ಕೊಲ್ಹಾರ: ಭಾರತ ದೇಶದ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕ ಪರಶುರಾಮ ಚಿಮ್ಮಲಗಿ ಹೇಳಿದರು.
ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ(ಎನ್ ಮೂರ್ತಿ) ಬಣದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡು ಅವರು ಮಾತನಾಡಿದರು ದೇಶದ ಪ್ರಜಾಪ್ರಭುತ್ವ ತಳಪಾಯ ನಿಂತಿರುವುದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿರುವ ಸಾಂವಿಧಾನಿಕ ಚೌಕಟ್ಟಿನಲ್ಲಿ. ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯ ಹಕ್ಕು ನೀಡುವ ಮೂಲಕ ವ್ಯಕ್ತಿ ಮತ್ತು ಸಾಮು ದಾಯಿಕ ಬದುಕಿಗೆ ಧಕ್ಕೆಯಾಗದ ಹಾಗೆ ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಸರ್ವರಿಗೂ ನೀಡಿದೆ. ಸರ್ವರು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿಯುತ್ತಾ ಮುನ್ನಡೆಯಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕದ ತಾಲೂಕ ಅಧ್ಯಕ್ಷೆ ಸರೋಜಾ ವಾಲಗದ, ರೇಣುಕಾ ಗಡ್ಡಿ, ಕಲ್ಲಪ್ಪ ಗಣಿ, ಹಣಮಂತ ದಾನಪ್ಪಗೋಳ, ಲಲಿತಾ ನಾಗರಾಳ ಹಾಗೂ ಎಲ್ಲಾ ಪದಾಧಿಕಾರಿಗಳು ಹಾಗೂ ಇತರರು ಇದ್ದರು.