ತುಮಕೂರು : ಸಮಾಜದಲ್ಲಿನ ಬಾಲ್ಯವಿವಾಹ, ಮಾದಕ ವ್ಯಸನ ಮುಕ್ತ ಸಮಾಜ ಹಾಗೂ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸಲು, ತುಮಕೂರಿನ ಯುವಕ ನಂದನ್ ಹಾಗೂ ಇತರರು ಸೈಕಲ್ ಜಾಥ ಅಭಿಯಾನಕ್ಕೆ ಮುಂದಾಗಿದ್ದಾರೆ.
ಸಿದ್ದಗಂಗಾ ಮಠದಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸೈಕಲ್ ಮೂಲಕ ಸಂಚರಿಸುತ್ತಾ ಜಾಗೃತಿ ಅಭಿಯಾನಕ್ಕೆ ಹೊರಟಿದ್ದಾರೆ. ಯುವಕರ ಸೈಕಲ್ ಜಾಥಕ್ಕೆ ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಚಾಲನೆ ನೀಡಿದ್ದಾರೆ. ಶ್ರೀ ಶಿವಸಿದ್ದೇಶ್ವರ ಶ್ರೀಗಳ ಆಶಿರ್ವಾದ ಪಡೆದ ಯುವಕರು ತುಮಕೂರಿನಿಂದ ಹಾಸನ ಮಾರ್ಗವಾಗಿ ಧರ್ಮಸ್ಥಳಕ್ಕೆ ಸೈಕಲ್ ಪ್ರಯಾಣ ಆರಂಭಿಸಿದ್ದಾರೆ. ಸುಮಾರು ಮೂರ್ನಾಲ್ಕು ದಿನಗಳಲ್ಲಿ ಧರ್ಮಸ್ಥಳ ತಲುಪಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ವಾಪಸ್ ಆಗಲಿದ್ದಾರೆ.