವಿದೆ: ಡಾ.ಖಾದರ್ ಸುಭಾನ್ ಖಾನ್

ಗೌರಿಬಿದನೂರು : ಚಿಕ್ಕಬಳ್ಳಾಪುರ ಕೋಲಾರ ತುಮಕೂರಿನ ಗಡಿಭಾಗದಲ್ಲಿಯೂ ಕೂಡ ಕನ್ನಡದ ಕಂಪಿದೆ, ನೆಲಜಲದ ಬಗ್ಗೆ ನಮಗೆ ಅಭಿಮಾನವಿದೆ ಎಂದು ಸಮಾಜ ಸೇವಕ ಡಾ.ಸುಬಾನ್ ಖಾದರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಡಿ ಪಾಳ್ಯ ಗ್ರಾಮದ ಜೈ ಹನುಮಾನ್ ಆಟೋಚಾಲಕರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ೨೪ ನೇ ವರ್ಷದ ಕನ್ನಡ ರಾಜ್ಯೋತ್ಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗಡಿ ಭಾಗಗಳಲ್ಲಿ ತೆಲುಗು ತಮಿಳು ಇತ್ಯಾದಿ ಬೇರೆಗಳ ಪ್ರಭಾವ ಹೆಚ್ಚಾಗಿದ್ದರು ಸಹ  ಕನ್ನಡ ಭಾಷೆ, ನೆಲ, ಜಲದ ಮೇಲೆ ಈ ಭಾಗದ ಜನರಿಗೆ ವಿಶೇಷ ಅಭಿಮಾನವಿದೆ.ನಮ್ಮನ್ನಾಳುವ ಸರಕಾರಗಳು ಭಾಷೆಯ ಉಳಿವಿಗೆ ಹೆಚ್ಚೆಚ್ಚು ಕಾರ್ಯಯೋಜನೆಗಳನ್ನು  ಹಾಕಿಕೊಂಡು ಭಾಷೆಯ ಉಳಿವಿಗೆ ಶ್ರಮಿಸಬೇಕಿದೆ.ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ, ವರ್ಷದ ಎಲ್ಲಾ ದಿನವೂ ನಿತ್ಯೋತ್ಸವವಾಗಿಸಬೇಕು ಎಂದು ಕರೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿ, ಕಳೆದ ೨೪ ವರ್ಷಗಳಿಂದ ಕನ್ನಡ ರಾಜ್ಯೋತ್ಸವದ ಮೂಲಕ ಕನ್ನಡವನ್ನು ಗಡಿ ಭಾಗದಲ್ಲಿ ಪಸರಿಸುವ ಕೆಲಸ ಮಾಡಲಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಭಾಗವಾಗಿ, ಶಾಲಾ ಮಕ್ಕಳಿಗೆ, ಪುಸ್ತಕ ವಿತರಣೆ, ವಯೋವೃದ್ದರಿಗೆ ಕಂಬಳಿಗಳನ್ನು ವಿತರಿಸುತ್ತಾ ಬಂದಿದ್ದೇವೆ. ಇಂತಹ ಸಮಾಜ ಸೇವೆಗಳ ಮೂಲಕ ಕನ್ನಡಾಂಬೆಯ ಕೆಲಸವನ್ನು ಮಾಡುತ್ತಿರುವುದಕ್ಕೆ ಹೆಮ್ಮೆಯಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಆಟೋ ಚಾಲಕ ಸಂಘದ ಅಧ್ಯಕ್ಷ, ನರಸಿಂಹಪ್ಪ, ಉಪಾಧ್ಯಕ್ಷ, ನರಸಿಂಹ ಮೂರ್ತಿ, ನೂರುಲ್ಲ, ಶರತ್, ಸೂರಿ, ಸುದರ್ಶನ್, ಮಂಜುನಾಥ್, ಪ್ರವೀಣ್, ಸನ್ನಿ, ಹರೀಶ್, ಬಾಲಕೃಷ್ಣ, ಚಂದ್ರ, ವೆಂಕಟೇಶ್, ಲಕ್ಷ್ಮೀ ನಾರಾಯಣ ಮುಂತಾದವರು ಪಾಲ್ಗೊಂಡಿದ್ದರು.

ಇದನ್ನೂ ಓದಿ: chikkaballapurnews