Sunday, 15th December 2024

ಆಸೆಗಳ ತ್ಯಾಗದಿಂದ ಮನಸ್ಸು ನಿರ್ಮಲ ಡಾ.ಎಂ.ಆರ್.ಜಯರಾಮ್

ಚಿಕ್ಕಬಳ್ಳಾಪುರ : ಭಕ್ತಿಮಾರ್ಗ ಸರ್ವಸುಲಭವಾದ ಮತ್ತು ಸರ್ವಶ್ರೇಷ್ಠವಾದ ಕಾಯಕ.ಆಸೆಗಳ ತ್ಯಾಗದಿಂದ ಮನಸ್ಸು ನಿರ್ಮಲವಾಗಲಿದೆ ಎಂದು ಕೈವಾರ ತಾತಯ್ಯನವರು ಬೋಧಿಸಿದ್ದಾರೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಗಳಾದ ಡಾ.ಎಂ.ಆರ್.ಜಯರಾಮ್ ರವರು ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ ಗ್ರಾಮದ ಶ್ರೀಅನಂತಪದ್ಮನಾಭಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀಯೋಗಿನಾರೇಯಣ ಮಠದ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಆತ್ಮಬೋಧಾಮೃತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಪಂಚಿಕವಾದ ಮಾಯೆಗೆ ಅಂಟಿಕೊAಡವರು ಆಧ್ಯಾತ್ಮಿಕ ಸಾಧನೆ ಮಾಡಲು ಸಾಧ್ಯವಿಲ್ಲ. ಈ ಮಾಯೆಯಿಂದ ಮನಸ್ಸನ್ನು ಬೇರ್ಪಡಿಸ ಬೇಕಾದರೆ ಗುರು ಉಪದೇಶವನ್ನು ಪಡೆಯಬೇಕು. ಗುರು ಹೇಳಿದ ಮಾರ್ಗದಲ್ಲಿ ಮನಸ್ಸನ್ನು ಕೇಂದ್ರಿಕರಿಸಬೇಕು. ತತ್ವಜ್ಞಾನಿಯಾದ ಗುರುವನ್ನು ಆಶ್ರಯಿಸಬೇಕು. ಆಸೆಗಳ ತ್ಯಾಗದಿಂದ ಮನಸ್ಸು ನಿರ್ಮಲವಾಗುತ್ತದೆ. ಭಕ್ತಿಯು ಸಿದ್ಧಿಯಾಗಬೇಕಾದರೆ ಮನಸ್ಸು ಶುದ್ಧಿಯಾಗಿರಬೇಕು. ಮೊದಲು ಮನಸ್ಸನ್ನು ಜಯಿಸಬೇಕು ಎಂದರು.

ಮಾನವರಾಗಿ ಹುಟ್ಟಿದ ಮೇಲೆ ಚಿಂತೆಗಳು ಸಹಜ. ಪ್ರಪಂಚದಲ್ಲಿ ಬಾಳುವ ಮಾನವರಿಗೆ ಏನೇನೋ-ಎಷ್ಟೆಷ್ಟೋ ಚಿಂತೆಗಳಿವೆ. ಭಗವಂತನ ಭಜನೆಯಿಂದ ಇತರೆ ಎಲ್ಲಾ ಚಿಂತೆಗಳು ಮಾಯವಾಯಿತು. ಚಿಂತೆಗಳನ್ನು ಬಿಟ್ಟು ಗುರುವಿನ ಸ್ಮರಣೆ ನಿರಂತರವಾಗಿ ಮಾಡಿದರೆ ಪರಮ ಪದವಿಯು ಸಿಗುತ್ತದೆ ಎಂದಿದ್ದಾರೆ ತಾತಯ್ಯನವರು. ಈ ಭವ ಸಾಗರದಿಂದ ಪಾರಾಗಬೇಕಾದರೆ ಇರುವ ಸುಲಭದ ಉಪಾಯವೆಂದರೆ ನಾಮಸ್ಮರಣೆಯೇ ಎಂದರು.

ಕೈವಾರ ಶ್ರೀಯೋಗಿನಾರೇಯಣ ತಾತಯ್ಯನವರು ಬೋಧಿಸಿರುವ ಆತ್ಮಬೋಧಾಮೃತವನ್ನು ಸಭಿಕರಿಗೆ ವಿಸ್ತಾರವಾಗಿ ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ಡಾ.ಎಂ.ಆರ್.ಜಯರಾಮ್ ರವರನ್ನು ಗ್ರಾಮಸ್ಥರು ಮಂಗಳವಾದ್ಯಗಳ ಪೂರ್ಣಕುಂಭದೊ0ದಿಗೆ ಬರಮಾಡಿ ಕೊಂಡರು. ನಂತರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಲಶ ಹೊತ್ತ ಮಹಿಳೆಯರು ಶೋಭಾಯಾತ್ರೆ ಯಲ್ಲಿ ಭಾಗವಹಿಸಿದ್ದರು. ರಸ್ತೆಗಳನ್ನು ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ಮಾತೆಯರು ಸುಂದರವಾದ ರಂಗೋಲಿಗಳನ್ನು  ಹಾಕಿದ್ದರು. ಅಜ್ಜವಾರ ಗ್ರಾಮದ ಮಹೇಶ್ವರಮ್ಮ ಹಾಗೂ ಅನಂತಪದ್ಮನಾಭಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ನಂತರ ವೇದಿಕೆಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಗ್ರಾಮಸ್ಥರು ಧರ್ಮಾಧಿಕಾರಿಗಳಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಿದರು.

ಬಿ.ಎಂ.ಟಿ.ಸಿ ಉಪಾಧ್ಯಕ್ಷರಾದ ಕೆ.ವಿ.ನವೀನ್‌ಕಿರಣ್, ರಾಮಕೋಟಿ ಸಮಿತಿಯ ಅಧ್ಯಕ್ಷರಾದ ಪುರದಗಡ್ಡೆ ಕೃಷ್ಣಪ್ಪ, ಉಪಾಧ್ಯಕ್ಷರಾದ ಅಣಕನಗೊಂದಿ ರಂಗಣ್ಣ, ಪೋಲೀಸ್ ಗೋಪಾಲಾಚಾರಿ, ಗೊಲ್ಲಹಳ್ಳಿ ನಾರಾಯಣಪ್ಪ. ಅಜ್ಜವಾರ ಸಿ.ಎನ್.ನಾರಾಯಣಸ್ವಾಮಿ, ದಾಸಸಾಹಿತ್ಯ ಪರಿಷತ್ ಅಧ್ಯಕ್ಷರಾದ ಜಿ.ಗಂಗಾಧರ್, ನಾಯನಹಳ್ಳಿ ಭಜನೆ ರಾಮಣ್ಣ, ಲಕ್ಷö್ಮಣ, ಮಾಜಿ ಟಿಎಸ್‌ಪಿಸಿಎಂಎಸ್ ಅಧ್ಯಕ್ಷರಾದ ಎ.ಎನ್.ಶ್ರೀನಿವಾಸ್, ರಮೇಶ್, ವೆಂಕಟೇ ಶಪ್ಪ, ನಾಗಪ್ಪ,  ತಾಳಹಳ್ಳಿ ಮುನಿಯಪ್ಪ, ಕೊಳವನಹಳ್ಳಿ ಸೀತಾರಾಮಯ್ಯ, ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಟ್ರಸ್ಟ್ ಸದಸ್ಯರಾದ ಬಾಗೇಪಲ್ಲಿ ಕೆ.ನರಸಿಂಹಪ್ಪ ಹಾಗೂ ಅಜ್ಜವಾರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.