Friday, 25th October 2024

ನೂತನ ಮಹಿಳಾ ಕಾಲೇಜು ಕಟ್ಟಡ ಕಾಮಗಾರಿ ವೀಕ್ಷಿಸಿದ ಉಪಲೋಕಾಯುಕ್ತ ಫಣೀಂದ್ರ

ಶೀಘ್ರ ಲೋಕಾರ್ಪಣೆಗೊಳಿಸಲು ಜಿಲ್ಲಾಧಿಕಾರಿ ಸಿಇಒಗೆ ಸೂಚನೆ

ಚಿಕ್ಕಬಳ್ಳಾಪುರ : ೧೦ ವರ್ಷಗಳಿಂದ ಲೋಕಾರ್ಪಣೆ ಭಾಗ್ಯ ಕಾಣದೆ ನೆನೆಗುದಿಗೆ ಬಿದ್ದಿರುವ ಸರಕಾರಿ ಮಹಿಳಾ ಕಾಲೇಜಿನ ಕಟ್ಟಡದ ಕಾಮಗಾರಿಯನ್ನು ಖುದ್ದು ಉಪಲೋಕಾಯುಕ್ತರೇ ಭೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರವೇ ವಿದ್ಯಾರ್ಥಿಗಳ ಉಪಯೋಗಕ್ಕೆ ಬರುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಗರ ಹೊರವಲಯದಲ್ಲಿರುವ ಸರಕಾರಿ ಮಹಿಳಾ ಕಾಲೇಜಿನ ಸಮಸ್ಯೆ ಬಗ್ಗೆ ಶನಿವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ದೂರು ಸ್ವೀಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳು ಉಪಲೋಕಾಯುಕ್ತರಿಗೆ ದೂರು ನೀಡಿದ್ದರು.

ವಿದ್ಯಾರ್ಥಿಗಳ ದೂರಿನ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ,ತಹಶೀಲ್ದಾರ್,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷಿö್ಮÃಕಾಂತ್.ಜೆ. ಮಿಸ್ಕಿನ್ ಜತೆಗೂಡಿ ಕಾಮಗಾರಿ ಪರಿಶೀಲನೆ ನಡೆಸಿ ಸಮಸ್ಯೆಗಳ ಬಗ್ಗೆ ಇಂಜನಿಯರ್ ಕಡೆಯಿಂದ ಮಾಹಿತಿ ಪಡೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪಲೋಕಾಯುಕ್ತ ಫಣೀಂದ್ರ ಮಹಿಳಾ ಕಾಲೇಜು ಲೋಕಾರ್ಪಣೆಗೊಳ್ಳದೆ ನಿಂತಿರುವುದು ಕಂಡು ಬೇಸರವಾಗಿದೆ.ಯಾಕೆ ಹೀಗಾಯಿತು ಎಂಬ ಬಗ್ಗೆ ಕೆಆರ್‌ಐಡಿಎಲ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಅರ್ಧ ಹಣವಷ್ಟೇ ಬಿಡುಗಡೆ ಆಗಿದೆ ಹೀಗಾಗಿ ಕಾಮಗಾರಿಗೆ ಅನುದಾನದ ಕೊರತೆಯಿದೆ ಎಂದಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಜತೆಗೆ ಅನುದಾನ ಬಿಡುಗಡೆ ಮಾಡುವಂತೆ ಸಂಬ0ಧಪಟ್ಟವರಿಗೆ ಪತ್ರ ಬರೆಯುವ ಮೂಲಕ ಉಪಲೋಕಾಯುಕ್ತರ ಅಧಿಕಾರದ ವ್ಯಾಪ್ತಿಯಲ್ಲಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮಾತನಾಡಿ ಮಹಿಳಾ ಕಾಲೇಜು ಪೂರ್ಣಗೊಂಡು ವಿದ್ಯಾರ್ಥಿಗಳ ಉಪಯೋಗಕ್ಕೆ ಬಾರದಿರಲು ಗುತ್ತಿಗೆದಾರರಿಗೆ ಸಂಬAಧಪಟ್ಟ ಇಲಾಖೆಯಿಂದ ಹಣ ಬಿಡುಗಡೆ ಮಾಡದಿರುವುದೇ ಆಗಿದೆ.ಕಾಲೇಜು ಕಾಮಗಾರಿ ಮಾಡುತ್ತಿರುವ ಕೆಆರ್‌ಐಡಿಎಲ್ ಇಂಜನಿರ‍್ಸ್ ಮಾಹಿತಿ ಪ್ರಕಾರ ೨೮ ಲಕ್ಷ ಬಿಡುಗಡೆ ಆಗಬೇಕಿದೆ.ಇದಾದರೆ ಕೂಡಲೇ ೬ ಕೊಠಡಿಗಳನ್ನು ಬಿಟ್ಟುಕೊಡುತ್ತಾರೆ.ಇದನ್ನು ಪೂರ್ಣ ಗೊಳಿಸಲು ಆರೋಗ್ಯ ಸಚಿವರು,ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಡಳಿತ ಎಲ್ಲರೂ ಕೂಡ ಸಾಂಘಿಕ ಪ್ರಯತ್ನ ಮಾಡುತ್ತಿದ್ದಾರೆ.

ಆದಷ್ಟು ಬೇಗ ಈ ವಿಚಾರದಲ್ಲಿ ಕ್ರಮವಹಿಸಲಾಗುವುದು. ಇಲ್ಲಿ ಕಟ್ಟಡ ಕಟ್ಟುವಾಗ ಕೆರೆ ಮತ್ತು ಕೆರೆ ಅಂಗಳ ಬತ್ತಿಹೋಗಿದ್ದ ಜತೆಗೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆ ಇತ್ತು. ಕಳೆದ ೩ ರ್ಷಗಳಿಂದ ಮಳೆ ಹೆಚ್ಚಾಗಿ ಸುರಿದ ಪರಿಣಾಮ ಸಮಸ್ಯೆ ಉಂಟಾಗಿದೆ.ಯಾರೂ ಕೂಡ ಉದ್ದೇಶಪೂರ್ವಕವಾಗಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಮಾಡಲು ಹೋಗುವುದಿಲ್ಲ.ಆಕಸ್ಮಿಕವಾಗಿ ಎಲ್ಲೋ ಒಂದೊ0ದೆಡೆ ಹೀಗಾಗಬಹುದು ಅಷ್ಟೇ.ಎಲ್ಲಕ್ಕೂ ಪರಿಹಾರ ಇದ್ದೇ ಇದೆ, ಯಾರೂ ಕೂಡ ನಿಸರ್ಗಕ್ಕೆ ವಿರುದ್ದವಾಗಿ ನಡೆಯುವ ಪ್ರಯತ್ನ ಮಾಡಬಾರದು ಅಷ್ಟೇ.ವಿದ್ಯಾರ್ಥಿಗಳಿಗೆ ಅದಷ್ಟು ಬೇಗ ಅನುಕೂಲ ಮಾಡಿಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷಿö್ಮÃಕಾಂತ್ ಜೆ.ಮಿಸ್ಕಿನ್,ಜಿಲ್ಲಾ ಪಂಚಾಯಿತಿ ಸಿಇಒ ಶಿವಶಂಕರ್,ತಹಶೀಲ್ದಾರ್ ಗಣಪತಿ ಶಾಸ್ತಿç, ಮಹಿಳಾ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣಯ್ಯ, ಸಹಾಯಕ ಪ್ರಾಧ್ಯಾಪಕ ಜಿ.ಡಿ.ಚಂದ್ರಯ್ಯ,ಸಹಾಯಕ ವಾರ್ತಾಧಿಕಾರಿ ಮಂಜುನಾಥ್, ವಕೀಲ ಮಂಜುನಾಥ್, ಎನ್‌ಎಸ್‌ಯುಐ ಮುಖಂಡರು,ದೂರಿತ್ತ ವಿದ್ಯಾರ್ಥಿನಿಯರು ಮತ್ತಿತರರು ಇದ್ದರು.