Sunday, 13th October 2024

ಸಂವಿಧಾನದಡಿ ಸಾಮಾನ್ಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಬೇಕು: ನ್ಯಾ.ಕೆ.ಬಿ.ಶಿವಪ್ರಸಾದ್

ಚಿಕ್ಕಬಳ್ಳಾಪುರ: ಸಂವಿಧಾನದ ಆಶಯದಂತೆ ಕೆಲಸ ನಿರ್ವಹಿಸಿದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಿಜವಾದ ನ್ಯಾಯ ಒದಗಿಸಿಕೊಡಲು ಸಾಧ್ಯವಿದೆ ಎಂದು ಗೌರ ವಾನ್ವಿತ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಬಿ.ಶಿವಪ್ರಸಾದ್ ತಿಳಿಸಿದರು.

ನಗರದ ಹೊರವಲಯದ ವಿಷ್ಣುಪ್ರಿಯ ಕಾಲೇಜಿನಲ್ಲಿ ಭಾರತ ಸಂವಿಧಾನ ದಿನಾಚರಣೆ ಹಾಗೂ ಪದವಿ ಘಟಕೋತ್ಸವ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾಚರಣೆ ನೆರವೇರಿಸಿ ಮಾತನಾಡಿದರು.

ಸರ್ವಧರ್ಮದ ಸಮೈಕ್ಯತೆಗೆ, ದೇಶದ ಉಳಿವಿಗೆ  ಮೂಲ ಆಧಾರವೇ ಸಂವಿಧಾನವಾಗಿದೆ. ಇಂದು ಸರ್ವರು ಸಮಾನವಾಗಿ ಬದುಕು ವುದಕ್ಕೆ ಎಲ್ಲಾ ಅವಕಾಶಗಳು ಸಿಗುವಂತೆ ಆಗುತ್ತಿರುವುದು ಸಂವಿಧಾನದಿ0ದ ಮಾತ್ರ. ಸಂವಿಧಾನ ನಮಗೆ ನೀಡಿರುವ ಮೂಲ ಭೂತ ಹಕ್ಕು ಎಷ್ಟು ಅಮೂಲ್ಯವೋ ಹಾಗೇಯೇ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸು ವುದು ಕೂಡ ನಮ್ಮ ಪ್ರಮುಖ ಆಧ್ಯತೆ ಆಗಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಡೆದ ಪದವಿ ಪ್ರಧಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ ಮಿಸ್ಕಿನ್ ಪದೋನ್ನತಿ ಹೊಂದುತ್ತಿರುವ ಈ ದಿನ ತಾವು ಸಂವಿಧಾನದ ಅಡಿಯಲ್ಲಿ ಒಳ್ಳೆ ಹುದ್ದೆಗಳನ್ನು ಗಳಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕಸಸಿನ ಭಾರತದ ಸಾರಥಿಗಳಾಗಬೇಕು. ದೇಶದ ಸಾರ್ವಭೌಮತೆಗೆ ಧಕ್ಕೆಯಾಗದಂತೆ  ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ತೋರಿಸುವುದು ಇಂದಿನ ಯುವಪೀಗೆಳಿಯ ಕರ್ತವ್ಯವಾಗಲಿ. ಪ್ರತಿನಿತ್ಯ ನಮ್ಮ ಧರ್ಮ ಗ್ರಂಥಗಳನ್ನು ಹೇಗೆ ಪೂಜನೀಯ ಭಾವನೆಯಿಂದ ಓದುತ್ತೇವೋ ಅದೇ ರೀತಿಯಲ್ಲಿ ನಮ್ಮ ಸಂವಿಧಾನವನ್ನು ಓದಬೇಕು ನೋಡಬೇಕು ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ರಾಮಚಂದ್ರಾರೆಡ್ಡಿ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ನ್ಯಾಯಮೂರ್ತಿಗಳ ಕೈಯಲ್ಲಿ ಪದವಿ ಪ್ರಮಾಣ ಪತ್ರವನ್ನು ಪಡೆಯುತ್ತಿರುವುದು ನಮ್ಮ ವಿದ್ಯಾರ್ಥಿಗಳ ಅದೃಷ್ಟವೆಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ವಕೀಲರು, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು  ಉಪಸ್ಥಿತ ರಿದ್ದರು.