Saturday, 14th December 2024

Chikkaballapur News: ದಲಿತರ ಅಭಿವೃದ್ಧಿಗೆ ಶ್ರಮಿಸಿದ ಶೋಷಿತರ ಏಳಿಗೆಯನ್ನು ಉಸಿರಾಗಿ ಸೇರಿಕೊಂಡಿದ್ದರು  ಹೊಸಹುಡ್ಯ ಗೋಪಿ

ದಸಂಸ ಹಿರಿಯ ಮುಖಂಡ ಬಿ.ವೆಂಕಟರಮಣಪ್ಪ ಅಭಿಮತ

ಬಾಗೇಪಲ್ಲಿ: ಯಾವುದೇ ಆಸೆ ಆಮೀಷಗಳಿಗೆ ತಲೆಬಾಗದೆ ನಿರಂತರವಾಗಿ ಶೋಷಿತರ  ಅಭಿವೃದ್ಧಿಗಾಗಿ ಶ್ರಮಿಸಿದ್ದ ಹೊಸಹುಡ್ಯ ಗೋಪಿ ಜೀವನಪೂರ್ತಿ ಜನಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು ಎಂದು ದಸಂಸ ಹಿರಿಯ ಮುಖಂಡ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ಬಿ.ವೆಂಕಟರಮಣ ಅಭಿಪ್ರಾಯಪಟ್ಟರು.

ಬಾಗೇಪಲ್ಲಿ ಪಟ್ಟಣದ ಕೆ.ಎನ್.ಜೆ ಕನ್ವೆನ್ಷನ್ ಹಾಲ್ ನಲ್ಲಿ  ಶುಕ್ರವಾರ ದಸಂಸ ವತಿಯಿಂದ ಏರ್ಪಡಿಸಿದ್ದ ದಿವಂಗತ ಹೊಸಹುಡ್ಯ ಗೋಪಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು 

ಗೋಪಿಯವರು ತಮ್ಮ ಜೀವನ ಪೂರ್ತಿ ದಲಿತ ಸಮುದಾಯಗಳ ಗುರ್ತಿಸಿಕೊಂಡು ಜನತೆಗೆ ನ್ಯಾಯ ಒದಗಿಸುವ ತುಡಿತವನ್ನು ಹೊಂದಿದ್ದರು. 

ದಲಿತರಿಗೆ ಭೂಮಿ,ನಿವೇಶನಗಳನ್ನು ಒದಗಿಸಲು ಸರಕಾರಗಳ ವಿರುದ್ಧ ರಾಜಿರಹಿತ ಹೋರಾಟಗಳನ್ನು ನಡೆಸುವಲ್ಲಿ ಮುಂದಿದ್ದರು. ಇಂತಹ ಧೀಮಂತ ನಾಯಕ ಸೆ.25 ರಂದು ನಮ್ಮೆಲ್ಲರನ್ನು ಅಗಲಿದರು. ಅಂತಹ ಪ್ರಾಮಾಣಿಕ ನಾಯಕನ ಆದರ್ಶಗಳನ್ನು ಯುವ ಪೀಳಿಗೆ ಪಾಲಿಸಬೇಕು. ಎಷ್ಟೇ ಆಸೆ,ಅಮೀಷಗಳನ್ನು ಒಡ್ಡಿದರೂ ಗೋಪಿಯ ರೀತಿ ತಿರಸ್ಕರಿಸಿ, ಧ್ವನಿ ಇಲ್ಲದವರ ಏಳಿಗೆಗೆ ನಾವೆಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.

ಸಂಘಟನೆಗೆ ಸಮರ್ಪಣಾ ಭಾವ ಮುಖ್ಯ

ಇದೇ ವೇಳೆ ದಸಂಸ ಜಿಲ್ಲಾ ಸಂಚಾಲಕ ಕೆ‌.ಸಿ ರಜಾಕಾಂತ್ ಮಾತನಾಡಿ, ಗೋಪಿಯವರು ಯಾವುದೇ ಸಂದರ್ಭ ದಲ್ಲಾಗಲಿ, ರಾಜ್ಯ ಅಥವಾ ನೆರೆಯ ಆಂಧ್ರಪ್ರದೇಶದಲ್ಲಾಗಲಿ ಸಂಘಟನೆಯ ವಿಚಾರದಲ್ಲಿ ಹಾಗೂ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದರಲ್ಲಿ ಸದಾ ಸಿದ್ದರಿರುತ್ತಿದ್ದರು. ಹಾಗಾಗಿ ಸಂಘಟನೆಗೆ ಸಮರ್ಪಣಾ ಮನೋಭಾವ ಮತ್ತು ಸಂಘರ್ಷ ಅತಿ ಮುಖ್ಯವಾಗಿರುತ್ತದೆ. ಅವೆಲ್ಲವನ್ನು ಗೋಪಿ ಹೊಂದಿದ್ದರು. ತಾಲೂಕಿನ ಕಾನಗಮಾಕಲಪಲ್ಲಿ, ಮಿಟ್ಟೇಮರಿ, ಗೌನಿಪಲ್ಲಿ ಮತ್ತಿತರ ಪ್ರದೇಶಗಳಲ್ಲಿ ನಿವೇಶನ,ವಸತಿ ರಹಿತರಿಗಾಗಿ ಹೋರಾಟಗಳನ್ನು ನಡೆಸಿ, ನ್ಯಾಯ ಒದಗಿಸಿದವರಲ್ಲಿ ಗೋಪಿಯೂ ಒಬ್ಬರಾಗಿದ್ದರು, ಅಂತಹ ನಾಯಕ ನಮ್ಮಿಂದ ದೂರವಾಗಿರುವುದು ನೋವಿನ ವಿಚಾರ ಎಂದರು.

ಈ ಸಭೆಯಲ್ಲಿ ಗಾಯಕ ಗೋಪಿನಾಥ್ ಹಾಗೂ ಅವರ ತಂಡದ ಕಲಾವಿದರಿಂದ ಗೋಪಿಯವರ ಆತ್ಮಕ್ಕೆ ಶಾಂತಿ ಕೋರಿ ಹಲವಾರು ಗೀತೆಗಳು ಹಾಡಿ ನುಡಿ ನಮನ ಸಲ್ಲಿಸಿದರು.

ಇದೇ ವೇಳೆ ದಸಂಸ ಮುಖಂಡರಾದ ಸಿ.ಜಿ ಗಂಗಪ್ಪ,ಬಿ.ವಿ ಆನಂದ್,ಎನ್ ಎ ವೆಂಕಟೇಶ್, ಕಡ್ಡೀಲು ವೆಂಕಟರಮಣ, ವಿ.ಗಂಗಪ್ಪ, ನರಸಿಂಹಮೂರ್ತಿ, ರಂಗಪ್ಪ, ಪರಮೇಶ್, ರವಣ, ಚಲಪತಿ, ನರಸಿಂಹಪ್ಪ ಮತ್ತಿತರರು ಇದ್ದರು.

ಇದನ್ನೂ ಓದಿ: Chikkaballapur News: ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಮಹರ್ಷಿ ವಾಲ್ಮೀಕಿ ಕೊಡುಗೆ ಅನನ್ಯ:ಮುಖ್ಯ ಶಿಕ್ಷಕಿ ರಾಮಸುಬ್ಬಮ್ಮ