Thursday, 12th December 2024

ಶಾಲಾ ಪುಟಾಣಿಗಳಿಂದ ಸಂವಿಧಾನ ಶ್ರೇಷ್ಠತೆ

ತಿಪಟೂರು: ಪ್ರತಿಷ್ಠಿತ ಕಲಾಕೃತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇಂದು ನಡೆದ ತಾಲ್ಲೂಕು ಮಟ್ಟದ ಶಾಲಾ ಮಕ್ಕಳ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಸಂವಿಧಾನದ ಮಹತ್ವ ಸಾರಲಾಯಿತು.

ಸ್ಪರ್ಧೆಯನ್ನು ಚಿತ್ರ ಬರೆಯುವ ಮೂಲಕ ಉದ್ಘಾಟಿಸಿದ ಕಲಾಕೃತಿ ಉಪಾಧ್ಯಕ್ಷರಾದ ಎಂ ಆರ್ ನಿರಂಜನಮೂರ್ತಿ ಮಾತನಾಡಿ, ಇಂದು ಜಗತ್ತೇ ಒಪ್ಪಿಕೊಂಡ ನಮ್ಮ ಸಂವಿಧಾನ ಸರ್ವಶ್ರೇಷ್ಠ ಎನಿಸಿದೆ. ಹನ್ನೇರಡನೇ ಶತಮಾನದಲ್ಲಿ ಶರಣರು ಹಾಕಿ ಕೊಟ್ಟ ಮಹಾಮನೆಯ ಕಲ್ಪನೆಯ ಸುಧಾ ರಣೆಯ ರೂಪದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ದೇಶದ ಪ್ರತಿ ಪ್ರಜೆಯೂ ನೆಮ್ಮದಿ, ಶಾಂತಿ, ಸೌಹಾರ್ಧತೆ, ಸಮಾನತೆಯಿಂದ ಬದುಕುವ ಅತ್ಯುತ್ತಮವಾದ ಸಂವಿಧಾನ ವನ್ನು ನಮಗೆ ಕೊಟ್ಟಿದ್ದಾರೆ ಎಂದರು.

ಸರ್ಕಾರಿ ಬಾಲಕಿಯರ ಪದವೀ ಕಾಲೇಜಿನ ಪ್ರಾಂಶುಪಾಲರಾದ ಪರಶಿವಮೂರ್ತಿ ಜ್ಯೋತಿ ಬೆಳಗಿಸಿ ದೇಶದ ಪ್ರತಿ ಪ್ರಜೆಯೂ ಸರ್ವ ಸ್ವತಂತ್ರನಾಗಿ ಸುಖದಿಂದ ಬದುಕುವ ಹಕ್ಕುಗಳನ್ನು ಪಡೆದಿರುವ ಕಾರಣ ಅದು ನಮ್ಮ ಸಂವಿಧಾನದಿ0ದ ಎಂದರು.

ಉಪಪ್ರಾ0ಶುಪಾಲರಾದ ಚೆನ್ಬೇಗೌಡ ಮಾತನಾಡಿ ನಾವು ನಮ್ಮ ಶ್ರೇಷ್ಠ ಸಂವಿಧಾನಕ್ಕೆ ಮಹತ್ವ ಬರಬೇಕಾದರೆ ಅದರ ಉದ್ದೇಶ ಮತ್ತು ಹಕ್ಕುಗಳ ಅರಿವು ಪ್ರತಿ ಮನೆ ಮನೆಗೂ ತಲುಪಬೇಕು. ಆ ದಿಸೆಯಲ್ಲಿ ಚಿತ್ರಕಲೆ ಸ್ಪರ್ಧೆ ಅರ್ಥಪೂರ್ಣ ಎಂದರು.

ಸಭೆಯಲ್ಲಿ ಕಲಾಕೃತಿ ಉಪಾಧ್ಯಕ್ಷರಾದ ಪ್ರಭಾವಿಶ್ವನಾಥ್, ಕಾರ್ಯದರ್ಶಿ ತಿಪಟೂರು ಕೃಷ್ಣ, ನಿರ್ಧೇಶಕರಾದ ಮಂಜುಳಾ ತಿಮ್ಮೇಗೌಡ, ಲತಾ ಇದ್ದರು. ಶಿಕ್ಷಕರಾದ ಕುಮಾರಸ್ವಾಮಿ ಸ್ವಾಗತಿಸಿದರು, ಟಿ ಎಸ್ ಸುರೇಶ್ ನಿರೂಪಿಸಿ, ವಂದಿಸಿದರು. ಸಂವಿಧಾನವೇ ಸರ್ವ ಶ್ರೇಷ್ಠ ವಿಷಯದಲ್ಲಿ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ತಾಲ್ಲೂಕಿನಾದ್ಯಂತ ಸುಮಾರು ನೂರು ಮಕ್ಜಳು ಭಾಗವಹಿಸಿದ್ದರು.

ಸ್ಪರ್ಧಾ ವಿಜೇತರು: ಪ್ರೌಢಶಾಲೆ ವಿಭಾಗದಲ್ಲಿ ಜಿಜಿಜೆಸಿಯ ಚಿನ್ಮಯಿ ಪ್ರಥಮ ಸ್ಥಾನ, ಠಾಗೂರು ಶಾಲೆಯ ಚಿದಾನಂದ ದ್ವಿತೀಯ, ಜಿಜಿಜೆಸಿಯ ಮೇಘನಾ ತೃತೀಯ ಸ್ಥಾನ ಪಡೆದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೆ.ಪಿಎಸ್ ನೊಣವಿನಕೆರೆಯ ಮಯೂರಿ ಪ್ರಥಮ ಸ್ಥಾನ, ಅದೇ ಶಾಲೆಯ ನಿಸರ್ಗ ದ್ವಿತೀಯ ಹಾಗೂ ಎಸ್ ಎಂ ಇಂಗ್ಲೀಷ್ ಶಾಲೆಯ ಮಾನಸ ತೃತೀಯ ಸ್ಥಾನ ಪಡೆದರು.

ಠಾಗೂರು ಶಾಲೆಯ ಸೂಫಿಯಾನ, ಶಾಲೆಯ ಪ್ರತಿಕ್ಷಾ ಮೆಚ್ಚಿಗೆ ಬಹುಮಾನ ಪಡೆದಿದ್ದಾರೆ. ಸೆಂಟ್ರಲ್ ಶಾಲೆಯ ಕಲಾ ಶಿಕ್ಷಕ ಮಂಜುನಾಥ್, ಕಲಾವಿದ ಬೆಳಗರಹಳ್ಳಿ ದೇವಾನಂದ್, ಲತಾ ತೀರ್ಪುಗಾರರಾಗಿ ಭಾಗವಹಿಸಿದ್ದರು..