Sunday, 24th November 2024

ಪ್ರತ್ಯೇಕ ಮುಸ್ಲಿಂ ಕಾಲೇಜಿನ ಅವಶ್ಯಕತೆಯಿಲ್ಲ: ಸಿಎಂ ಇಬ್ರಾಹಿಂ

ಕಲಬುರಗಿ: ಮುಸ್ಲಿಂ ವಿದ್ಯಾರ್ಥಿಗಳಿಗೆ ವಕ್ಫಬೋರ್ಡ್ ನಿಂದ ಪ್ರತ್ಯೇಕ ಕಾಲೇಜು ಸ್ಥಾಪನೆ ಮಾಡುವುದು ತಪ್ಪು. ಪ್ರತ್ಯೇಕ ಮುಸ್ಲಿಂ ಕಾಲೇಜಿನ ಅವಶ್ಯಕತೆ ಇಲ್ಲಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವಕ್ಫಬೋರ್ಡ್ ನಿಂದ ಕಾಲೇಜು ಮಾಡಬಾರದು ಅಂತೇನಿಲ್ಲ. ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕಾಲೇಜು ಮಾಡುವುದು ಸರಿಯಲ್ಲ. ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ಅಧಿಕಾರ ವಿದೆ. ಕೇವಲ ಒಂದೇ ಧರ್ಮದ ವಿದ್ಯಾರ್ಥಿಗಳಿಗೆ ಕಾಲೇಜು ಸ್ಥಾಪನೆ ಎಂದರೆ ನಾನೇ ಮೊದಲು ಹೋರಾಟಕ್ಕೆ ಇಳಿಯುತ್ತೇನೆ ಎಂದು ಹೇಳಿದರು.

ನಾವು ಹಿಂದೆ ಮಠದಲ್ಲಿ ಓದಿಕೊಂಡಿದ್ದೇವೆ. ಅಲ್ಲಿ ಯಾವುದೇ ರೀತಿಯ ಭೇದ ಬಾವ ಇರಲಿಲ್ಲ. ಆದರೆ, ಮುಸ್ಲಿಂರಿಗೆ ಪ್ರತ್ಯೇಕ ಕಾಲೇಜು ವಿಚಾರದ ಮೂಲಕ ಬಿಜೆಪಿ ಅವರು ವಿನಾಕಾರಣ ವಿವಾದ ಹುಟ್ಟು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಹಾಗೂ ಕಾಂಗ್ರೆಸ್ ಯಲ್ಲಿ ಪಳಗಿರೋರೂ ರೌಡಿಗಳು ಇದ್ದಾರೆ. ರೌಡಿಗಳನ್ನ ಬಿಜೆಪಿ ಅವರು ವೈಭವಿಕರಣ ಮಾಡು ತ್ತಿದ್ದಾರೆ. ಇದು ರಾಜ್ಯದ ದುರ್ದೈವದ ಸಂಗತಿಯಾಗಿದೆ. ಜನತಾದಳಕ್ಕೂ ರೌಡಿಸಂ ಪದಕ್ಕೆ ಸಂಬಂಧವೇ ಇಲ್ಲಾ ಎಂದು ಇಬ್ರಾಹಿಂ ಸ್ಪಷ್ಟವಾಗಿ ಹೇಳಿದರು.

ರೌಡಿಗಳು ರಕ್ಷಣೆಗಾಗಿ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. 40 ರಿಂದ 50 ಕೋಟಿ ಖರ್ಚು ಮಾಡಿ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಬಳಿಕ ಸೇಫ್ ಆಗಿ ಇರೋದಕ್ಕೆ ಪ್ರಯತ್ನ ಮಾಡುತ್ತಾರೆ. ರೌಡಿ ಶೀಟ್ ಹಾಕಿರೋ ಪೊಲೀಸರೇ ಈಗ ರೌಡಿಗಳಿಗೆ ಸಲ್ಯೂಟ್ ಹೊಡಿಯುವ ಪರಿಸ್ಥಿತಿ ಉಂಟಾಗುತ್ತದೆ. ಅದು ಹೇಗೆ ಸಾಧ್ಯ. ಅದಕ್ಕೆ ಸಮಾಜ ಅವಕಾಶ ಕೊಡಬಾರದು ಎಂದರು.