Wednesday, 9th October 2024

ಪ್ರವಾದಿಗೆ ಅವಮಾನ ಮಾಡಿದವರ ತಲೆ ಕಡಿಯಬೇಕು: ಮುಸ್ಲಿಂ ಮುಖಂಡ ಘೋಷಣೆ

ಮೈಸೂರು : ಪ್ರವಾದಿಗೆ ಅವಮಾನ ಮಾಡಿದವರ ತಲೆ ಕಡಿಯಬೇಕು ಎಂದು ಮೈಸೂರಿನ ಮಿಲಾದ್‌ ಪಾರ್ಕ್‌ ಬಳಿ ನಡೆದ ಪ್ರತಿಭಟನೆಯಲ್ಲಿ ತೊಡಗಿರುವ ಮುಸ್ಲಿಂ ಮುಖಂಡ ಘೋಷಣೆ ಕೂಗಿದ್ದಾನೆ.

ಮೊಹಮ್ಮದ್‌ ಪೈಗಂಬರರ ಬಗ್ಗೆ ನೂಪುರ್‌ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆ ಖಂಡಿಸಿ, ಮೈಸೂರಿನಲ್ಲಿ ಎಸ್‌ಡಿಪಿಐ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಮುಸ್ಲಿಂ ಮುಖಂಡನೊಬ್ಬ ಪ್ರಚೋದನಕಾರಿ ಹೇಳಿಕೆ ನೀಡಿದ್ದಾನೆ.

ಪ್ರತಿಭಟನೆಯಲ್ಲಿ ಮೈಕ್‌ ಹಿಡಿದು ಭಾಷಣ ಮಾಡ್ತಿರುವ ಮುಸ್ಲಿಂ ಮುಖಂಡ ಈ ಹೇಳಿಕೆ ನೀಡಿದ್ದಾನೆ. ‘ಮುಸ್ಲಿಮರ ವಿರುದ್ಧ ಹೇಳಿಕೆ ಕೊಡುವವರ ತಲೆ ಕಡಿಯಬೇಕು. ಪ್ರವಾದಿಗೆ ಅವಮಾನ ಮಾಡಿದವರ ತಲೆ ಕಡಿಯಬೇಕು’ ಎಂದಿದ್ದಾನೆ.

ಈ ನಡುವೆ ನೂಪುರ್‌ ಶರ್ಮಾ ಹೇಳಿಕೆ ಖಂಡಿಸಿ ಬೆಳಗಾವಿ, ಲಖನೌ, ಮೊರಾದಾಬಾದ್‌, ಜಮ್ಮು-ಕಾಶ್ಮೀರದ ಶ್ರೀನಗರ , ಹೈದ್ರರಾಬಾದ್‌, ಕೋಲ್ಕತ್ತಾ ಸೇರಿ ದೇಶದ ಹಲವೆಡೆ ಮುಸ್ಲಿಮರು ಧರಣಿ ನಡೆಸುತ್ತಿದ್ದಾರೆ. ಜಮ್ಮುವಿನಲ್ಲಿ ಬೃಹತ್‌ ಪ್ರತಿಭಟನೆ ಹಿನ್ನೆಲೆ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ.

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಈ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ದು, ಉದ್ರಿಕ್ತ ಯುವಕರ ಗುಂಪು ಕಲ್ಲುತೂರಾಟ ನಡೆಸಿದೆ.