ಚಿಕ್ಕಬಳ್ಳಾಪುರ: ಒಕ್ಕೂಟದ ಆಡಳಿತಾಧಿಕಾರಿ ಅನುಮೋದನೆ ಮೇರೆಗೆ ಕಹಾಮವು ನಂದಿನಿ ಹಾಲು ಮತ್ತು ಮೊಸರಿನ ಮಾರು ಕಟ್ಟೆ ದರಗಳನ್ನು ದಿನಾಂಕ:೨೪.೧೧.೨೦೨೨ ರಿಂದ ಪ್ರತಿ ಲೀಟರ್ , ಕೆ.ಜಿ.ಗೆ ರೂ.೨ ಗಳನ್ನು ಹೆಚ್ಚಿಸಿದ್ದು, ಹೆಚ್ಚಿಸಿದ ಸಂಪೂರ್ಣ ಮೊತ್ತವನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಲು ಸೂಚಿಸಿದೆ.
ಜೊತೆಗೆ ಒಕ್ಕೂಟದ ಹಾಲು ಶೇಖರಣೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆ ಯಲ್ಲಿ, ಒಕ್ಕೂಟವು ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧೀರ್ಘವಾಗಿ ಚರ್ಚಿಸಿ ಹಾಲು ಉತ್ಪಾದಕರು,ಸಂಘಗಳು, ಒಕ್ಕೂಟದ ಹಿತದೃಷ್ಟಿಯಿಂದ ಪ್ರಸ್ತುತ ಹಾಲು ಶೇಖರಣೆ ಮತ್ತು ಗುಣಮಟ್ಟ ಪ್ರೋತ್ಸಾಹಿಸಲು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಹೈನು ಉತ್ಪಾದಕರಿಗೆ ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ ೨.ರೂಗಳನ್ನು ಹೆಚ್ಚಿಸಿ ದರ ಪರಿಷ್ಕರಿಸಲಾಗಿರುತ್ತದೆ. ಈ ಧರಗಳು ಡಿಸೆಂಬರ್ ೧ರ ಬೆಳಗಿನ ಸರತಿಯಿಂದಲೇ ಅನ್ವಯವಾಗುವಂತೆ ತೀರ್ಮಾನಿಸಲಾಗಿರುತ್ತದೆ.
ಪರಿಷ್ಕೃತ ದರವು ದಿನಾಂಕ:೦೧.೧೨.೨೦೨೨ ರ ಬೆಳಗಿನ ಸರತಿಯಿಂದ ಅನ್ವಯ ವಾಗಲಿದ್ದು, ಉಳಿದಂತೆ ದರಪಟ್ಟಿಯು ಎಲ್ಲಾ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಹಾಲಿನ ಪರಿಷ್ಕರಣೆ ವಿಷಯವನ್ನು ಸಂಘದ ಸೂಚನಾ ಫಲಕದಲ್ಲಿ ಭಿತ್ತರಿಸಲಾಗಿದೆ.ಸಮಸ್ತ ಹಾಲು ಉತ್ಪಾದಕರು ಇದರ ಸದುಪಯೋಗ ಪಡೆದುಕೊಳ್ಳ ಬೇಕು.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಡ್ಡಾಯವಾಗಿ ಹಾಲಿನ ಜಿಡ್ಡಿನ ಪರೀಕ್ಷೆ ನಡೆಸಿ ಒಕ್ಕೂಟದ ದರಪಟ್ಟಿಯಂತೆ ದರ ಪಾವತಿಸತಕ್ಕದ್ದು, ಆಹಾರ ಸುರಕ್ಷತಾ ಕಾಯ್ದೆ ಅನ್ವಯ ಶುದ್ಧ, ಗುಣಮಟ್ಟ ಮತ್ತು ಕಲಬೆರಕೆ ರಹಿತ ಹಾಲನ್ನು ಸಂಗ್ರಹಿಸಿ ಒಕ್ಕೂಟಕ್ಕೆ ಸರಬರಾಜು ಮಾಡುವ ಮೂಲಕ ಒಕ್ಕೂಟ, ಸಂಘ, ಹಾಲು ಉತ್ಪಾದಕರ ಅಭಿವೃದ್ಧಿಗೆ ಎಂದಿನ0ತೆ ಸಹಕರಿಸಬೇಕು
ಪರಿಷ್ಕರಣೆ ಆಗಿರುವ ದರದ ಜೊತೆಗೆ ಸರ್ಕಾರವು ಪ್ರತಿ ಲೀಟರ್ ಹಾಲಿಗೆ ೫ ರೂಗಳ ಪ್ರೋತ್ಸಾಹಧನವನ್ನು ಹಾಲು ಉತ್ಪಾದಕರಿಗೆ ನೀಡುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
*ಹಾಲಿ ಗುಣಮಟ್ಟ ಆಧಾರದ ದರ ಹೆಚ್ಚಳದ ವಿವರ
೧) ಶೇ. ೪.೦ ಫ್ಯಾಟ್ ಮತ್ತು ಶೇ.೮.೫೦ ಎಸ್.ಎನ್.ಎಫ್ -೩೧.೯೦ ರೂ
೨ ಶೇ. ೩.೯ ಫ್ಯಾಟ್ ಮತ್ತು ಶೇ.೮.೫೦ಎಸ್.ಎನ್.ಎಫ್ -೩೧.೭೨ರೂ
೩) ಶೇ. ೩.೮ ಫ್ಯಾಟ್ ಮತ್ತು ಶೇ ೮.೫೦ ಎಸ್.ಎನ್.ಎಫ್ ೩೧.೫೪ರೂ
೪ )ಶೇ. ೩.೭ ಫ್ಯಾಟ್ ಮತ್ತು ಶೇ.೮.೫೦ ಎಸ್.ಎನ್.ಎಫ್ ೩೧.೩೬ರೂ
೫) ಶೇ. ೩.೬ ಫ್ಯಾಟ್ ಮತ್ತು ಶೇ.೮.೫೦ ಎಸ್.ಎನ್.ಎಫ್ ೩೧.೧೮ರೂ
೬) ಶೇ. ೩.೫ ಫ್ಯಾಟ್ ಮತ್ತು ಶೇ.೮.೫೦ ಎಸ್.ಎನ್.ಎಫ್ ೩೧. ರೂ