Thursday, 12th December 2024

Bescom: ಬೆಸ್ಕಾಂ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ

ಚಿಕ್ಕನಾಯಕನಹಳ್ಳಿ : ಬೆಸ್ಕಾಂ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಹಾಗು ಬಯೋಮೆಟ್ರಿಕ್ ಅಳವಡಿಸಲು ಕಚೇರಿ ಮುಖ್ಯಸ್ಥರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸರಕಾರಿ ಕಚೇರಿಗಳಲ್ಲಿ ಸಿ.ಸಿ.ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು. ಬಯೋಮೆಟ್ರಿಕ್ ಅಳವಡಿಸಿ ಬೆಳಗ್ಗೆ 10 ಗಂಟೆಯೊಳಗೆ ನೌಕರರು ಕಚೇರಿಗೆ ಆಗಮಿಸಿ ಬೆರಳಚ್ಚು ನೀಡುವಂತೆ ಆದೇಶವಿದ್ದರೂ ಇಲ್ಲಿ ಈ ಆದೇಶ ಇದುವರೆಗೂ ಪಾಲನೆಯಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಸಾರ್ವಜನಿಕರ ಅಭಿಪ್ರಾಯದಂತೆ ಸಿಬ್ಬಂದಿಗಳು ಮುಖ್ಯದ್ವಾರದ ಮೂಲಕ ಪ್ರವೇಶಿಸಿ ತಮ್ಮ ಕೊಠಡಿಗೆ ಹೋಗಿ ಕುಳಿತರೆ ಸಿಬ್ಬಂದಿಯ ಕಾರ್ಯ ವೈಖರಿ ವೀಕ್ಷಿಸಲು ಸಾಧ್ಯವಿಲ್ಲದ ರೀತಿ ಕಚೇರಿ ಇದೆ. ಸಿಬ್ಬಂದಿ ಹಿಂಬಾಗಿಲಿನಿ0ದ ಕಚೇರಿಯನ್ನು ಪ್ರವೇಶಿಸಬಹುದು. ಇದೆನ್ನಲ್ಲಾ ಮನಗಂಡು ಬೆಸ್ಕಾಂ ಎಇಇ ಕ್ಯಾಮಾರವನ್ನು ಅಳವಡಿಸಿ ಆಡಳಿತ ವನ್ನು ತಮ್ಮ ಕೊಠಡಿಯ ಮೂಲಕವೇ ನೋಡಬಹುದಾದಂಥ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಸಿ.ಸಿ. ಕ್ಯಾಮೆರಾ ಅಳವಡಿಸಿದರೆ ಕಚೇರಿಯ ಸಿಬ್ಬಂದಿಯಾಗಲಿ, ಸಾರ್ವಜನಿಕರಾಗಲಿ, ನೌಕರರು ಕಚೇರಿಗೆ ಬಂದು ಹೋಗುವ ಸಮಯ ಗೋತ್ತಾಗುವುದರಿಂದ ಯಾರನ್ನು ಯಾಮಾರಿಸಂಥ ಪರಿಸ್ಥಿತಿ ನಿರ್ಮಾಣವಾಗಲಿದೆ. ಆಡಳಿತ ಚುರುಕುಗೊಳ್ಳುವುದರ ಜತೆಗೆ ಭ್ರಷ್ಟಾಚಾರ ತಡೆಗಟ್ಟಬಹುದಾಗಿದೆ ಎಂದು ರೈತ ಮುಖಂಡ ರಾಮನಹಳ್ಳಿ ಕುಮಾರಯ್ಯ ಅಭಿಪ್ರಾಯಪಟ್ಟರು.

ಇದನ್ನೂ ಓದಿ: Iran Attacks Israel : ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರು; ಇಸ್ರೇಲ್‌ ಮೇಲೆ 400 ಕ್ಷಿಪಣಿಗಳ ದಾಳಿ ನಡೆಸಿದ ಇರಾನ್‌