ಚಿಕ್ಕಬಳ್ಳಾಪುರ: ಕ.ರಾ.ರ.ಸಾ ನಿಗಮದ ಜಿಲ್ಲಾ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಭಾನುವಾರ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಕ.ರಾ.ರ.ಸಾ ನಿಗಮದ ರಾಜ್ಯ ಸಂಘದ ಮುಖಂಡರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ.ರಾ.ರ.ಸಾ ನಿಗಮದ ನಿವೃತ್ತ ಸಂಘದ ರಾಜ್ಯಾಧ್ಯಕ್ಷ ನಂಜುAಡೇಗೌಡ ಮಾತನಾಡಿ ಕೇಂದ್ರ ಸರಕಾರವು ಈ ಕೂಡಲೇ ನಿವೃತ್ತ ನೌಕರರಿಗೆ ನ್ಯಾಯಯುತವಾದ ಪಿಂಚಣಿ ಸೌಲಭ್ಯವನ್ನು ಒದಗಿಸಿಕೊಡಬೇಕು.ಇದೇ ಉದ್ದೇಶವನ್ನಿಟ್ಟುಕೊಂಡು ನಿವೃತ್ತ ನೌಕರರು ದೇಶಾದ್ಯಂತ ನಿರಂತರ ವಾಗಿ ಹತ್ತು ಹಲವಾರು ಹೋರಾಟಗಳನ್ನು ನಡೆಸಿಕೊಂಡು ಬರುತ್ತಿವೆ. ಆದರೂ ಕೂಡ ಕೇಂದ್ರ ಸರಕಾರದ ಕಾರ್ಮಿಕ ಇಲಾಖೆ ನಮ್ಮ ಕಡೆಗಮನ ನೀಡುತ್ತಿಲ್ಲ. ಈ ಹೋರಾಟವನ್ನು ನ್ಯಾಯ ಸಿಗುವವರೆಗೂ ನಿರಂತರವಾಗಿ ನಡೆಸಲಾಗುವುದು. ಕಳೆದ ಏಳು ಎಂಟು ವರ್ಷಗಳಿಂದ ವಾರ್ಷಿಕ ಸಭೆಯನ್ನು ನಡೆಸಲಾಗುತ್ತಿದೆ. ಇದರ ಅಂಗವಾಗಿ ಬೆಂಗಳೂರಿನ ಲಾಲ್‌ಬಾಗ್ ಬಳಿಯ ಪಿಂಚಣಿ ಕಚೇರಿಯ ಬಳಿ ಬೃಹತ್ ಪ್ರತಿಭಟನಾ ಹೋರಾಟವನ್ನು ನಡೆಸಲಾಗುತ್ತಿದೆ. ಈ ಪ್ರತಿಭಟನಾ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಭಾಗದ ನಿವೃತ್ತ ಅಧಿಕಾರಿಗಳು ಅಥವಾ ನೌಕರರು ಭಾಗವಹಿಸಲಿದ್ದಾರೆ. ಸರ್ಕಾರವು ಹೆಸರಿಗಷ್ಟೇ ಇದ್ದು ವಾಸ್ತವವಾಗಿ ನಿವೃತ್ತ ನೌಕರರ ಕಷ್ಟಗಳ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕ. ರಾ. ರ. ಸಾ ನಿಗಮದ ಜಿಲ್ಲಾ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಮತ್ತು ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾದ ಎನ್.ಬ್ರಹ್ಮಚಾರಿ, ಉಪಾಧ್ಯಕ್ಷರಾದ ಬಿ.ಸೊಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯ್ಡು,,ಶ್ರೀ ಯಲುವಳ್ಳಿ ಸೊಡ್ಡೆಗೌಡರು. ತಾಲ್ಲೂಕು ಅಧ್ಯಕ್ಷರು,ಟ್ರಸ್ಟ್ ಅಧ್ಯಕ್ಷರು, ಶ್ರೀ ನಂಜು0ಡೇಗೌಡರು ಸಂಘಟನಾ ಕಾರ್ಯದರ್ಶಿ ಮೇಲೂರ್ ಅಮರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮತ್ತಿತರ ಹಾಜರಿದ್ದರು.