Sunday, 27th October 2024

ಸಮಕಾಲೀನ ಸಂದರ್ಭದ ಪ್ರತಿರೋಧದ ಶಕ್ತಿ ದೇವನೂರು ಮಹಾದೇವ

ಚಿಕ್ಕನಾಯಕನಹಳ್ಳಿ: ಪ್ರಸ್ತುತ ರ‍್ನಾಟಕದಲ್ಲಿ ನಡೆಯುತ್ತಿರುವ ಹೋರಾಟ ಹಾಗು ಸಮಕಾಲೀನ ತಲ್ಲಣಗಳಿಗೆ ದೇವನೂರ ಸಮುದಾಯದ ಪ್ರತೀಕ ಎಂದು ಪ್ರೊ.ಬಿಳಿಗೆರೆ ಕೃಷ್ಣಮರ‍್ತಿ ನುಡಿದರು.

ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿಯಲ್ಲಿ ನಡೆದ ದೇವನೂರು ಮಹಾದೇವರ ಜನ್ಮ ದಿನದ ಅಂಗವಾಗಿ ನಡೆದ ಅವರ ಸಾಹಿತ್ಯ ಮತ್ತು ಹೋರಾಟ ಕುರಿತಾದ ಉಪನ್ಯಾಸ ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇವನೂರರ ಚಿಂತನೆಗಳನ್ನು ಸಮಕಾಲೀನ ಸಮಾಜದಲ್ಲಿ ತಪ್ಪಾಗಿ ರ‍್ಥೈಸಿದ್ದಾರೆ. ಗಾಂಧಿ ಮತ್ತು ಅಂಬೇಡ್ಕರ್ ಕುರಿತಾದ ವಾದಗಳ ಹಿನ್ನೆಲೆಯಲ್ಲಿ ಅವರ ಸಿದ್ಧಾಂತಗಳು ಅನೇಕ ಸಂರ‍್ಷಣೆಗೆ ಕಾರಣವಾಗಿದ್ದು ಆದರೆ ಲೇಖಕರಾಗಿರುವ ಸ್ಪಂದಿಸುವ ಗುಣ ಮೆಚ್ಚತಕ್ಕದ್ದು ಎಂದರು. ನಮ್ಮಲ್ಲಿ ರೈತ ಹೋರಾಟಗಳು, ದಲಿತ ಚಳುವಳಿಗಳು ತಪ್ಪು ತಿದ್ದು ಮುಂದಿನ ದಿನಗಳಲ್ಲಿ ಸಮರ್ಥ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು

ತಾಲ್ಲೂಕು ಮಹಿಳಾ ಘಟಕದ ಪ್ರಧಾನ ಸಂಚಾಲಕರಾದ ಶ್ರೀಮತಿ ವರಮಹಾಲಕ್ಷ್ಮಿ ಮಾತನಾಡಿ ದೇವನೂರು ಸಾಹಿತ್ಯ ಅನುಭವ ಮತ್ತು ದುಡಿತದ ಗ್ರಾಮೀಣ ಸೊಗಡಿನ ಭಾಷೆ ಅವರ ಕೃತಿಗಳು ಜೀವಂತಿಕೆಯಿಂದ ದುಡಿಸಿಕೊಂಡಿದೆ ಎಂದರು.

ಚಂಪಾ, ಲಂಕೇಶ್ ಮುಂತಾದವರಲ್ಲಿ ದೇವನೂರು ಕುರಿತಾಗಿ ಭಿನ್ನತೆಗಳಿದ್ದರೂ ಅವರು ಕೃತಿಗಳನ್ನು ನೋಡುವಲ್ಲಿ ಗಂಭೀರ ವಾದ ಚಿಂತನೆ ನಡೆಸಿದರು.ಒಂದು ಸೀಮಿತ ಪ್ರದೇಶದ ಗ್ರಾಮಯ್ಯ ಮತ್ತು ಸಂಸ್ಕೃತಿಯ ಅನಾವರಣದಲ್ಲಿ ಅವರ ಕೃತಿಗಳು ಪ್ರಮುಖ ವಾಗುತ್ತವೆ ಎಂದರು. ಹಸಿವಿನ ತೀವ್ರತೆಗಳನ್ನು ಅವರ ಒಡಲಾಳ ಅನೇಕ ರೂಪಗಳ ಮೂಲಕ ಕಟ್ಟಿ ಕೊಡುತ್ತದೆ.

ಅನುಭವ ಜನ್ಯವಾದ ಅವರ ಬರಹಗಳು ದಲಿತರ ಸಾಂಸ್ಕೃತಿಕ ಜೀವನವನ್ನು ಅನಾವರಣ ಮಾಡುವ ಮೂಲಕ ಮಧ್ಯಮರ‍್ಗದ ಮಹಿಳೆ ಪಾತ್ರವನ್ನು ಸರ‍್ಥವಾಗಿ ಕಟ್ಟಿಕೊಟ್ಟವರು ಎಂದರು.

ಕಥೆಗಾರ ಕಂಟಲಗೆರೆ ಗುರುಪ್ರಸಾದ್ ಮಾತನಾಡಿ ಮಹಾದೇವರ ಸಾಮಾಜಿಕ ಹೋರಾಟ ಮತ್ತು ಚಿಂತನೆಗಳು ಅನೇಕ ಸಂದರ್ಭ ದಲ್ಲಿ ಭಿನ್ನವಾಗಿದ್ದರೂ ಪಠ್ಯ ಪುಸ್ತಕದ ರ‍್ಚೆಯಲ್ಲಿ ಅವರು ನೀಡಿದ ಪ್ರತಿರೋಧ ಮೆಚ್ಚತಕ್ಕದ್ದು, ದಲಿತ ಸಾಹಿತ್ಯ ಚಳುವಳಿಯನ್ನು ಸರ‍್ಥವಾಗಿ ಕಟ್ಟಿದ ದೇವನೂರರ ಕೆಲವು ನಿಲುವುಗಳು ಇಂದಿಗೂ ಹಲವು ಪ್ರಶ್ನೆ ಸೃಷ್ಟಿಸಿವೆ.ಮಾತಿಗಿಂತ ಮೌನವನ್ನು ದುಡಿಸಿ ಕೊಂಡ, ಅವರ ತೆಗೆದು ಕೊಂಡ ನರ‍್ಣಯಗಳು ಇಂದಿಗೂ ಬಹು ಮುಖ್ಯ.ದಲಿತ ಹೋರಾಟಗಳ ಸೆಲೆ ಆಗಿದ್ದ ದೇವನೂರರವರ ಸದಾಶಿವ ಆಯೋಗ ಕುರಿತ ಮೌನ ಹಲವು ಭಿನ್ನಾಭಿಪ್ರಾಯಗಳಿಗೆ ಮೂಲವಾಗಿದ್ದರೂ ಮೌನ ಮುರಿಯದ ಅವರ ನಡೆ ಅವರನ್ನು ವಿವಾದದ ಕೇಂದ್ರವಾಗಿಸಿ ದ. ಸ. ಸಂ. ಒಡಕಿಗೂ ಕಾರಣವಾಯಿತು ಎಂದು ಅಭಿಪ್ರಾಯ ಪಟ್ಟರು.

ಸಿದ್ದಲಿಂಗಯ್ಯ, ಬಿ ಕೃಷ್ಣಪ್ಪ, ಮುಂತಾದವರ ಜೊತೆಯಲ್ಲಿ ಅವರು ಕಟ್ಟಿದ ದಲಿತ ಸಾಹಿತ್ಯ ಹೋರಾಟಗಳು ಮರೆಯಾಗುತ್ತಿದೆ ಎಂಬ ವಿಷಾದ ವನ್ನು ವ್ಯಕ್ತ ಪಡಿಸಿದರು.

ಪರ‍್ಣಮ್ಮ ಮಾತನಾಡಿ ದೇವನೂರು ಸಾಹಿತ್ಯ ಓದು ಈ ದಿನದ ಅಗತ್ಯವಾಗಿದೆ, ಹೋರಾಟ, ಸಂಘಟನೆ ಹಾಗೂ ಚಳುವಳಿ ಕಟ್ಟು ವಲ್ಲಿ ಅವರ ಪಾತ್ರ ಸ್ಮರಣೀಯ ಎಂದರು. ಕರ‍್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಎಂ, ಎಸ್ ರವಿಕುಮಾರ್ ಕಟ್ಟೆಮನೆ, ಉಪಾಧ್ಯಕ್ಷ ರಾದ ನಂದೀಶ್ ಬಟ್ಲೇರಿ, ಮಂಜುನಾಥ್, ಮಂಜುನಾಥ ರಾಜ್ ಅರಸ್, ಗೌರವ ಕರ‍್ಯರ‍್ಶಿಗಳಾದ ನಿರೂಪ್ ರಾವತ್, ಪ್ರೊ. ರವಿಕುಮಾರ್, ಗೌರವ ಕೋಶಾಧ್ಯಕ್ಷರಾದ ಯೋಗೀಶ್ ಕುಮಾರ್, ಸಂಚಾಲಕರಾದ ಚಂದ್ರಶೇಖರ್, ನಗರ ಘಟಕದ ಅಧ್ಯಕ್ಷರಾದ ಗಂಗಾಧರ್ ಮಗ್ಗದ ಮನೆ, ಕರ‍್ಯರ‍್ಶಿ ಕಿರಣ್ ನಿಶಾನಿ, ಕೋಶಾಧ್ಯಕ್ಷರಾದ ನವೀನ್ ರಾವತ್, ತಾಂತ್ರಿಕ ಘಟಕದ ವಿನಯ್ ಸೀಮೆಣ್ಣೆ, ಹುಳಿ ಯಾರು ಹೋಬಳಿಯ ಮಲ್ಲೇಶಯ್ಯ, ಡಾ. ಸಿ. ಕೆ ಶೇಖರ್. ಮತ್ತಿತರರು ಉಪಸ್ಥಿತರಿದ್ದರು.