ಚಿಕ್ಕಬಳ್ಳಾಪುರ : ಅಪ್ಪಾಲು ಮಂಜುನಾಥ್ ಕೊಡುಗೈದಾನಿ ಅಷ್ಟೇ ಅಲ್ಲದೆ ಉತ್ತಮ ಸ್ನೇಹ ಸಂಬ0ಧದ ಪ್ರತಿರೂಪವಾಗಿದ್ದರು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಗರದ ಧರ್ಮಚತ್ರ ರಸ್ತೆ ಸ್ವಗೃಹದ ಮುಂಭಾಗ ಏರ್ಪಡಿಸಿದ್ದ ಮೊದಲ ವರ್ಷದ ವಾರ್ಷಿಕೋತ್ಸದಲ್ಲಿ ಭಾಗವಹಿಸಿ ಮಾತನಾಡಿದರು. ಅಪ್ಪಾಲು ಮಂಜುನಾಥ್ ನನ್ನ ಕೆಲವೇ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರಾಗಿದ್ದು ಅವರ ಅಕಾಲಿಕ ಅಗಲಿಕೆ ಮನಸ್ಸಿಗೆ ತುಂಬಾ ನೋವನ್ನು ತುಂಬಿದೆ.ನಾನು ಎಂತಹುದೇ ಒತ್ತಡದ ಸಂದರ್ಭದಲ್ಲಿದ್ದರೂ ಕೂಡ ಲೆಕ್ಕಿಸದೆ ಹಾಸ್ಯದ ಮೂಲಕ ನನ್ನಲ್ಲಿ ನಗೆಯನ್ನು ಉಕ್ಕಿಸುತ್ತಿದ್ದ ಹೃದಯವಂತ ಮಂಜಣ್ಣ.ಅವರ ಕುಟುಂಬದ ಕಷ್ಟಸುಖಗಳಲ್ಲಿ ಸಮಭಾಗಿಯಾಗಿ ಸದಾ ಇರುತ್ತೇನೆ. ನಾನಷ್ಟೇ ಅಲ್ಲ ನಮ್ಮ ಎಲ್ಲಾ ಮುಖಂಡರೂ ಇರಲಿದ್ದಾರೆ.
ಅವರ ಮಗ ವಂಶಿಕೃಷ್ಣ ತಂದೆಯ0ತೆಯೇ ಸರಳ ಸ್ನೇಹಜೀವಿ. ಇವರನ್ನು ಉತ್ತಮವಾದ ಬದುಕಿನತ್ತ ಕರೆದು ಕೊಂಡು ಹೋಗಲು ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡುವೆ. ತಂದೆ ಯ0ತೆಯೇ ಸ್ನೇಹಜೀವಿಯಾಗಿ ಸಮಾಜಮುಖಿ ಕೆಲಸಗಳನ್ನು ಮಾಡಿ ಕೊಂಡು ಮಾದರಿ ಯಾದ ವ್ಯಕ್ತಿತ್ವ ಕಟ್ಟಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದರು.
ತ0ದೆಯ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅಪ್ಪಾಲು ಮಂಜಣ್ಣ ಅವರ ಮಗ ವಂಶಿಕೃಷ್ಣ ತಮ್ಮ ತಂದೆಯ ಅಭಿಮಾನಿಗಳು ಮತ್ತು ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರದ ಜತೆಗೆ ಸಾವಿ ರಾರು ಮಂದಿಗೆ ಅನ್ನದಾನದ ವ್ಯವಸ್ಥೆ ಮಾಡಿದ್ದರು.ಎರಡೂ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರಲ್ಲದೆ ಅನ್ನದಾನ ಸವಿದರು.
ಈ ಸಂದರ್ಭದಲ್ಲಿ ಮಂಜುನಾಥ್ ಸಹೋದರ ಹರೀಶ್, ನಗರಸಭೆ ಅಧ್ಯಕ್ಷ ಆನಂದಬಾಬುರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಮೊಬೈಲ್ ಬಾಬು, ಅರುಣ್, ಮಾಜಿ ನಗರಸಭಾ ಅಧ್ಯಕ್ಷ ಮುನಿಕೃಷ್ಣ, ನಗರಸಭಾ ಸದಸ್ಯರಾದ ಗಜೇಂದ್ರ, ಜಯಮ್ಮ, ಅನಿಲ್, ಡ್ಯಾನ್ಸ್ ಶ್ರೀನಿವಾಸ್, ಮಹಾಕಾಳಿ ಬಾಬು, ಮಂಜುನಾಥಾಚಾರಿ, ಮತ್ತಿತರರು ಇದ್ದರು.