Thursday, 12th September 2024

ಆ.೧೫ರೊಳಗೆ ಸಿಎಂ ಬದಲಾವಣೆ: ಸುರೇಶ್ ಗೌಡ ಭವಿಷ್ಯ

ಸಚಿವೆ ಶೋಭಾ ಕರಂದ್ಲಾಜೆ ಮುಂದಿನ ಮುಖ್ಯಮಂತ್ರಿ?

ತುಮಕೂರು: ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಯಾವಾಗ ಬೇಕಾದರೂ ಬದಲಾಗಬಹದು. ಆ.೧೫ರೊಳಗೆ ರಾಜ್ಯದ ಸಿಎಂ ಬದಲಾದರೂ ಆಶ್ರ‍್ಯಪಡಬೇಕಿಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ನರ‍್ಧಾರಕ್ಕೆ ನಾವು ಬದ್ಧರಾಗಿರಬೇಕು. ಬೊಮ್ಮಾಯಿ ಅವರು ಉತ್ತಮ ಆಡಳಿತ ನಡೆಸುವ ಮೂಲಕ ಮಾದರಿ ಯಾಗಿದ್ದಾರೆ ಎಂದರು.

ಶೋಭಾ ಕರಂದ್ಲಾಜೆ ಅವರು ಸಿಎಂ ಆಗುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದ್ದೆ ಈ ಬಗ್ಗೆ ಅವರು ಏನೂ ಹೇಳಲಿಲ್ಲ. ಶೋಭಾ ಕರಂದ್ಲಾಜೆ ಅವರು ಸಿಎಂ ಆಗುತ್ತಾರೆ ಎಂದು ನಾನೂ ಎಲ್ಲಿಯೂ ಹೇಳಿಲ್ಲ, ಇದು ಮಾಧ್ಯಮದ ಸೃಷ್ಟಿ. ಬಿಜೆಪಿ ಪಕ್ಷದಲ್ಲಿ ವಿಧಾನಸಭಾ ಚುನಾವಣೆ ಆರೇಳು ತಿಂಗಳು ಇರುವಾಗ ಸಿಎಂ ಬದಲಾ ಗುತ್ತಾರೆ. ಆ.೧೫ರೊಳಗೆ ಏನೂ ಬೇಕಾದರೂ ಆಗಬಹುದು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಸಿಎಂ ಬದಲಾಗುತ್ತಾರೆ ಎಂಬ ಗುಸು ಗುಸು ರಾಜಕೀಯ ವಲಯದಲ್ಲಿ ಕೇಳಿಬುರತ್ತಿರುವಾಗ ಸುರೇಶ್ ಗೌಡರ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ.