ಚಿಂತಾಮಣಿ: ಫೆಂಗಲ್ ಚಂಡಮಾರುತದ ಎಫೆಕ್ಟ್ ನಗರಕ್ಕೂ ಅಪ್ಪಳಿಸಿದ್ದು ನಗರದ ಜನತೆ ತತ್ತರಿಸಿ ಹೋಗಿದ್ದಾರೆ.ನಗರದ ವಾರ್ಡ್ ನಂ ೧೬ ರ ಇಡ್ಲಿ ಪಾಳ್ಯದ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದ್ದು ನಗರ ವಾಸಿಗಳಿಗೆ ಎಲ್ಲಿಲ್ಲದ ಸಮಸ್ಯೆ ಎದ್ದು ಬಂದಿದೆ.
ಹೌದು ನಗರದ ಇಡ್ಲಿ ಪಾಳ್ಯದಲ್ಲಿ ರಸ್ತೆಯೊಂದು ಸಂಪೂರ್ಣ ಕೆಸರುಗದ್ದೆಯಾಗಿದ್ದು ಹಲವೆಡೆ ಚಿಕ್ಕಚಿಕ್ಕ ಕುಂಟೆಗಳು ಕಂಡು ಬಂದಿದ್ದು ಸಾರ್ವ ಜನಿಕರ ಓಡಾಟಕ್ಕೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.ಶಾಲಾ ಕಾಲೇಜು ವಿದ್ಯಾರ್ಥಿಗಳ ಓಡಾಟಕ್ಕೆ ಪರ್ಯಾಯ ಮಾರ್ಗದ ರಸ್ತೆ ಯನ್ನು ಅನುಸರಿಸುವಂತಹ ಪರಿಸ್ಥಿತಿ ಎದುರಾಗಿದೆ.ಇನ್ನೂ ಇದೇ ರಸ್ತೆ ಮಾರ್ಗದಲ್ಲಿ ಟ್ರಾಕ್ಟರ್, ಕಾರು ಗೂಡ್ಸ್ ವಾಹನಗಳು ಸಂಚರಿಸು ತ್ತಿರುವ ಹಿನ್ನಲೇ ಅಲ್ಪಸ್ವಲ್ಪ ಸರಿಯಿದ್ದ ರಸ್ತೆಯೂ ಸಂಪೂರ್ಣ ಹಾಳಾಗಿದೆ.
ಇನ್ನೂ ನಗರಸಭೆ ಹಾಗೂ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನ ವಿಲ್ಲದಂತಾಗಿದೆ ಎಂದು ವಾರ್ಡ್ ಜನತೆ ಆರೋಪ ಮಾಡಿದ್ದಾರೆ.ಇನ್ನೂ ಸಾಕಷ್ಟು ಮಂದಿ ದ್ವಿಚಕ್ರ ವಾಹನ ಸವಾರರು ಬಿದ್ದ ಗಾಯಗಳನ್ನು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.