Saturday, 14th December 2024

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು: ಡಾ.ಸೂರ್ಯಕಲಾ

ತುಮಕೂರು: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಧೈರ್ಯ ತುಂಬುವುದರ ಜತೆಗೆ ಪ್ರತಿಭೆ ಗುರುತಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ ತಿಳಿಸಿದರು.
ನಗರದ ಗೆದ್ದಲಹಳ್ಳಿ ರಸ್ತೆಯಲ್ಲಿರುವ ಶೇಷಾದ್ರಿಪುರಂ ಶಾಲೆಯಲ್ಲಿ ಪ್ರಭಾಂಜನಕ ಎಂಬ ಹೆಸರಿನಡಿ ಏರ್ಪಡಿಸಿದ್ದ ವಸ್ತುಪ್ರದರ್ಶನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಮಾತನಾಡಿದರು.
ಈ ಹಿಂದಿನ ಕಲಿಕೆಗೂ ಮತ್ತು ಇಂದಿನ ಕಲಿಕೆಗೂ ಇರುವಂತಹ ವ್ಯತ್ಯಾಸದ ಬಗ್ಗೆಯೂ ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಎಂದ ಅವರು, ವಿದ್ಯಾರ್ಥಿಗಳ ಸಾಮಾಜಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಶೇಷಾದ್ರಿಪುರಂ ಶಾಲೆ ಮುಂಚೂಣಿಯಲ್ಲಿದೆ ಎಂದರು.
ಶಾಲೆಗಳಲ್ಲಿ ಮಹನೀಯರ ಸಾಧನೆಯ ಅಂಶಷಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಸ್ಪೂರ್ತಿ ತುಂಬುವAತಹ ಕೆಲಸ ಮಾಡಬೇಕು ಎಂದು ತಿಳಿಸಿ ದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಸಹಾಯಕ ಕಾರ್ಯದರ್ಶಿ ಎಂ.ಎಸ್. ನಟರಾಜ್ ಮಾತನಾಡಿ, ಮಕ್ಕಳಲ್ಲಿ ಇರುವಂತಹ ಪ್ರತಿಭೆಯನ್ನು ಹೊರ ಹೊಮ್ಮಿಸಲು ಇಂತಹ ವಸ್ತುಪ್ರದರ್ಶನಗಳು ಸಹಕಾರಿಯಾಗುತ್ತವೆ ಎಂದರು.
ಶಾಲೆಯ ಪ್ರಾಂಶುಪಾಲರಾದ ಎಚ್.ಎನ್. ನಂದರಾಜು ಮಾತನಾಡಿ, ಶಾಲೆಯಲ್ಲಿ ಪ್ರಭಂಜನA ಹೆಸರಿನಲ್ಲಿ ಏರ್ಪಡಿಸಿರುವ ಎಕ್ಸ್ಪೋ ಒಂದು ಅಪರೂಪದ ಕಾರ್ಯಕ್ರಮ. ಮಕ್ಕಳ ಪ್ರತಿಭೆ ಅನಾವರಣಕ್ಕೆ ವಸ್ತುಪ್ರದರ್ಶನಗಳು ಉತ್ತಮ ವೇದಿಕೆಗಳಾಗಿವೆ. ಇಂತಹ ವೇದಿಕೆಯನ್ನು ಕಲ್ಪಿಸುವಲ್ಲಿ ನಮ್ಮ ಶಾಲೆ ಸದಾ ಮುಂಚೂಣಿಯಲ್ಲಿದೆ ಎಂದರು.
ಮಕ್ಕಳು ಈ ವಸ್ತುಪ್ರದರ್ಶನದಲ್ಲಿ ವಿಜ್ಞಾನ, ಗಣಿತ ಸೇರಿದಂತೆ ಹಳ್ಳಿ ಸೊಗಡನ್ನು ಸಹ ಪ್ರದರ್ಶಸಿದ್ದಾರೆ. ಮ್ಯೂಸಿಕ್, ಡ್ಯಾನ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಕಂಪ್ಯೂಟರ್ಸ್, ಕನ್ನಡ, ಇಂಗ್ಲೀಷ್, ಸಮಾಜ ವಿಜ್ಞಾನ ಸೇರಿದಂತೆ ಶಾಲೆಯಲ್ಲಿ ಕಲಿಯುವ ಎಲ್ಲ ವಿಷಯಗಳಿಗೆ ಸಂಬ0ಧಿಸಿದ ಪ್ರದರ್ಶನಗಳು ಈ ಎಕ್ಸ್ಪೋದಲ್ಲಿ ಅನಾವರಣಗೊಂಡಿವೆ ಎಂದು  ಹೇಳಿದರು.
ಈ ವಸ್ತುಪ್ರದರ್ಶನದಲ್ಲಿ ಮಕ್ಕಳು ಸಿದ್ದಪಡಿಸಿದ್ದ ವಿಜ್ಞಾನ, ಕೃಷಿ ಸೇರಿದಂತೆ ಇನ್ನಿತರೆ ಪ್ರದರ್ಶನಗಳು ನೋಡುಗರ ಗಮನ ಸೆಳೆದವು. ಮಕ್ಕಳು ಸಿದ್ದ ಪಡಿಸಿದ್ದ ವಿಜ್ಞಾನ ಸೇರಿದಂತೆ ವಿವಿಧ ಮಾದರಿಗಳನ್ನು ಪೋಷಕರು, ಶಿಕ್ಷಕರು, ಅತಿಥಿಗಳು ಹಾಗೂ ಸಾರ್ವಜನಿಕರು ವೀಕ್ಷಿಸಿ ಖುಷಿಪಟ್ಟರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸದಸ್ಯರಾದ ಎಂ.ಪಿ. ಕಾರ್ತಿಕ್, ಗುರುರಾಜ್ ಕರ್ಜಗಿ ತಂಡದ ಕ್ರಿಯಾತ್ಮಕ ತರಬೇತಿದಾರರಾದ ಲೋಲಾ ಶಿವಶಂಕರ್, ಶಾಲೆಯ ಬೋಧಕ ಮತ್ತ ಭೋದಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.