Sunday, 27th October 2024

ನಮ್ಮದು ದೇಶದ ಹಿತ ಕಾಪಾಡುವ ಜನಪರ ಬಜೆಟ್ ಆಗಿದೆ : ರಮೇಶ್ ಬಾಯರಿ ಅಭಿಮತ

ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಮಂಡಿ ಸಿದ ೨೦೨೩-೨೪ನೇ ಸಾಲಿನ ಬಡ್ಜೆಟ್ ದೇಶದ ಅಭಿವೃದ್ಧಿಗೆ ಒತ್ತು ನೀಡಿರುವ ಜನಪರವಾದ ಬಡ್ಜೆಟ್ ಆಗಿದೆಯೇ ವಿನಹ ಜನಪ್ರಿಯ ಬಡ್ಜೆಟ್ ಅಲ್ಲ ಎಂದು ಬಿಜೆಪಿ ಪಕ್ಷದ ಜಿಲ್ಲಾ ವಕ್ತಾರ ರಮೇಶ್ ಬಾಯರಿ ಅಭಿಪ್ರಾಯಪಟ್ಟರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಗೆ ಪೂರಕವಾದ ಸರ್ವವ್ಯಾಪಿ ಸರ್ವಸ್ಪರ್ಶಿಯಾದ ಎಲ್ಲ ವರ್ಗದವರಿಗೆ ನೆರವಾಗುವ ಬಡ್ಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ಅವರನ್ನು ಪಕ್ಷದ ವತಿ ಯಿಂದ ಅಭಿನಂದಿಸುತ್ತೇನೆ.ಕಳೆದ ಎರಡು ಮೂರು ವರ್ಷಗಳಿಂದ ಕೇಂದ್ರದ ಆಯವ್ಯ ಯವು ಆತ್ಮನಿರ್ಭರತೆಗೆ ಒತ್ತು ನೀಡಿದ್ದರಿಂದಾಗಿ ಭಾರತದ ಆತ್ಮವಿಶ್ವಾಸ ವೃದ್ಧಿಸಿದೆ. ಆರ್ಥಿಕತೆ ಸದೃಢವಾಗಿದೆ.ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಜಿಡಿಪಿ ಧರ ಆಶಾದಾಯಕವಾಗಿದೆ. ಇದನ್ನು ಅಂತರರಾಷ್ಟ್ರೀಯ ಸಂಸ್ಥೆಗಳು ಕೂಡ ಉಲ್ಲೇಖ ಮಾಡಿವೆ ಎಂದರು.

ನರೇಂದ್ರ ಮೋದಿ ಮುಂದಾಳತ್ವದಲ್ಲಿ ಭಾರತದ ಬೆಳವಣಿಗೆಯಿಂದಾಗಿ ವಿಶ್ವದ ಎದುರು ತಲೆಯೆತ್ತಿ ನಡೆಯುವಂತೆ ಆಗಿದೆ. ಸ್ವಚ್ಛ ಭಾರತ ಅಭಿಯಾನ, ಜಲಜೀವನ್ ಮಿಷನ್, ಮನೆಮನೆಗೆ ಶೌಚಾಲಯ ನಿರ್ಮಾಣ,ರಸ್ತೆ, ವಿದ್ಯುತ್, ಕೃಷಿ, ವಸತಿ, ಅನ್ನ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಇದ್ದ ದಶಕಗಳ ಬೇಡಿಕೆಯನ್ನು ಈಡೇರಿಸಿದ್ದು ೫೫೦೦ ಕೋಟಿ ಅನುದಾನ ಘೋಷಣೆ ಮಾಡಿ ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಸೇರಿಸಿರುವುದು ಕರ್ನಾಟಕ್ಕೆ ನೀಡಿರುವ ಕೊಡುಗೆಯಾಗಿದೆ ಎಂದು ತಿಳಿಸಿದರು

ರಾಜ್ಯದ ಮಟ್ಟಿಗೆ ಹೇಳುವುದಾದರೆ ರೈಲ್ವೆಯೋಜನೆಗಳ ಅಭಿವೃದ್ಧಿಗೆ ೭೫೬೧ ಕೋಟಿ ಅನುದಾನ ಬರಲಿದೆ.ಇದರ ಮೂಲಕ ಹಳ್ಳಿಗಳ ಡಬ್ಲಿಂಗ್, ವಿದ್ಯುದೀಕರಣ, ಹೊಸಯೋಜನೆಗಳ ಅನುಷ್ಟಾನ ಮಾಡಬಹುದು. ಮೆಟ್ರೋ ೪ನೇ ಹಂತದಲ್ಲಿ ಬಿಡದಿ ಮಾಗಡಿವರೆಗೆ ವಿಸ್ತರಣೆ ಆಗಲಿದೆ.ಮೇಕೆದಾಟು ಪ್ರಕರಣ ಇತ್ಯರ್ಥವಾದಕೂಡಲೇ ಯೋಜನೆಗೆ ಬೇಕಾದ ಹಣಕಾಸು ಒದಗಿಸಲಿದೆ.

ಕೃಷಿ ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿ,ಶ್ರೀ ಅನ್ನ ಯೋಜನೆ ಮೂಲಕ ರಾಗಿಗೆ ವಿಶ್ವಮಾನ್ಯತೆ ದೊರೆಯ ಲಿದೆ. ಮಧ್ಯಮ ವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವರಮಾನ ತೆರಿಗೆ ವಿನಾಯಿತಿ ೫ ಲಕ್ಷದಿಂದ ೭ ಲಕ್ಷಕ್ಕೆ ಏರಿಸಿರು ವುದು ಕ್ರಾಂತಿಕಾರಕ ನಡೆಯಾಗಿದೆ ಎಂದು ಬಣ್ಣಿಸಿದರು.

ಕೃಷಿಗೆ ಸಂಬಂಧಿಸಿದಂತೆ ಹೇಳುವುದಾದರೆ ಕೃಷಿ ಸಾಲ ೨೦ ಲಕ್ಷಕೋಟಿಗೆ ಏರಿಕೆಯಾಗಿದ್ದು ೬ಸಾವಿರಕೋಟಿ ಹೆಚ್ಚುವರಿ ಹೂಡಿಕೆ ಈ ಸಾಲಿನಲ್ಲಿ ಆಗಲಿದೆ. ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘಗಳ ಗಣಕೀಕರಣಕ್ಕೆ ೨೫೧೬ಕೋಟಿ ಮಂಜೂರು ಆಗಿದೆ. ಕಬ್ಬ ಸಹಕಾರ ಸಂಘಗಳಿಗೆ ೧೦ಸಾವಿರ ಕೋಟಿ ಪರಿಹಾರ ಘೋಷಣೆಯಾಗಿದೆ.

೧೫೭ ಹೊಸ ನರ್ಸಿಂಗ್ ಕಾಲೇಜು ಬುಡಕಟ್ಟು ಪ್ರದೇಶಗಳಲ್ಲಿ ಸಿಕಲ್‌ಸೆಲ್ ಅನಿಮಿಯಾ ನಿವಾರಣೆ ಮಿಷನ್ ಸ್ಥಾಪನೆ, ಶೈಕ್ಷಣಿಕ ಉನ್ನತಿ ಬಯಸುವ, ಶಿಕ್ಷಕರ ತರಬೇತಿಯನ್ನು ಸುಧಾರಿಸಲು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲಾಗು ವುದು. ಗುಡಿಸಲು ಮುಕ್ತ ಭಾರತ ನಿರ್ಮಾಣ, ಮಕ್ಕಳು ಮತ್ತು ಹದಿಹರೆಯದವರಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸ್ಥಾಪನೆಗೆ ಒತ್ತು ನೀಡಲಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಸಹ ವಕ್ತಾರ ದೇವಸ್ಥಾನ ಹೊಸಹಳ್ಳಿ ರಾಮಣ್ಣ, ಆನಂದ್, ಕೃಷ್ಣಾರೆಡ್ಡಿ, ಮಧುಚ೦ದ್ರ, ನರೇ೦ದ್ರಬಾಬು, ಟೈಲರ್ ಶ್ರೀನಿವಾಸ್, ಅಜಯ್ಪಾಲ್‌ಸಿಂಗ್ ಮತ್ತಿತರರು ಇದ್ದರು.