ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಕಳ್ಳರನ್ನು ಬಂಧಿಸಿದ ಪೊಲೀಸರು
ಚಿಂತಾಮಣಿ : ಇತ್ತೀಚೆಗೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯನಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಸಿ ವಿ ಕೃಷ್ಣಾರೆಡ್ಡಿ ಅವರ ಮನೆಯ ಬೀಗ ಹೊಡೆದು ಚಿನ್ನದ ಒಡವೆಗಳು ಕಳ್ಳತನ ಮಾಡಲಾಗಿತ್ತು. ಇದೇ ರೀತಿ ತಾಲ್ಲೂಕಿನ ಕಾಗತಿ ಗ್ರಾಮದ ರಾಜಪ್ಪ ಅವರ ಮನೆಗೂ ಕನ್ನ ಹಾಕಿ ಒಡವೆಗಳನ್ನು ದೋಚಿ ಪರಾರಿಯಾಗಿದ್ದರು.
ಪೊಲೀಸರು ಈ ಎರಡೂ ಪ್ರಕರಣ ದಾಖಲಿಸಿಕೊಂಡು ಕಳ್ಳರನ್ನು ಪತ್ತೆ ಹಚ್ಚಲು ಮುಂದಾಗಿದ್ದರು.
ಇದಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜಾ ಇಮಾಮ್ ಖಾಸಿಂ, ಡಿವೈಎಸ್ಪಿ ಮುರಳಿಧರ್,ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜು ಎಸ್,ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನಸ್ಪೆಕ್ಟರ್ ಪುನೀತ್ ನಂಜುರಾಯ್, ಸಬ್ ಇನ್ಸ್ಪೆಕ್ಟರ್ ಮಮತಾ ಇ ಎಂ, ನಾಗೇಂದ್ರ ಪ್ರಸಾದ್ ತನಿಖಾ ತಂಡವನ್ನು ರಚಿಸಲಾಗಿತ್ತು.
ಈ ತಂಡ ಪ್ರಕರಣಗಳ ಮಾಹಿತಿಗಳನ್ನು ಪಡೆದು ವೈಜ್ಞಾನಿಕವಾಗಿ ತನಿಖೆಯನ್ನು ಕೈಗೊಂಡು ಕಳ್ಳತನ ಪ್ರಕರಣ ದಲ್ಲಿ ಭಾಗಿಯಾಗಿದ್ದ ಮಹೇಶ್ ಅಲಿಯಾಸ್ ಉಪ್ಪಾರ್ ಮಹೇಶ್ ಬಿನ್ ಗುರಪ್ಪ ೨೫ ವರ್ಷ ಹಿಂದುಪುರ ಸತ್ಯ ಸಾಯಿ ಜಿಲ್ಲಾ ಆಂಧ್ರ ಪ್ರದೇಶ್, ಮುದಾಸ್ಸಿರ್ ಪಾಷಾ ಬಿನ್ ಲೇಟ್ ಅಬ್ದುಲ್ ಬಶೀರ್ ೩೩ ವರ್ಷ ಜಾಲಿ ಮೊಹಲ್ಲಾ, ಕಾಟನ್ ಪೇಟೆ ಬೆಂಗಳೂರು, ಸುಲ್ತಾನ್ ಬಾಷಾ ಬಿನ್ ಸೈಯದ್ ಆಸಿಫ್ ಭಾಷಾ ೨೨ ವರ್ಷ ಚಿಂತಾಮಣಿ ತಾಲ್ಲೂಕು ಚಿನ್ನಸಂದ್ರ ಗ್ರಾಮ ಎಂಬುವರನ್ನು ವಶಕ್ಕೆ ಪಡೆದು ಅವರಿಂದ ಸುಮಾರು ೪೭ ಲಕ್ಷದ ೬೮ ಸಾವಿರಾರು ಬೆಲೆ ಬಾಳುವ ಚಿನ್ನದ, ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಇಂದು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಮುಂಭಾಗ ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿ ಗಳಾದ ಕುಶಾಲ್ ಚೌಕ್ಸೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪೊಲೀಸರು ಕಳ್ಳತನ ಮಾಡಿರುವ ಮೂವರು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆಯೂ ಸಹ ಈ ಮೂವರುಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸದರಿ ಪ್ರಕರಣಗಳನ್ನು ಪತ್ತೆ ಮಾಡಿ ಯಶಸ್ವಿಯಾದ ಪೊಲೀಸ್ ತಂಡದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಅಧಿಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.