ಚಿಕ್ಕಮಗಳೂರು: ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯವರು ಭಾರೀ ಭ್ರಷ್ಟಾಚಾರ ಹಾಗೂ ದಲಿತರ ನೌಕರರಿಗೆ ಜಾತಿ ನಿಂದನೆ ಮಾಡಿ ಅವಮಾನಿ ಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ದಲಿತ ಸಂಘಟನೆಗಳ ಐಕ್ಯತಾ ಚಾಲನ ಸಮಿತಿ ಒತ್ತಾಯಿಸಿದೆ.
ಈ ಸಂಬ0ಧ ಆಯುಕ್ತ ರಾಕೇಶ್ ಅವರಿಗೆ ಶುಕ್ರವಾರ ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಸಿದ ಸಮಿತಿಯ ಪದಾಧಿ ಕಾರಿಗಳು ಜಿಲ್ಲಾ ಸಮಾಜ ಕಲ್ಯಾಣಧಿ ಕಾರಿ ಚೈತ್ರ ಅವರು ಭಾರೀ ಭ್ರಷ್ಟಚಾರ ಹಾಗೂ ದಲಿತರನ್ನು ಅವಮಾನಿಸಿ ಅಧಿಕಾರದಲ್ಲಿ ಮೆರೆಯುತ್ತಿದ್ದು ಕೂಡಲೇ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ವಿದ್ಯಾರ್ಥಿ ನಿಲಯಕ್ಕೆ ಹೈಮಾಸ್ಕ್ ಲೈಟ್‌ಗಳ ಖರೀದಿಯಲ್ಲಿ ಕಳಪೆ ಗುಣಮಟ್ಟದ ಉಪಕರಣಗಳನ್ನು ಖರೀದಿಸಿ ಭ್ರಷ್ಟಚಾರ ಎಸಗಲಾಗಿದೆ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ನಿರ್ವಹಣೆ ವೆಚ್ಚದ ಅನುದಾನವನ್ನು ಯಾವುದೇ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಲಕ್ಷಾಂತರ ಮೌಲ್ಯದ ಸ್ಟೀಮ್ ಕುಕ್ಕರ್ ಖರೀದಿಸಿ ನಂತರ ನೇರ ಯಂತ್ರ ಪಕರಣಗಳನ್ನು ಸ್ಥಾಪಿಸಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿನಿಲಯಗಳ ನಾಮಫಲಕವನ್ನು ಅತಿಹೆಚ್ಚಿನ ಮೊತ್ತಕ್ಕೆ ಕೊಟೇಷನ್ ಮೂಲಕ ಮಾಡಿದ್ದು ಇದು ಕೆಟಿಟಿಪಿ ಕಾಯ್ದೆಯ ವಿರುದ್ಧವಾಗಿದೆ. ಜೊತೆಗೆ ನೇರ ಟೆಂಡರ್ ಮಾಡದೇ ನಿರ್ಲಕ್ಷö್ಯವಹಿಸಿರುವುದರಿಂದ ಹಣ ದುರುಪಯೋಗವಾಗಿದೆ ಮತ್ತು ತಾಲ್ಲೂಕು ವ್ಯಾಪ್ತಿಯ ಆಹಾರ ಬೇಡಿಕೆಯಲ್ಲಿ ಭಾರಿ ಅವ್ಯವಹಾರ ಮಾಡಿ ಭ್ರಷ್ಟಚಾರವೆಸಗಲಾಗಿದೆ ಎಂದು ದೂರಿದರು.
ಕೊಪ್ಪ, ಎನ್.ಆರ್.ಪುರ ಹಾಗೂ ಶೃಂಗೇರಿಯಲ್ಲಿ ಲೆಕ್ಕ ಅಧೀಕ್ಷಕರ ಹುದ್ದೆಗಳನ್ನು ಹಣದ ಆಸೆಗಾಗಿ ನೀಡಿ ಆಡಳಿತ ದುರ್ಬಳಕೆಯಾಗಿದೆ. ಉಪ ನಿರ್ದೇಶಕರಾಗಿ ಚೈತ್ರ ಅವರು ಈ ಹಿಂದೆ ಕರ್ತವ್ಯ ನಿರ್ವಹಿಸಿದ ಹಾವೇರಿ ಜಿಲ್ಲೆಯ ಸರಕು- ಸೇವದಾರರಿಂದ ಮಾತ್ರ ಹೆಚ್ಚಿನ ಸರಕನ್ನು ಖರೀದಿಸಿರುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಪ್ರಶ್ನಿಸಿದ್ದಾರೆ.
ಕೂಡಲೇ ಎಲ್ಲಾ ಅಂಶಗಳನ್ನು ಪರಿಗಣಿಸಿ ಸಮಾಜ ಕಲ್ಯಾಣಾಧಿಕಾರಿ ಚೈತ್ರ ಹಾಗೂ ಇವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭ್ರಷ್ಟ ಅಧಿಕಾರಿ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಪ್ರಗತಿಪರ ಚಿಂತಕ ಅಂಗಡಿ ಚಂದ್ರು, ಸಂತೋಷ ದಾವಣಗೆರೆ, ಜಿಲ್ಲಾ ಪ್ರಧಾನ ಸಂಚಾಲಕ ದುಗ್ಗಪ್ಪ, ಹಾವೇರಿ ಜಿಲ್ಲಾ ಪ್ರಧಾನ ಸಂಚಾಲಕ ಮೆಣಸಿನಹಾಳ ಮುಂತಾದವರು ಉಪಸ್ಥಿತರಿದ್ದರು.