ಬೆಂಗಳೂರು: ಜಗತ್ತಿನಾದ್ಯಂತ ಆಲ್‌ಝೈಮರ್ಸ್ ಕಾಯಿಲೆ ಮತ್ತು ಇತರ ರೀತಿಯ ಬುದ್ಧಿಮಾಂದ್ಯತೆಯು ಸಾರ್ವಜನಿಕರ ಮಾನಸಿಕ ಸ್ವಾಸ್ಥ್ಯ ವನ್ನು ನಾಶ ಪಡಿಸುತ್ತಿವೆ. ಪ್ರಸ್ತುತ ೫೫ ದಶಲಕ್ಷ ಜನರು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ವಿಷಯದ ಬಗ್ಗೆ ಅರಿವಿನ ಮತ್ತು ಬಳಲುತ್ತಿರುವವರ ಬೆಂಬಲದ ಪ್ರತೀಕವಾಗಿ ಕೈಟ್ಸ್ ಸೀನಿಯರ್ ಕೇರ್ `ಕಲರ್‌ಫುಲ್ ವಿಸ್ಪರ್ಸ್’ ಎಂಬ ಚಿತ್ರಕಲೆ ಪ್ರದರ್ಶನವನ್ನು ಆಯೋಜಿಸಿತ್ತು. ಇದು ವಿಶ್ವ ಆಲ್‌ಝೈಮರ್ಸ್ ದಿನವಾದ 21 ಸೆಪ್ಟೆಂಬರ್ 2024 ರಂದು ದೊಮ್ಮಲೂರಿನ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಆಯೋಜನೆಗೊಂಡಿತು.
ವಿಶೇಷವೆಂದರೆ ಈ ಪ್ರದರ್ಶನದಲ್ಲಿ ಕೈಟ್ಸ್ ಸೀನಿಯರ್ ಕೇರ್ ನಡೆಸುತ್ತಿರುವ ಬುದ್ಧಿಮಾಂದ್ಯ ಆರೈಕೆ ಕೇಂದ್ರದಲ್ಲಿ ದಾಖಲಾಗಿರುವ ಹಿರಿಯ ನಾಗರಿಕರಿಂದ ರಚಿಸಲಾದ ಚಿತ್ರಕಲೆಗಳು, ಹಾಗೂ ಸೃಜನಶೀಲ ಕಲಾಕೃತಿಗಳು ಪ್ರದರ್ಶನಗೊಂಡವು.
ಬೆಂಗಳೂರಿನ ಸಂಚಾರ ವಿಭಾಗದ ಜಂಟಿ ಆಯುಕ್ತರಾದ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ಅವರು ಮಾತನಾಡುತ್ತ, ಹಿರಿಯರ ಅನುಭವ ಮತ್ತು ಸೃಜನಶೀಲ ಮನೋಭಾವವನ್ನು ವೀಕ್ಷಿಸಲು ಇದೊಂದು ಸ್ಪೂರ್ತಿದಾಯಕ ಮತ್ತು ಉತ್ತಮ ಕಾರ್ಯಕ್ರಮ. ಬಾಧಿತರಾದವರಿಗೆ ನಾವು ಜಾಗೃತಿ ಮೂಡಿಸುವುದನ್ನು ಮತ್ತು ಬೆಂಬಲವನ್ನು ನೀಡುವುದನ್ನು ಮುಂದುವರಿಸಬೇಕು.” ಎಂದು ಹೇಳಿದರು.
ಲೈಫ್‌ಬ್ರಿಡ್ಜ್ ಸೀನಿಯರ್ ಕೇರ್ ಪ್ರೆöÊವೇಟ್ ಲಿಮಿಟೆಡ್‌ನ ಗ್ರೂಪ್ ಸಿ.ಒ.ಒ ಡಾ. ರೀಮಾ ನಾಡಿಗ್, ಬುದ್ಧಿಮಾಂದ್ಯತೆ ಮತ್ತು ಆಲ್‌ಝೈಮರ್ ಪೀಡಿತ ವ್ಯಕ್ತಿಗಳ ಬಗ್ಗೆ ಸಹಾನುಭೂತಿ ಹೊಂದುವುದು ಅತ್ಯವಶ್ಯಕವಾಗಿದೆ ಎಂದು ನುಡಿದರು.
?ಕಲರ್‌ಫುಲ್ ವಿಸ್ಪರ್ಸ್ ಪ್ರದರ್ಶನದ ಮೂಲಕ, ಈ ಪರಿಸ್ಥಿತಿಗಳೊಂದಿಗೆ ಜೀವಿಸುವವರ ಆಳವಾದ ಭಾವನಾತ್ಮಕ ಶಕ್ತಿ ಮತ್ತು ಸೃಜನಶೀಲತೆ ಯನ್ನು ನಾವು ಪ್ರತ್ಯಕ್ಷವಾಗಿ ನೋಡಿದ್ದೇವೆ. ಅವರ ಕಲೆಯು ಅವರ ವೈಯಕ್ತಿಕ ಪ್ರಯಾಣದ ಒಂದು ನೋಟವನ್ನು ನಮಗೆ ನೀಡುತ್ತದೆ ಮತ್ತು ಸಹಾನುಭೂತಿ ಮತ್ತು ಅರಿವಿನ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಬುದ್ಧಿಮಾಂದ್ಯತೆಯ ಆರೈಕೆಯನ್ನು ಮತ್ತಷ್ಟು ಬೆಂಬಲಿಸಲು ಮತ್ತು ಸಮರ್ಥಿಸಲು ಈ ಕಾರ್ಯಾಚರಣೆಯಲ್ಲಿ ನಮ್ಮೊಂದಿಗೆ ಸೇರಲು ನಾವು ಪ್ರತಿಯೊಬ್ಬರನ್ನು ಆಹ್ವಾನಿಸುತ್ತೇವೆ, ಈ ಸಮಸ್ಯೆಯ ಬಾಧಿತರಿಗೆ ಅಗತ್ಯವಾದ ಸಹಾನುಭೂತಿ, ತಿಳಿವಳಿಕೆ ಮತ್ತು ನೆರವಿನ ಹಸ್ತವನ್ನು ಚಾಚುವುದು ಅವಶ್ಯಕವಾಗಿದೆ,’’ ಎಂದು ತಿಳಿಸಿದರು.