Tuesday, 15th October 2024

Go shaale: ಗೋಶಾಲೆ ನಡೆಸಲು ತೊಂದರೆ ನೀಡುತ್ತಿರುವ ಸಿಪಿಐ ವಿರುದ್ಧ ಕ್ರಮವಾಗಲಿ-ಶ್ರೀನಿವಾಸರೆಡ್ಡಿ ಆಗ್ರಹ

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕು ಪರಗೋಡು ಅಂಚೆ ಸೋಲಮಾಕಲಪಲ್ಲಿ ಗ್ರಾಮದಲ್ಲಿ ವಿಶ್ವಮಹಾ ಯೋಗಿ ವೇಮನ ಪೌಂಡೇಷನ್ ವತಿಯಿಂದ ನಡೆಸುತ್ತಿರುವ ಪುಣ್ಯಕೋಟಿ ಗೋ ಶಾಲಾ ನಡೆಸುತ್ತಿದ್ದು 70ಕ್ಕೂ ಹೆಚ್ಚು ಅನಾಥ ಹಸುಗಳ ಆರೈಕೆ ಮಾಡಲಾಗುತ್ತಿದೆ.ಇವುಗಳಿಗೆ ಮೇವು ತರಲು ದಾರಿ ಬಿಡದೆ,ಕೆಲಸ ಮಾಡಲು ಬದುವ ಕೂಲಿಗಳನ್ನು ಹೆದರಿಸಿ ತೊಂದರೆ ಕೊಡುತ್ತಿರುವ ಸಿಪಿಐ ಪ್ರಶಾಂತ್‌ವರ್ಣಿ ವಿರುದ್ದ ಕ್ರಮ ಜರುಗಿಸ ಬೇಕೆಂದು ಎಸ್ಪಿ ಅವರಿಗೆ ದೂರು ನೀಡಿರುವುದಾಗಿ ಫೌಂಡೇಷನ್ ಅಧ್ಯಕ್ಷ ಶ್ರೀನಿವಾಸರೆಡ್ಡಿ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಸಿಪಿಐ ಪ್ರಶಾಂತ್ ವರ್ಣಿ ಅವರು ರಾಜಕೀಯ ಪುಡಾರಿಗಳ ಸಖ್ಯ ಬೆಳೆಸಿ ಪರೋಪಕಾರ ಸೇವೆಯಲ್ಲಿ ತೊಡಗಿರುವ ನಮ್ಮ ಗೋಶಾಲೆ ಮೇಲೆ ಧ್ವೇಷಸಾಧನೆ ಮಾಡುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಿದೆ. ನಮ್ಮ ಪುಣ್ಯಕೋಟಿ ಗೋಶಾಲೆಯಲ್ಲಿರುವ ರಾಸುಗಳು ಬಡಕಲು ರಾಸುಗಳಾಗಿದ್ದು ಇವುಗಳಿಗೆ ಕಾಲಕಾಲಕ್ಕೆ ಮೇವು ನೀರು ಸಹಿತ ಚಿಕಿತ್ಸೆಯ ಅಗತ್ಯವಿದೆ. ಇವುಗಳ ಆರೋಗ್ಯ ಸುಧಾರಣೆ ದೃಷ್ಟಿಯಿಂದ ತಮಿಳುನಾಡಿನಿಂದ ಲಾರಿಯಲ್ಲಿ ತರಿಸಿದ್ದ ಹಸಿರುಮೇವನ್ನು ಗೋಶಾಲೆಗೆ ಸಾಗಿಸಲು ಕೂಡ ಅವಕಾಶವಿಲ್ಲದಂತೆ ರಸ್ತೆಯನ್ನು ಮುಚ್ಚಿ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಬಾಗೇಪಲ್ಲಿ ಠಾಣೆಯಲ್ಲಿ ದೂರು ನೀಡಿದರೂ ಸ್ವೀಕರಿಸದೆ ತೊಂದರೆ ಕೊಡುತ್ತಿದ್ದಾರೆ. ಇದರಿಂದ ರೋಸಿ ಹೋಗಿ ಪಿಎಸ್‌ಐ ವಿರುದ್ಧ ಎಸ್ಪಿಗೆ ದೂರು ನೀಡಲಾಗಿದೆ ಎಂದರು.

ಪರಗೋಡು ಪಂಚಾಯಿತಿ ಸೋಲಮಾಕಲಪಲ್ಲಿಯ ಸತೀಶ್ ಬಿನ್ ನಂಜುಂಡಪ್ಪ ಅವರ ಜಮೀನನ್ನು ಬೋಗ್ಯಕ್ಕೆ ಪಡೆದು ಅಲ್ಲಿ ವಿಶ್ವಮಹಾಯೋಗಿ ವೇಮನ ಪೌಂಡೇಷನ್ ವತಿಯಿಂದ £ಪುಣ್ಯಕೋಟಿ ಗೋ ಶಾಲಾ ನಡೆಸುತ್ತಿದ್ದು ೭೦ಕ್ಕೂ ಹೆಚ್ಚು ಅನಾಥ ಹಸುಗಳ ಆರೈಕೆ ಮಾಡಲಾಗುತ್ತಿದೆ. ಸೆ.೨೨ರಂದು ದನಗಳಿಗೆ ತರಿಸಿದ್ದ ಮೇವು ತುಂಬಿದ ಲಾರಿಯನ್ನು ಗೋಶಾಲೆ ಗೇಟಿಗೆ ಬೀಗ ಹಾಕಿ ತಡೆದ ಸುಮಾರು ೮ ರಿಂದ ೧೦ ಮಂದಿ ಲಾರಿ ಚಾಲಕರಿಗೆ ಹಾಗೂ ಗೋಶಾಲೆ ಕೆಲಸಗಾರರನ್ನು ಹೆದರಿಸಿ ಜೀವಬೆದರಿಕೆ ಹಾಕಿ ಲಾರಿಯನ್ನು ವಾಪಸ್ಸು ಕಳಿಸಿದ್ದಾರೆ. ಈ ವಿಚಾರವನ್ನು ಅದೇ ದಿನ ಬಾಗೇಪಲ್ಲಿ ಪೊಲೀಸ್ ಠಾಣೆಗೆ ಬಂದು ಲಿಖಿತ ದೂರಿನ ಮುಖೇನ ತಿಳಿಸಿದರೂ ನಮಗೆ ನ್ಯಾಯ ಕೊಡದೆ, ಜಮೀನು ಮಾಲಿಕರ ಪರವಾಗಿ ವಕಾಲತ್ತು ವಹಿಸಿ ದೂರುದಾರರಿಗೆ ಜೀವ ಬೆದರಿಕೆ ಹಾಕಿ ಮೂಕಜೀವಗಳಿಗೆ ಅನ್ನನೀರು ಇಲ್ಲದಂತೆ ಮಾಡಿದ್ದಾರೆ ಎಂದು ದೂರಿದರು.

ವಿಶ್ವಮಹಾಯೋಗಿ ವೇಮನ ಪೌಂಡೇಷನ್ ಮೂಲಕ ಹಣಪಡೆದು ಗೋಶಾಲೆ ನಡೆಸಲು ಪರಗೋಡು ಪಂಚಾಯಿತಿ ಸೋಲಮಾಕಲಪಲ್ಲಿಯ ಸತೀಶ್ ಬಿನ್ ನಂಜುಂಡಪ್ಪ ಅವರು ತಮ್ಮ ಜಮೀನನ್ನು ಭೋಗ್ಯಕ್ಕೆ ನೀಡಿದ್ದಾರೆ. ಕರಾರಿನಂತೆ ನೀರು ವಿದ್ಯುತ್ ನೀಡದೆ, ದುರುದ್ದೇಶದಿಂದ ಕಡಿತಗೊಳಿಸುವುದು, ಮೇವು ತರುವ ಲಾರಿ ತಡೆದು ಗೇಟಿಗೆ ಬೀಗ ಹಾಕುವುದು, ಗೋಶಾಲೆ ಕೆಲಸಗಾರರಿಗೆ ಧಮ್ಕಿ ಹಾಕುವುದು, ನಾನಿಲ್ಲದ ವೇಳೆಯಲ್ಲಿ ಸಗಣಿಯನ್ನು ಅಕ್ರಮವಾಗಿ ಸಾಗಾಟ ಮಾಡುವುದು ಮಾಡುತ್ತಿದ್ದಾರೆ.

ಇದರಿಂದ ರೋಸಿಹೋದ ನಾನು ಬಾಗೇಪಲ್ಲಿ ನ್ಯಾಯಾಲಯದಲ್ಲಿ ಭೂಮಿ ಮಾಲಿಕರ ವಿರುದ್ಧ ಕೇಸು ದಾಖಲಿ ಸಿದ್ದೇನೆ. ಇದನ್ನು ಸಹಿಸದ ಸಿಪಿಐ ಪ್ರಶಾಂತ್‌ವರ್ಣಿ ಭೂಮಾಲಿಕರ ಜತೆ ಶಾಮೀಲಾಗಿ ನನಗೆ ಕೇಸು ವಾಪಸ್ಸು ಪಡೆಯಲು ಮಾನಸಿಕ ಹಿಂಸೆ ನೀಡುತ್ತಾ, ಗೋಶಾಲೆ ಎತ್ತಂಗಡಿ ಮಾಡಿ ಜಾಗ ಖಾಲಿ ಮಾಡುವಂತೆ ಒತ್ತಡ ಹಾಕು ತ್ತಿದ್ದಾರೆ. ಗೋಶಾಲೆಯ ದನಗಳಿಗೆ ಮೇವು ಸಾಗಿಸಲಾಗದಂತೆ ಗೇಟಿಗೆ ಬೀಗ ಹಾಕಿಸಿ ತೊಂದರೆ ಕೊಡುತ್ತಿದ್ದಾರೆ. ಆದ್ದರಿಂದ ಈ ಅಧಿಕಾರಿ ಮತ್ತು ಇವರ ಕುಮ್ಮಕಿನಿಂದ ದೌರ್ಜನ್ಯ ಎಸಗುತ್ತಿರುವವರ ವಿರುದ್ದ ಕಾನೂನಿನಂತೆ ಕ್ರಮಜರುಗಿಸಬೇಕು ಎಂದು ಎಸ್ಪಿ ಅವರಿಗೆ ಮನವಿ ಮಾಡಿದರು.

ಸತೀಶ್ ಬಿನ್ ನಂಜುಂಡಪ್ಪ ಅವರ ಗೂಂಡಾವರ್ತನೆ ವಿರುದ್ಧ ಪ್ರಶಾಂತ್‌ವರ್ಣಿ ಅವರಿಗೆ ದೂರು ನೀಡಿದರೂ ಕ್ರಮಜರುಗಿಸುವ ಬದಲು, ದೂರು ನೀಡಲು ಹೋದ ನನಗೇ ಜಾಗ ಖಾಲಿ ಮಾಡಲು ತಾಕೀತು ಮಾಡುತ್ತಾರೆ. ಇದರಿಂದ ನೊಂದ ನಾನು ದೈನ್ಯದಿಂದ  ನನ್ನ ಭೋಗ್ಯದ ಹಣವಾಪಸ್ಸು ಕೊಡಿಸಿ, ನಾನಿಲ್ಲದ ವೇಳೆ ಕದ್ದು ಸಾಗಸಿರುವ ಸಗಣಿಯ ಹಣ ನನನಗೆ ಕೊಡಿಸಿದರೆ ಈಗಲೇ ಜಾಗ ಖಾಲಿ ಮಾಡುವುದಾಗಿ ತಿಳಿಸಿದರೂ ಕೇಳದೆ, ಯಾರಿಗೆ ಬೇಕಾದರೂ ದೂರು ಕೊಡು, ನಾನು ನಿನ್ನ ದೂರು ತೆಗೆದುಕೊಳ್ಳುವುದಿಲ್ಲ. ಮೊದಲು ಜಾಗ ಖಾಲಿ ಮಾಡು ಎನ್ನುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿದ್ದಾರೆ. ಇಂತಹ ದರ್ಫದೌರ್ಜನ್ಯ ತೋರುವ ಅಧಿಕಾರಿ ಮೇಲೆ ಕಾನೂನಿನಂತೆ ಕ್ರಮ ತೆಗೆದುಕೊಂಡು ನಮಗೆ ನ್ಯಾಯಕೊಡಬೇಕು. ಎಸ್ಪಿ ಸಾಹೇಬರೇ ಸ್ಥಳತನಿಖೆ ಮಾಡಿ ಗೋಶಾಲೆ ನಡೆಸಲು ಸೂಕ್ತರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Chikkaballapur News: ಮಾರಕ ಕುಲಾಂತರಿ ತಳಿ ಬಿತ್ತನೆ ಬೀಜದ ವಿಷ ವರ್ತುಲಕ್ಕೆ ಸರಕಾರ ಅವಕಾಶ ನೀಡಬಾರದು- ಎಂ.ಆರ್.ಲಕ್ಷ್ಮೀನಾರಾಯಣ