ಮಂಚೇನಹಳ್ಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ
ಚಿಕ್ಕಬಳ್ಳಾಪುರ: ದಂಡಿಗಾನಹಳ್ಳಿ ಜಲಾಶಯದ ನೀರನ್ನು ಕೆಲವರು ಹೊರ ತಾಲೂಕಿಗೆ ಕೊಂಡೊಯ್ಯುವ ಪ್ರಯತ್ನ ನಡೆಸಿದ್ದರು, ಆದರೆ ಮಂಚೇನ ಹಳ್ಳಿ ತಾಲೂಕಿಗೆ ನೀರು ಬೇಕು ಎಂದು ೫೨ ಕೋಟಿ ವಿಶೇಷ ಅನುದಾನ ತಂದು ೬೨ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾ ಕರ್ ಹೇಳಿದರು.
ಮಂಚೇನಹಳ್ಳಿ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ೧೫ ವರ್ಷಗಳ ಹಿಂದೆ ಘೋಷಣೆಯಾದ ಕೆಲ ಹೊಸ ತಾಲೂಕುಗಳಿಗೆ ಇಂದಿಗೂ ತಾಲೂಕು ಆಸ್ಪತ್ರೆ ಮತ್ತು ತಾಯಿ ಮಗುವಿನ ಆಸ್ಪತ್ರೆಗಳು ಮಂಜೂರು ಆಗಿಲ್ಲ. ಆದರೆ ಮಂಚೇನಹಳ್ಳಿ ತಾಲೂಕು ಆಗಿ ಒಂದೇ ವರ್ಷದಲ್ಲಿ ಎಲ್ಲ ಅಬಿವೃದ್ಧಿ ಕಾಮಗಾರಿಗಳನ್ನು ತರಲಾಗಿದೆ ಎಂದರು.
ಹೆದ್ದಾರಿಗೆ ೩೩೩ ಕೋಟಿ ಮಂಜೂರು: ಗೌರಿಬಿದನೂರು ಗಡಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ರಾಷ್ಟಿçÃಯ ಹೆದ್ದಾರಿ ೨೩೪ರ ಈ ಹಿಂದಿನ ಗುತ್ತಿಗೆದಾರ ನಿರ್ಲಕ್ಷ್ಯ ಮಾಡಿದ ಪರಿಣಾಮ ಅವರ ವಿರುದ್ಧ ಕ್ರಮ ಕೈಗೊಳ್ಳಲು ಒಂದು ವರ್ಷ ಬೇಕಾಯಿತು. ನಂತರ ದೆಹಲಿಗೆ ತೆರಳಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ವಿಶೇಷ ಅನುದಾನವಾಗಿ ೩೩೩ ಕೋಟಿ ತರಲಾಗಿದೆ. ಈ ರಸ್ತೆಗೆ ಮಾ.೨ ರಂದು ಗುದ್ದಲಿಪೂಜೆ ನಡೆಯಲಿದೆ ಎಂದರು.
೧,೦೩೪ ಮಂದಿ ನಿವೇಶನಕ್ಕೆ ಅರ್ಜಿ: ಮಂಚೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ೧,೦೩೪ ಮಂದಿ ಈವರೆಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇನ್ನೂ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗಬಹುದು. ನಿರಂತರ ೩ ವರ್ಷಗಳ ಪ್ರಯತ್ನದಿಂದ ೧೧.೫ ಎಕರೆ ಭೂಮಿಯನ್ನು ಇದಕ್ಕಾಗಿ ಮಂಜೂರು ಮಾಡಲಾಗಿದೆ. ಉಚಿತ ನಿವೇಶನ ನೀಡುವ ಬಗ್ಗೆ ೨೦೧೯ ರ ಉಪ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಚಿಕ್ಕಬಳ್ಳಾಪುರ ನಗರ ನಿವಾಸಿಗಳಿಗೆ ೫ ಸಾವಿರ ನಿವೇಶನ ನೀಡಲಾಗುತ್ತಿದೆ ಎಂದರು.
ಮ0ಚೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ೪೪೮ ನಿವೇಶನ ಸಿದ್ಧವಾಗಿದೆ, ಅರ್ಹರಿಗೆ ಮಾ.೧೭ ರಂದು ಹಕ್ಕುಪತ್ರ ವಿತರಿಸಲಾಗುವುದು. ಧರ್ಮಾ ತೀತ, ಜಾತ್ಯತೀತವಾಗಿ ನಿವೇಶನ ಹಂಚಲಾಗುತ್ತಿದೆ. ಜೊತೆಗೆ ೧೦೦ ಮನೆಗಳನ್ನು ವಿತರಿಸಲಾಗಿದೆ, ಗ್ರಾಪಂ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಅರ್ಹರಿಗೆ ನಿವೇಶನ ಮತ್ತು ಮನೆ ನೀಡಲು ಶ್ರಮಿಸಬೇಕು ಎಂದು ಸೂಚಿಸಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ೩೦ ಗ್ರಾಪಂಗಳಲ್ಲಿ ಈವರೆಗೆ ೨೮ ಗ್ರಾಪಂಗಳಿಗೆ ತಾವು ಭೇಟಿ ನೀಡಿದ್ದು, ಇನ್ನು ಕೇವಲ ೨ ಗ್ರಾಪಂ ಬಾಕಿ ಇದೆ. ಅಲ್ಲದೆ ನಗರ ವ್ಯಾಪ್ತಿಯ ೩೧ ವಾರ್ಡುಗಳಿಗೆ ಭೇಟಿ ನೀಡಲಾಗುವುದು. ಪ್ರತಿ ವಾರ್ಡು ಮತ್ತು ಗ್ರಾಮದ ನಿವೇಶನ ರಹಿತರ ಪಟ್ಟಿಯಂತೆ ಎಲ್ಲರಿಗೂ ನಿವೇಶನ ನೀಡಲು ಕ್ರಮ ವಹಿಸಲಾಗಿದೆ ಎಂದರು.
ಮಾದರಿ ತಾಲೂಕಾಗಿ ಮಂಚೇನಹಳ್ಳಿ: ಮಂಚೇನಹಳ್ಳಿಯನ್ನು ಮಾದರಿ ತಾಲ್ಲೂಕು ಆಗಿ ಅಭಿವೃದ್ಧಿಪಡಿಸಲಾಗುವುದು, ಶುದ್ಧ ಕುಡಿಯುವ ನೀರು, ರಸ್ತೆ, ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಕಟ್ಟಡಗಳು, ಬೀದಿ ದೀಪಗಳು, ಚರಂಡಿ ಸೇರಿದಂತೆ ಎಲ್ಲ ಅಬಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಮಾಡಲಾಗುವುದು. ಕಷ್ಟದ ಕಾಲದಲ್ಲಿ ಹೆಚ್ಚು ಮತ ನೀಡಿ ಆಶೀರ್ವಾದ ಮಾಡಿದ್ದೀರಿ, ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ವಿಶೇಷ ಅನುದಾನ ತಂದು ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಅಬಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ, ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಾಗಿ ಸಹಕಾರ ನೀಡಿದರೆ ಅಭಿವೃದ್ಧಿ ಸಾಧ್ಯ. ಹಾಗಾಗಿ ಪಕ್ಷಾತೀತವಾಗಿ ಅಭಿವೃದ್ದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಮಂಚೇನಹಳ್ಳಿ ತಾಲೂಕಿಗೆ ಶಾಶ್ವತವಾಗಿ ಕುಡಿಯುವ ನೀರಿಗೆ ಅಭಾವ ಇರುವುದಿಲ್ಲ, ಮಾ.೨ರಂದು ನಡೆಯಲಿರುವ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆಗೆ ಕನಿಷ್ಠ ಪ್ರತಿ ಗ್ರಾಪಂನಿ0ದ ೧ ಸಾವಿರ ಮಂದಿಯಾದರೂ ಬರಲೇಬೇಕು ಎಂದು ಕೋರಿದರು.
ಬೂತ್ ಹಂತದಲ್ಲಿ ಸಭೆ: ಮುಂದಿನ ದಿನಗಳಲ್ಲಿ ಬೂತ್ ಹಂತದಲ್ಲಿ ಸಭೆ ನಡೆಸಿ ಮುಖಂಡರೊAದಿಗೆ ಚರ್ಚೆ ನಡೆಸಲಾಗುವುದು. ಚುನಾವಣೆ ಮುನಿಸು ಇರುವ ಮುಖಂಡರನ್ನು ಸಂಪರ್ಕಿಸಿ ಮುನಿಸು ನಿವಾರಿಸುವ ಕೆಲಸ ಮಾಡಲಾಗುವುದು. ನಿಮ್ಮ ಹಂತದಲ್ಲಿಯೇ ಪರಿಹಾರವಾದರೆ ಮಾಡಿ, ಇಲ್ಲವಾದರೆ ತಾವೇ ಸಂಪರ್ಕಿಸಿ ಪರಿಹರಿಸುವುದಾಗಿ ಸಚಿವರು ಹೇಳಿದರು.
ನಮ್ಮ ಮನೆ ಗಟ್ಟಿ ಇದ್ದರೆ ಹೊರಗಿನಿಂದ ಯಾರೇ ಬಂದರೂ ಸಮಸ್ಯೆ ಇಲ್ಲ, ಕಳೆದ ೧೫ ವರ್ಷದ ಸೇವೆ, ೧೦ ವರ್ಷದ ಶಾಸಕನಾಗಿ ಸೇವೆ ಮಾಡಿ ಪ್ರತಿ ಯೊಬ್ಬರ ಮನಸ್ಸಿನಲ್ಲಿಯೂ ಇದ್ದೇವೆ. ನಂಬಿಕೆ, ವಿಶ್ವಾಸದಿಂದ ಮತ ಕೇಳಬಹುದು, ತಲೆ ತಗ್ಗಿಸಿ ಮತ ಕೇಳಬೇಕಾದ ಸ್ಥಿತಿ ಇಲ್ಲ. ಎಲ್ಲ ವರ್ಗಗಳನ್ನೂ ವಿಶ್ವಾಸಕ್ಕೆ ಪಡೆದು ನಡೆದಿದ್ದೇವೆ ಎಂದರು.
ಜನರ ಆರೋಗ್ಯ ಕಾಪಾಡಲು ನಿಮ್ಮ ಆಶೀರ್ವಾದ ಕಾರಣ
ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ರಾಜ್ಯದ ಜನರಿಗೆ ಆರೋಗ್ಯ ಸೇವೆ ನೀಡಲು ಶ್ರಮಿಸಿದ್ದು, ಇದಕ್ಕೆ ನಿಮ್ಮ ಆಶೀರ್ವಾದವೇ ಕಾರಣ. ನೀವು ಆಯ್ಕೆ ಮಾಡಿದ ವ್ಯಕ್ತಿಗೆ ರಾಜ್ಯದ ಜನರ ಆರೋಗ್ಯ ರಕ್ಷಿಸುವ ಜವಾಬ್ದಾರಿ ಸಿಕ್ಕಿದೆ. ಹಾಗಾಗಿ ಸ್ತಿçà ಶಕ್ತಿ ಸಂಘಗಳು, ಯುವಕರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಅವರು ಮನವಿ ಮಾಡಿದರು.
ಮಂಚೇನಹಳ್ಳಿ ಗ್ರಾಪಂ ವ್ಯಾಪ್ತಿಯ ಅಕ್ಕಿಪಿಕ್ಕಿ ಕಾಲೋನಿಗೆ ೧.೫ ಎಕರೆ ಈಗಾಗಲೇ ಮಂಜೂರಾಗಿದ್ದು ಇದಕ್ಕೆ ಸಂಬAಧಿಸಿದ ಹಕ್ಕುಪತ್ರಗಳನ್ನು ನಿಗಧಿತ ದಿನದಂದೇ ವಿತರಿಸಲಾಗುವುದು ಎಂದರು.
ಸಚಿವರು ಭಾಷಣ ಮಾಡುವ ವೇಳೆ ಮಸೀದಿಯಿಂದ ಅಜಾನ್ ಕೇಳಿ ಬಂದ ಕಾರಣ ಪ್ರಾರ್ಥನೆ ನಿಲ್ಲುವವರೆಗೂ ಭಾಷಣ ನಿಲ್ಲಿಸಿದ ಸಚಿವರು ನಂತರ ಮಾತು ಮುಂದುವರಿಸಿ, ಮುಂದೆ ಶುಭ ನಡೆಯಲಿದೆ ಎಂಬುದರ ಸಂಕೇತವಾಗಿ ದೇವರ ಪ್ರಾರ್ಥನೆ ಕೇಳಿದೆ ಎಂದರು.
ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ, ಮಧುಸೂದನ್ ರೆಡ್ಡಿ, ರಂಗಪ್ಪ, ಬಾಬು, ಗ್ರಾಪಂ ಅಧ್ಯಕ್ಷೆ ಖಮರುನ್ನೀಸಾ, ಉಪಾಧ್ಯಕ್ಷ ನರಸಿಂಹರೆಡ್ಡಿ, ರಾಮಾಂಜಿನಪ್ಪ, ಎಂ.ಆರ್. ಗೀತಾ, ಫರೀದಾ ಬಾನು ಸೇರಿದಂತೆ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.