ಗೌರಿಬಿದನೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಯಲ್ಲಿ ಖಚಿತವಾಗಿ ಸ್ಪರ್ಧಿಸುವುದಾಗಿ ಸಮಾಜ ಸೇವಕ ಕೆ.ಜಯಪಾಲ್ ರೆಡ್ಡಿ ತಿಳಿಸಿದರು.
ನಗರದ ಬೈಪಾಸ್ ರಸ್ತೆ ಬಳಿ ಇರುವ ತಮ್ಮ ಜಮೀನಿನ ಆವರಣದಲ್ಲಿ,ಹೊಸ ವರ್ಷದ ಪ್ರಯುಕ್ತ ಆಟೋ ಚಾಲಕರಿಗೆ ಸಮವಸ್ತ್ರಗಳನ್ನು ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ನಾನು ಈಗಾಗಲೆ ಗೌರಿಬಿದನೂರು ನಗರದಲ್ಲಿ ಜಮೀನು ತೆಗೆದುಕೊಂಡಿದ್ದೇನೆ. ಅದೇ ಜಾಗದಲ್ಲಿ ಮನೆಯನ್ನು ನಿರ್ಮಿಸಿ, ಸದಾ ತಾಲ್ಲೂಕಿನ ಜನರ ಸೇವೆ ಮಾಡುತ್ತೇನೆ. ಇದರ ಭಾಗವಾಗಿ ಹೊಸ ವರ್ಷದ ಪ್ರಯುಕ್ತ ತಾಲ್ಲೂಕಿನ ಎಲ್ಲಾ ಆಟೋ ಚಾಲಕರುಗಳಿಗೆ ಸಮವಸ್ತ್ರಗಳನ್ನು ನೀಡಿ ಶುಭಾಶಯಗಳನ್ನು ತಿಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಜಿತ್ ಜೈನ್, ಶ್ರೀರಾಮರೆಡ್ಡಿ, ಪುರುಷೋತ್ತಮ, ಶಿವಣ್ಣ, ವೆಂಕಟೇಶ್, ಅಶೋಕ್ ರೆಡ್ಡಿ, ಚಂದ್ರ ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.
ಇದನ್ನೂ ಓದಿ: chikkaballapurnews