Friday, 20th September 2024

CPIM: ಚಿಕ್ಕಬಳ್ಳಾಪುರದಲ್ಲಿ ನವೆಂಬರ್ 21 ,22ಕೆ ಸಿಪಿಐಎಂ ಜಿಲ್ಲಾ ಸಮ್ಮೇಳನ -ಎಂ.ಪಿ.ಮುನಿ ವೆಂಕಟಪ್ಪ  

ಬಾಗೇಪಲ್ಲಿ: ತಾಲ್ಲೂಕು ಸಮಗ್ರ ಅಭಿವೃದಿಗೆ ಕೈಗೊಂಡಿರುವ ನಿರ್ಣಯಗಳನ್ನು ಜಾರಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇದೇ ಸಂಧರ್ಭದಲ್ಲಿ ಪಕ್ಷವನ್ನು ಬಲಪಡಿಸಿ ಜನಪರ ಹೋರಾಟ ಮಾಡಬೇಕಾಗಿದೆ. ಆದ್ದರಿಂದ ನವೆಂಬರ್ 21 ,22 ರಂದು ನಡೆಯುವ 18 ನೇ ಸಮ್ಮೇಳನವನ್ನು ಯಶಸ್ವಿಗಳಿಸಲು ಜಿಲ್ಲಾ ಸಿಪಿಐಎಂ ಪಕ್ಷದ ಕಾರ್ಯದರ್ಶಿ ಎಂ.ಪಿ.ಮುನಿ ವೆಂಕಟಪ್ಪ ಮನವಿ ಮಾಡಿದರು.

ಬಾಗೇಪಲ್ಲಿ ಪಟ್ಟಣದ ಸಿಪಿಐಎಂ ಪಕ್ಷದ ಸುಂದರಯ್ಯ ಭವನದಲ್ಲಿ ಬುಧವಾರ ನಡೆಸಿದ ತಾಲ್ಲೂಕು ಸಮಿತಿ ನೇತೃತ್ವದ ಸಭೆಯಲ್ಲಿ ಅವರು ಮಾತನಾಡಿದರು.

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪ್ರತಿ ಐದು ವರ್ಷಗಳಿಗೊಮ್ಮೆ, ಸಮ್ಮೇಳನ ಆಯೋಜಿಸಿ ರಾಜಕೀಯ, ಸಾಮಾಜಿಕ, ಆರ್ಥಿಕ ಬೆಳವಣಿಗೆಗಳ ಕುರಿತು ವಿವರವಾಗಿ ಚರ್ಚಿಸಿ, ಪಕ್ಷದ ಸಂಘಟನಾ ವಿಮರ್ಶೆ ಯೊಂದಿಗೆ ಮುಂದಿನ ಐದು ವರ್ಷಗಳಿಗೆ ಬೇಕಾದ ರಾಜಕೀಯ ತಂತ್ರಗಾರಿಕೆ ಮತ್ತು ಸಂಘಟನಾ ಗುರಿಗಳನ್ನು ನಿಗದಿಪಡಿಸಿಕೊಳ್ಳಲು ಪಕ್ಷದ ಸಮ್ಮೇಳನದ ನಡೆಸುತ್ತದೆ ಎಂದು ಹೇಳಿದರು.

ಸಿಪಿಐಎಂ ಪಕ್ಷದ ಮುಖಂಡ ಹಾಗೂ ಪ್ರಜಾ ವೈದ್ಯ ಡಾ.ಅನಿಲ್ ಕುಮಾರ್ ಮಾತನಾಡಿ ಪಟ್ಟಣದ ಎಸ್.ಎಲ್.ಎನ್. ಕಲ್ಯಾಣ ಮಂಟಪದಲ್ಲಿ ನವೆಂಬರ್ 21 ,22 ರಂದು ಹಮ್ಮಿಕೊಂಡಿದ್ದ 18 ನೇ ಜಿಲ್ಲಾ ಸಮ್ಮೇಳನದಲ್ಲಿ ನಡೆಯಲಿದೆ ಈ ಸಮ್ಮೇಳನದಲ್ಲಿ ಸಮಗ್ರ ಬದಲಾವಣೆಯ ಗುರಿಯೊಂದಿಗೆ, ತುಮಕೂರಿನಲ್ಲಿ  ಪ್ರಾರಂಭವಾಗುವ ತನ್ನ ರಾಜ್ಯ ಸಮ್ಮೇಳನದಲ್ಲಿ ದೃಷ್ಟಿಕೋನದಲ್ಲಿ ಬದಲಾವಣೆಗಾಗಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಕಠಿಣ ಕ್ರಮ ಗಳನ್ನು ತರಲು ಸಜ್ಜಾಗಿದೆ. ಒಂದು ಕಾಲದಲ್ಲಿ ರಾಜ್ಯದ ಮುಂದುವರಿಕೆಯನ್ನು ತಡೆಯುವ ಪ್ರತಿಗಾಮಿ ಶಕ್ತಿಯೆಂದು ಆರೋಪಿಸಲ್ಪಟ್ಟ ಪಕ್ಷವು ಈಗ ದೃಷ್ಟಿಕೋನದಲ್ಲಿ ಮಾತ್ರವಲ್ಲದೆ ಸಾಮೂಹಿಕ ಮತ್ತು ವರ್ಗ ಹೋರಾಟಗಳ ಕಡೆಗೆ ತನ್ನ ದೃಷ್ಟಿಕೋನದಲ್ಲಿಯೂ ಪ್ರಮುಖ ಬದಲಾವಣೆಗೆ  ಸಮ್ಮೇಳನ ನಡೆಯುತ್ತದೆ ಎಂದು ಹೇಳಿದರು.

ಈ ಸಮ್ಮೇಳನ ಸಂಬಂಧ ತಾಲ್ಲೂಕು ಸಮಿತಿಗಳಾದ ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ, ಚಿಂತಾಮಣಿ ಶಿಡ್ಲಘಟ್ಟ ತಾಲೂಕಿನ ಪ್ರಮುಖ ಮುಖಂಡರ ನೇತೃತ್ವದಲ್ಲಿ ಸುಧೀರ್ಘವಾಗಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ರಘುರಾಮ ರೆಡ್ಡಿ, ಚಿನ್ನ ಗಂಗಪ್ಪ,ಬಿಳ್ಳೂರು ನಾಗರಾಜು, ವಾಲ್ಮೀಕಿ ಅಶ್ವಥಪ್ಪ, ಜಿ.ಕೃಷ್ಣಪ್ಪ, ಸಾವಿತ್ರಮ್ಮ,ಮುಸ್ತಫಾ ಚನ್ನರಾಯಪ್ಪ, ಇನ್ನು ಮುಂತಾದವರು ಪ್ರಮುಖರು ಹಾಜರಿದ್ದರು.