ಚಿಕ್ಕನಾಯಕನಹಳ್ಳಿ: ಸಮೀಪದ ಮೇಲನಹಳ್ಳಿ ಮೊರಾರ್ಜಿ ವಸತಿಶಾಲೆಯ ಅಭಿವೃದ್ದಿಗೆ ನರೇಗ ಯೋಜನೆಯಡಿ 36 ಲಕ್ಷ ರೂ ವೆಚ್ಚದ ವಿವಿಧ ಕಾಮಗಾರಿಗೆ ಶಾಸಕ ಸಿ.ಬಿ.ಸುರೇಶ್‌ಬಾಬು ಚಾಲನೆ ನೀಡಿದರು.
ಕಸಬಹೋಬಳಿ ಹೊನ್ನೆಬಾಗಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮೊರಾರ್ಜಿ ವಸತಿ ಶಾಲೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯಡಿ ಕಾಂಪೌoಡ್ ನಿರ್ಮಾಣಕ್ಕಾಗಿ ರೂ.30 ಲಕ್ಷ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಶೌಚಾಲಯ ನಿರ್ಮಿಸಲು 4 ಲಕ್ಷ ಹಾಗೂ 2 ಲಕ್ಷ ರೂ. ಅನುದಾನದಲ್ಲಿ ಆಟದ ಮೈದಾನ ನಿರ್ಮಾಣದ ಕಾಮಗಾರಿಗೆ ಶಾಸಕ ಸಿ.ಸುರೇಶ್ ಬಾಬು ಭೂಮಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ನರೇಗ ಯೋಜನೆಯಡಿ ಈಗ ಸರ್ಕಾರಿ ಶಾಲೆಗಳಲ್ಲಿ ಮೂಲಭೂತಸೌಕರ್ಯಗಳ ಕೊರೆತೆಯನ್ನು ನೀಗಿಸಲು ಅವಕಾಶವಿದೆ. ಗ್ರಾಮ ಪಂಚಾಯಿತಿಗಳು ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಗುರುತಿಸಿ ಅದಕ್ಕೆ ಬೇಕಾದ ಶೌಚಾಲಯ, ಆಟದ ಮೈದಾನ ದಂತಹ ಸೌಕರ್ಯಗಳನ್ನು ನಿರ್ವಹಿಸಬೇಕೆಂದರು. ಈ ಸಂದರ್ಭದಲ್ಲಿ ಹೊನ್ನೇಬಾಗಿ ಪಂಚಾಯಿತಿ ಅಧ್ಯಕ್ಷರಾದ ಶೈಲಶಶಿಧರ್, ಪಿಡಿಓ ಭೈರಪ್ಪ, ಸದಸ್ಯರಾದ ನವಿಲೆಕುಮಾರ್, ಹೊನ್ನೇಬಾಗಿಯ ಎಚ್.ಎಸ್. ಸುಹಾಸ್, ಹಾಗೂ ಗ್ರಾಮಸ್ಥರು ನಂದೀಶ್ ಹಾಗು ಇತರರಿದ್ದರು.