ಚಿಂತಾಮಣಿ: ಸಾರ್ವಜನಿಕರಿಗೆ ನೆರವಾಗಲೆಂದು ೪ ವರ್ಷದ ಹಿಂದೆ ಚಿಂತಾಮಣಿ ನಗರದಲ್ಲಿ ಪ್ರಾರಂಭವಾಗಿರುವ ಎಆರ್‌ಟಿಒ ಕಚೇರಿಯು ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿದ್ದು ಜನಸಾಮಾನ್ಯರು ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಮಧ್ಯ ವರ್ತಿಗಳ ಮೊರೆಹೋಗಬೇಕಾಗಿದೆ ಎಂದು ಜನತೆ ದೂರುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಅತಿದೊಡ್ಡ ವಾಣಿಜ್ಯ ಕೇಂದ್ರವಾಗಿರುವ ಚಿಂತಾ ಮಣಿಯು ನಗರ ಸೇರಿದಂತೆ ಅತ್ಯಂತ ವಿಸ್ತಾರವಾಗಿದ್ದು, ಅದಕ್ಕೆ ಅನುಗುಣವಾಗಿ ಇಲ್ಲಿನ ಜನರಿಗೆ ಅನುಕೂಲವಾಗುವಂತೆ ಎಆರ್‌ಟಿಒ ಕಚೇರಿಯನ್ನು ಪ್ರಾರಂಭಿಸ ಲಾಗಿದೆ. ಕಚೇರಿ ಪ್ರಾರಂಭವಾಗಿ ನಾಲ್ಕು ವರ್ಷಗಳೇ ಕಳೆಯುತ್ತಿದ್ದರೂ ಕಚೇರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸರಕಾರ ವಿಫಲವಾಗಿದೆ ಎಂದೇ ಹೇಳಬಹುದು.
ಮದ್ಯವರ್ತಿಗಳ ಹಾವಳಿ : ಇನ್ನು ಎಆರ್‌ಟಿಓ ಕಚೇರಿಯಲ್ಲಿ ವಾಹನ ಸಂಬA ಕೆಲಸ ಕಾರ್ಯಗಳು ಏನಾದರೂ ಆಗಬೇಕಾದರೆ ನೇರವಾಗಿ ಅಕಾರಿಗಳ ಬಳಿ ಹೋದರೆ ಆಗುವು ದಿಲ್ಲ. ಮದ್ಯವರ್ತಿಗಳನ್ನು ಸಂಪರ್ಕಿಸಿದರೆ ಮಾತ್ರ ಕೆಲಸವಾಗುತ್ತದೆ. ಇನ್ನು ಕಚೇರಿಯ ಸುತ್ತಲೂ ಮದ್ಯವರ್ತಿಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಅಲ್ಲದೆ ಗ್ರಾಹಕರನ್ನು ಹುಡುಕಿ ಅವರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದಾರೆ. ಸರಕಾರಿ ಶುಲ್ಕಗಳಿಗಿಂತ ದುಬಾರಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿ ಸುತ್ತಿದ್ದಾರೆ. ಇದಕ್ಕೆ ಕಚೇರಿಯ ಸಿಬ್ಬಂದಿಯೂ ಸಹಕರಿಸುತ್ತಿದ್ದಾರೆ ಎನ್ನುವ ಆರೋಪಗಳು ಬಲವಾಗಿ ಕೇಳಿಬಂದಿವೆ.
ಬಾಡಿಗೆ ಎಆರ್‌ಟಿಒ ಕಚೇರಿ: ಎಆರ್‌ಟಿಒ ಕಚೇರಿಯು ಪ್ರಾರಂಭವಾಗಿ ೪ ವರ್ಷಗಳು ಮುಕ್ತಾಯವಾಗುತ್ತಿವೆ. ಇಂದಿಗೂ ಹಲವು ಸಮಸ್ಯೆಗಳ ನಡುವೆಯೇ ನಡೆಯುತ್ತಿದೆ. ಮುಖ್ಯವಾಗಿ ಸ್ವಂತ ಕಟ್ಟಡವನ್ನು ಹೊಂದಲು ಇಂದಿಗೂ ಸಾಧ್ಯವಾಗಿಲ್ಲ. ಇನ್ನು ಎಆರ್‌ಟಿಒ ಕಚೇರಿಗೆ ಸ್ವಂತಕಟ್ಟಡವನ್ನು ಪಡೆದುಕೊಳ್ಳಲು ಶಿಡ್ಲಘಟ್ಟ ರಸ್ತೆಯನ್ನು ಜಾಗವನ್ನು ಗುರ್ತಿಸಲಾಗಿದೆಯಾದರೂ ಅಲ್ಲಿ ಕಚೇರಿಯನ್ನು ನಿರ್ಮಿಸಿಕೊಳ್ಳಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವಲ್ಲಿ ಅಕಾರಿಗಳು ಮತ್ತು ಜನಪ್ರತಿನಿಗಳು ವಿಫಲರಾಗಿರುವುದು ಎದ್ದು ಕಾಣುತ್ತಿದೆ.
ಎಆರ್‌ಟಿಒ ಕಚೇರಿಯ ಸಿಬ್ಬಂದಿ ವಾಹನ ದಾಖಲೀಕರಣದ ಜತೆಗೆ ರಸ್ತೆ ಸುರಕ್ಷತೆಗೆ ಹೆಚ್ಚಿನ ಪ್ರಾದಾನ್ಯತೆಯನ್ನು ನೀಡ ಬೇಕಾಗುತ್ತದೆ. ಆದರೆ ಎಆರ್‌ಟಿಒ ಕಚೇರಿಯ ಅಕಾರಿಗಳು ಮತ್ತು ಸಿಬ್ಬಂದಿ ರಸ್ತೆ ಸುರಕ್ಷತೆಯ ಬಗ್ಗೆಯಾಗಲಿ, ಕಾನೂನು ಬದ್ದ ವಾಹನ ಚಲಾವಣೆಯ ಕುರಿತಾಗಲಿ ಸಾರ್ವಜನಿಕರ ಒಳಿತನ್ನು ಬಯಸಿ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಇಲಾಖೆಯಿಂದ ನೀಡುವ ಕೆಲವೊಂದು ಆದೇಶಗಳ ಪಾಲನೆ ದಾಖಲೀಕರಣಕ್ಕೆಷ್ಟೇ ಕಾರ್ಯಕ್ರಮಗಳು ಸೀಮಿತವಾಗಿದ್ದು, ಅವುಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ ಎನ್ನುವುದು ಜನತೆಗೆ ಮಾತಾಗಿದೆ.
*
ಎಆರ್‌ಟಿಒ ಕಚೇರಿಯಲ್ಲಿ ಮದ್ಯವರ್ತಿಗಳ ಹಾವಳಿಯಿಂದ ಇಲಾಖೆಯಲ್ಲಿ ಒಂದಷ್ಟು ತಪ್ಪುಗಳಿಗೂ ಅವಕಾಶವಿದ್ದು, ಇದರಿಂದ ಇಲಾಖೆಗೆ ಕೆಟ್ಟ ಹೆಸರು ಬರುವ ಸಾಧ್ಯತೆ ಇಲ್ಲದಿಲ್ಲ. ಇದೆಲ್ಲದಕ್ಕೂ ಕಾರಣವಾಗಿರುವ ಮದ್ಯವರ್ತಿಗಳ ಹಾವಳಿ ಯನ್ನು ತಪ್ಪಿಸಿ ಗ್ರಾಹಕರಿಗೆ ಇಲಾಖೆಯ ಸವಲತ್ತುಗಳು ಸರಾಗವಾಗಿ ದೊರೆಯುವಂತಾಗಲಿ. ಇಲ್ಲದಿದ್ದಲ್ಲಿ ಇಲಾಖೆಯ ವಿರುದ್ದ ಮೇಲಾಕಾರಿಗಳಿಗೆ ದೂರು ನೀಡಲಾಗುವುದು ಎಂದು ಮುಖಂಡ ಪೋಟೊಗ್ರಾಪರ್ ಕೃಷ್ಣಮೂರ್ತಿ ದೂರಿದ್ದಾರೆ.