Thursday, 21st November 2024

Clash: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಎರಡು ಗುಂಪಿನ ನಡುವೆ ಗಲಾಟೆ; ಚಾಕು ಇರಿತ

ಗಂಗಾವತಿ: ನಗರದಲ್ಲಿ ಸೋಮವಾರ ರಾತ್ರಿ ನಡೆದ ಗಣೇಶ ವಿಸರ್ಜನೆ (Ganesh Visarjan) ಮೆರವಣಿಗೆಯಲ್ಲಿ ಎರಡು ಗುಂಪಿನ ಯುವಕರ ನಡುವಿನ ಗಲಾಟೆಯಲ್ಲಿ ದುಷ್ಕರ್ಮಿಗಳು ಯುವಕನೊಬ್ಬನಿಗೆ ಚಾಕುವಿನಿಂದ ಇರಿದಿದ್ದಾರೆ.

ಗಂಗಾವತಿಯ ಗುಂಡಮ್ಮ ಕ್ಯಾಂಪ್‌ ಏರಿಯಾ ಬಳಿ ಘಟನೆ ನಡೆದಿದ್ದು, ಗಂಗಾವತಿಯ ಅಂಬೇಡ್ಕರ್ ನಗರದ ಶಿವಕುಮಾರ (38) ಎಂಬ ಯುವಕನಿಗೆ ಚಾಕು ಇರಿತಕ್ಕೆ ಒಳಗಾಗಿ, ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಲ್ಲಿ ಗುಂಡಮ್ಮ ಕ್ಯಾಂಪ್‌ನ ಸಾಗರ್, ಮಂಜುನಾಥ ಮತ್ತು ಗಣೇಶ ಎಂಬ ಮೂವರು ಯುವಕರು ಹಲ್ಲೆಗೆ ಒಳಗಾಗಿ ಗಾಯಗೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬಹುತೇಕ ಸಾರ್ವಜನಿಕ ಗಣೇಶ ಮೂರ್ತಿ ಯಾವುದೇ ಅಹಿತಕರ ಘಟನೆ ಇಲ್ಲದಂತೆ ವಿಸರ್ಜಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಅಲ್ಲೊಂದು ಇಲ್ಲೊಂದು ಗಣೇಶ ಮೂರ್ತಿ ವಿಸರ್ಜನೆಗೆ ಬಾಕಿ ಇವೆ. 17ನೇ ದಿನವಾದ ಮಂಗಳವಾರ ಗಂಗಾವತಿಯಲ್ಲಿ ಐದು ಗಣೇಶ ಮೂರ್ತಿ ವಿಸರ್ಜನೆಗೆ ಮೆರವಣಿಗೆ ನಡೆದಾಗ ಗಲಾಟೆ ನಡೆದಿದೆ.

ಗುಂಡಮ್ಮ ಕ್ಯಾಂಪ್‌ನಲ್ಲಿ ಗಜಾನನ ಯುವಕರ ಸಂಘ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಯಲ್ಲಿ ಘಟನೆ ನಡೆದಿತ್ತು. ಡಿಜೆಯೊಂದಿಗೆ ನಡೆದ ಮೆರವಣಿಗೆಯಲ್ಲಿ ಯುವಕರು ಡ್ಯಾನ್ಸ್‌ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಗುಂಪಿನ ಯುವಕರ ನಡುವೆ ಗಲಾಟೆ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ವಿಕೋ ಪಕ್ಕೆ ತಿರುಗಿ ಚಾಕುವಿಂದ ಯುವಕನಿಗೆ ಇರಿಯಲಾಗಿದೆ. ಹಳೇ ದ್ವೇಷ ಗಲಾಟೆಗೆ ಕಾರಣ ಎಂದು ಹೇಳಲಾ ಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಒಟ್ಟು 9 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಮೂವರನ್ನು ವಶಕ್ಕೆ ಪಡೆದುಕೊಳ್ಳ ಲಾಗಿದೆ. ಇನ್ನುಳಿದವರನ್ನು ಸಹ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತದೆ. ಘಟನಾ ಸ್ಥಳದಲ್ಲಿ ಶಾಂತಿ ವಾತಾವರಣವಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್. ಅರಸಿದ್ದಿ ಹೇಳಿದ್ದಾರೆ.

ಇದನ್ನೂ ಓದಿ: Drug Mafiya: ಭತ್ತದ ನಾಡಲ್ಲಿ ಡ್ರಗ್‌ ಮಾಫಿಯಾ ಘಾಟು