Sunday, 15th December 2024

ನಾನು ಸಿಎಂ ಹುದ್ದೆಯ ಆಕಾಂಕ್ಷಿ, ನನಗೂ ಸಿಎಂ ಆಗುವ ಆಸೆ ಇದೆ: ಸಚಿವ ಉಮೇಶ್ ಕತ್ತಿ

ಆದ್ರೆ ಇಗಲ್ಲ, ಇನ್ನೂ ಹದಿನೈದು ವರ್ಷ ಕಾಯಬೇಕು

ವಿಜಯಪುರ : ನಾನೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ, ನಂಗೂ ಸಿಎಂ ಆಗುವ ಆಸೆ ಇದೆ, ಆದರೆ ಈಗಿರುವ ಸಿಎಂ ಅವರನ್ನು ಬದಲಿಸಿ ಮುಖ್ಯ ಮಂತ್ರಿ ಆಗುವುದಿಲ್ಲ, ನನಗಿನ್ನೂ ಹದಿನೈದು ವರ್ಷ ರಾಜಕೀಯ ಮಾಡು ತ್ತೇನೆ, ಇನ್ನೂ ಮೂರು ಸಾರಿ ಗೆಲ್ಲುತ್ತೇನೆ. ಸಿಎಂ ಆಗಿಯೇ ಆಗುತ್ತೇನೆ ಅಂತ ಸಚಿವ ಉಮೇಶ್ ಕತ್ತಿ ಮತ್ತೊಮ್ಮೆ ಇಂಗಿತ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ನನಗೆ ಈಗ 60 ವರುಷ, ಇನ್ನೂ ಹದಿನೈದು ವರ್ಷ ರಾಜಕೀಯ ಮಾಡುವ ಸಾಮರ್ಥ್ಯವಿದ್ದು, ಮುಂದೊಂದು ದಿನ ಅದೃಷ್ಟವಿದ್ರೆ ಸಿಎಂ ಆಗಿಯೇ ಆಗುತ್ತೇನೆ. ಆದರೆ ಈಗ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿಯಿಲ್ಲ. ಈಗಿರುವ ಸಿಎಂ ಚೆನ್ನಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತ ಭರವಸೆ ವ್ಯಕ್ತಪಡಿಸಿದರು.

ಇದೇವೇಳೆ ಸಿಎಂ ಬದಲಾವಣೆ ಕುರಿತಂತೆ ಕಾಂಗ್ರೆಸ್ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸಚಿವ ಉಮೇಶ್ ಕತ್ತಿ, ಕಾಂಗ್ರೆಸ್ ಪಕ್ಷಕ್ಕೆ ಮಾಡಲು ಕೆಲಸವಿಲ್ಲ, ಇವರು ಮಾಡುವ ಟ್ವೀಟ್ ಗಳಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇಣು ಹಾಕಿಕೊಳ್ಳುವುದೊಂದೆ ಬಾಕಿ ಇದೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಸಾಧ್ಯವಿಲ್ಲ ಅಂತ ಸಚಿವ ಉಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಕತ್ತಿ, ಅಮೀತ್ ಷಾ ಯಾಕೆ ಬಂದ್ರು ನಿಮಗೆ ಗೊತ್ತು, ನನಗೆ ಗೊತ್ತಿಲ್ಲ ಡೇರಿ ಉದ್ಘಾಟನೆಗೆ ಬಂದಿದ್ದು ಅಂತಾ ನನಗೆ ಗೊತ್ತು ಹೆಚ್ಚಿನ ಮಾಹಿತಿ ನಿಮ್ಮ‌ ಕಡೆಗೆ ಇರಬಹುದು. ನೀವೆ ಚಿಂತನೆ ಮಾಡಿ ಎಂದು ಮಾಧ್ಯಮದವರತ್ತ ಬೊಟ್ಟು ಮಾಡಿದರು.

ಬೊಮ್ಮಾಯಿ ಸರ್ಕಾರದ ಬಗ್ಗೆ ಬಿಜೆಪಿ ಶಾಸಕರೇ ಅಸಮಧಾನ ವಿಚಾರವು ಕೇವಲ ಮಾಧ್ಯಮ ಸೃಷ್ಟಿ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ 50 ಸೀಟು ಬರೋದಿಲ್ಲ ಅಂತಾ ಯಾವ ಶಾಸಕನು ಹೇಳಿಲ್ಲ, ನಾವ್ಯಾರು ಕೂಡಾ ಅಂದಿಲ್ಲ, ಹಿಂಗಾದ್ರೆ ಹಂಗೆ ಅಂತೆಲ್ಲ ಮಾಧ್ಯಮಗಳ ಸೃಷ್ಟಿ ಮಾಡುತ್ತವೆ. ನಾವು ಟಿವಿ ನೋಡ್ತಿವಿ ಎಂದು ಮಾಧ್ಯಮಗಳ ಮೇಲೆ ಸಚಿವರು ಗರಂ ಆದರು.

ಸಿದ್ದರಾಮಯ್ಯೊತ್ಸವ ಕಾರ್ಯಕ್ರಮಕ್ಕೆ ತಿರುಗೇಟು ನೀಡಿದ ಉಮೇಶ್ ಕತ್ತಿ, ಸಿದ್ದರಾಮಯ್ಯ ಅಪ್ಪನಂತ ಕಾರ್ಯಕ್ರಮ ಮಾಡ್ತೀವಿ, ನಮಗ್ಯಾಕ್ರಿ ನಡುಕ ಹುಟ್ಟತದರೀ, ಸಿದ್ದರಾಮಯ್ಯನ ಅಪ್ಪನಂತ ಕಾರ್ಯಕ್ರಮ ಹಿಂದೆಯು ಮಾಡಿದ್ದೇವೆ, ಮುಂದೆಯು ಮಾಡ್ತೇವೆ, ಕಾರ್ಯಕ್ರಮ ರೂಪಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಲಿದೆ. ಈ ಬಗ್ಗೆ ಪಕ್ಷದ ಅಧ್ಯಕ್ಷರಿದ್ದಾರೆ ಅವರು ಚಿಂತನೆ ಮಾಡ್ತಾರೆ, ಅವರು ಏನು ಮಾರ್ಗದರ್ಶನ ಮಾಡ್ತಾರೋ ನಾವು ಮಾಡ್ತೇವೆ ಅಂತ ಕಾಂಗ್ರೆಸ್ ಗೆ ಟಾಂಗ್ ನೀಡಿದರು.

ಅದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ, ಸಿದ್ದರಾಮಯ್ಯನವರ ಕಾರ್ಯಕ್ರಮ. ಅಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಿದ್ದರು. ಸಿದ್ದರಾಮಯ್ಯ ಹಾಗೂ ನಾನು ಜನತಾ ಪರಿವಾರದಿಂದ ಬಂದವರು. ನಾನು ಈಗ ಬಿಜೆಪಿ ಪಕ್ಷದಿಂದ ಸಚಿವನಾಗಿದ್ದೇನೆ. ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ, ನಾನು ಹಾಗೂ ಸಿದ್ದರಾಮಯ್ಯ ಹಾಗೂ ಎಂ.ಬಿ ಪಾಟೀಲ್ ಆತ್ಮೀಯ ಗೆಳೆಯರು ಎಂದು ಸ್ಪಷ್ಟಪಡಿಸಿದ್ರು.