ಹರಪನಹಳ್ಳಿ: ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ ೧೯೮೧ ರ ಕಲಂ ೩೭ ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ರೂ. ೩೦೦೦/- ದಂಡ ಮತ್ತು ೧ ವರ್ಷ ೬ ತಿಂಗಳಗಳ ಕಾಲ ಸಾದಾ ಕಾರಾಗೃಹ ಶಿಕ್ಷೆಯನ್ನು ಹರಪನಹಳ್ಳಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ರಾದ ಫಕ್ಕೀರವ್ವ ಕೆಳಗೇರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ಆರೋಪಿಗಳಾದ ಹೀರೆಮೇಗಳಗೇರಿ ಗ್ರಾಮದ ಎಂ.ಕೆ ಚವೀರಪ್ಪ, ಸತ್ತೂರು ಎ. ಕೊಂಡಯ್ಯ, ಬೇವಿನಹಳ್ಳಿ ರಾಘುಪಾಟೇಲ್, ಕಮ್ಮತ್ತಹಳ್ಳಿ ಕೆ. ಪ್ರಕಾಶ್, ಪೋತಲಕಟ್ಟೆ ಡಿ. ರೇವಣಸಿದ್ದಪ್ಪ, ಪಣಿಯಾಪುರ ನಸೀರ್ ಆಹ್ಮದ್, ಗೋಲ್ಲರಹಟ್ಟಿ ಕೆ. ಶಿವಮ್ಮ, ಪೋತಲಕಟ್ಟೆ ನಾಗರಾಜ್ ಪಟೇಲ್, ಬೇವಿನ ಹಳ್ಳಿ ದೊಡ್ಡ ತಾಂಡದ ಹೀರಾನಾಯ್ಕ ಒಟ್ಟು ೯ ಪ್ರಕರಣದಲ್ಲಿ ೯ ಜನ ಆರೋಪಿಗಳಿಗೆ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಘಟನೆ ಹಿನ್ನೆಲೆ: ೨೦೧೩ ರಂದು ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಂಯತ್ರಣ ಕಾಯ್ದೆ ೧೯೮೧ ರ ಕಲಂ. ೩೭ ರ ಅಡಿಯಲ್ಲಿ ವಾಯು ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಂಯತ್ರಣ ಮಂಡಳಿಯವರು ಸದರಿ ಪ್ರಕಣದ ಆರೋಪಿಗಳ ವಿರುದ್ದ ಖಾಸಗಿ ಪಿರ್ಯಾಧಿಯನ್ನು ನೀಡಿದ್ದರು, ನಂತರ ಸದರಿ ಪ್ರಕಣದ ಆರೋಪಿಗಳಿಗೆ ವಿಚಾರಣೆ ನಡೆಸಿದ ಬಳಿಕ ಆರೋಪಿಗಳ ಪರವಾಗಿ ವಕೀಲರುಗಳು ವಾದವನ್ನು ಮಂಡಿಸಿದರು. ಬಿ.ಕೃಷ್ಣಮೂರ್ತಿ ವಕೀಲರು ಮಂಡಳಿಯ ಪರವಾಗಿ ವಾದವನ್ನು ಮಂಡಿಸಿದರು.
ವಕೀಲರುಗಳ ಪರಸ್ಪರ ವಾದ ವಿವಾಧ ಆಲಿಸಿದ ಹರಪನಹಳ್ಳಿ ಜೆ.ಎಂ.ಎಫ್.ಸಿ.ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ರವರು ಅಂತಿಮವಾಗಿ ಒಟ್ಟು ೯ ಪ್ರಕರಣದಲ್ಲಿ ೯ ಜನ ಆರೋಪಿಗಳ ವಿರುದ್ದ ೧ ವರ್ಷ ೬ ತಿಂಗಳ ಕಾರಾಗೃಹ ಶಿಕ್ಷೆ ಮತ್ತು ರೂ; ೩೦೦೦/- ಗಳು ದಂಡ ವಿಧಿಸಿ ತೀರ್ಪೂ ನೀಡಿದ್ದಾರೆ.