Sunday, 27th October 2024

ಗೌಡಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಪತಿಯ ದೌರ್ಜನ್ಯದ ವಿರುದ್ದ ಮಹೇಶ್ ಆರೋಪ

ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ತಾಲ್ಲೂಕು ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತನುಜಾ ಅವರ ಪತಿ ಬಿಜೆಪಿ ಮುಖಂಡ ಜಿ.ಆರ್.ರಾಜಶೇಖರ್ ಅವರು ದೌರ್ಜನ್ಯ ನಡೆಸುತ್ತಿದ್ದಾರೆ. ಪತ್ನಿಯ ಅಕಾರವನ್ನು ತಾವು ಚಲಾಯಿಸುತ್ತಿದ್ದಾರೆ ಎಂದು ಗೌಡಗೆರೆ ಗ್ರಾ.ಪಂ ಮಾಜಿ ಸದಸ್ಯ ಮಹೇಶ್ ಆರೋಪಿಸಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಸಭೆಯಲ್ಲಿ ಮನೆ ಹಂಚಿಕೆ ವಿಚಾರವಾಗಿ ಪಂಚಾಯಿತಿ ಯಲ್ಲಿ ಗದ್ದಲ ನಡೆದಿದೆ. ಸದಸ್ಯರಿಗೆ ನೋಟಿಸ್ ನೀಡದೆ ಪಿಡಿಒ ಲೋಕೇಶ್ ಸಭೆ ಕರೆದಿದ್ದಾರೆ ಎಂದರು.

ಪಂಚಾಯಿತಿಯಲ್ಲಿ ೧೪ ಸದಸ್ಯರಿದ್ದಾರೆ. ಇವರಲ್ಲಿ ೭ ಸದಸ್ಯರು ಸೇರಿದ್ದಾರೆ. ಅಂದಿನ ಸಭೆಯಲ್ಲಿ ಈ ೭ ಮಂದಿಯೂ ಭಾಗಿಯಾಗದೆ ಅವರ ಪತಿ ಭಾಗಿಯಾಗಿದ್ದರು. ಸಭೆಯಲ್ಲಿ ಅಧ್ಯಕ್ಷೆಯ ಪತಿ ಜಿ.ಆರ್.ರಾಜಶೇಖರ್ ನಡೆಸಿದ ದೌರ್ಜನ್ಯ ಖಂಡಿಸಿ, ದಾಖಲೆ ಸಮೇತ ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಕಾರಿ ಮತ್ತು ಲೋಕಾಯುಕ್ತರಿಗೆ ದೂರು ನೀಡಿದ್ದೇವೆ. ಆದರೆ ಯಾರೂ ಇಲ್ಲಿಯವರೆಗೆ ಕ್ರಮಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಇವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಜನಪ್ರತಿನಿಗಳಿಗೆ ಪಂಚಾತಿಯಲ್ಲಿ ರಕ್ಷಣೆ ಇಲ್ಲ ಅಂದರೆ ಜನಸಾಮಾನ್ಯರಿಗೆ ರಕ್ಷಣೆ ಎಲ್ಲಿದೆ? ಪತ್ನಿಯ ಅಕಾರವನ್ನು ಪತಿ ಚಲಾಯಿಸುವಂತಿಲ್ಲ. ಒಂದು ವೇಳೆ ಆ ರೀತಿಯಲ್ಲಿ ಚಲಾಯಿಸಿದರೆ ಅಂತಹವರ ಸದಸ್ಯತ್ವ ರದ್ದಾಗುತ್ತದೆ. ಜಿಲ್ಲೆಯ ಅಕಾರಿಗಳು ಇಲ್ಲಿ ಕ್ರಮಕೈಗೊಳ್ಳದಿದ್ದರೆ ರಾಜ್ಯ ಲೋಕಾಯುಕ್ತ ರಿಗೆ ಮತ್ತು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು.

ಯಾವುದೇ ಕೆಲಸಕ್ಕೆ ಹೋದರೆ ಪಿಡಿಒ, ರಾಜಶೇಖರ್ ಅವರನ್ನು ಕೇಳಿ ಎನ್ನುತ್ತಾರೆ. ನರೇಗಾ ವಿಚಾರದಲ್ಲಿ ನಡೆದ ಅಕ್ರಮಕ್ಕೆ ಸಂಬಂಸಿದಂತೆ ಈ ಹಿಂದೆ ದೂರು ನೀಡಿದ್ದೆವು. ಓಂಬುಡ್ಸ್‌ಮನ್ ನವರು ತನಿಖೆ ಮಾಡಿ ? ೧ ಲಕ್ಷ ದಂಡ ವಿಸಿದ್ದಾರಂತೆ. ಆದರೆ ಈ ಬಗ್ಗೆ ನಾವು ಮಾಹಿತಿ ಕೇಳಿದ್ದು ದಂಡ ಪಾವತಿಯ ಮಾಹಿತಿ ನೀಡಿಲ್ಲ ಎಂದರು.

ಸಚಿವ ಡಾ.ಕೆ.ಸುಧಾಕರ್ ಅವರು ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳುತ್ತಾರೆ. ಅಂತಹ ಶಿಸ್ತಿನ ಪಕ್ಷದ ಮುಖಂಡರೇ ದೌರ್ಜನ್ಯ ನಡೆಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದರು.

ಗೌಡಗೆರೆ ಗ್ರಾಮದಲ್ಲಿ ಖಬರಸ್ತಾನವನ್ನು ಮುಚ್ಚಿದ್ದಾರೆ. ಈ ಬಗ್ಗೆ ತಹಶೀಲ್ದಾರರಿಗೆ ಅರ್ಜಿ ಕೊಟ್ಟಿದ್ದೇವೆ. ಆದರೆ ಒತ್ತುವರಿ ತೆರವುಗೊಳಿಸಿಲ್ಲ. ಗ್ರಾಮದ ರಾಜಕಾಲುವೆಯನ್ನು ಪ್ರಭಾವಿಗಳು ಮುಚ್ಚಿದ್ದಾರೆ. ಕೆರೆ ನೀರು ಜಮೀನುಗಳಿಗೆ ನುಗ್ಗುತ್ತಿದೆ. ಈ ಬಗ್ಗೆಯೂ ದೂರು ನೀಡಿದ್ದೇವೆ. ಆದರೆ ಮುಚ್ಚಿರುವ ರಾಜಕಾಲುವೆಗಳನ್ನು ಸರಿಪಡಿಸಲು ಸಂಬಂಸಿದವರು ಮುಂದಾಗಿಲ್ಲ ಎಂದು ದೂರಿದರು. ಮುಖಂಡರಾದ ಮುನಿರಾಜು, ನರೇಶ್, ನಾರಾಯಣ ಸ್ವಾಮಿ, ಗಿರೀಶ್ ಗೋಷ್ಠಿಯಲ್ಲಿ ಇದ್ದರು.