Thursday, 12th December 2024

darshan aide shifted: ಕೇಂದ್ರ ಕಾರಾಗೃಹಕ್ಕೆ ದರ್ಶನ್ ಆಪ್ತ ಸಹಾಯಕ ನಾಗರಾಜ್ ಸ್ಥಳಾಂತರ

ಕಲಬುರಗಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ 11ನೇ ಆರೋಪಿ ನಾಗರಾಜ ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಶನಿವಾರ ಸಾಯಂಕಾಲ ಶಿಫ್ಟ್ ಮಾಡಲಾಯಿತು.

ಪೊಲೀಸ್ ವಾಹನದಲ್ಲಿ ನಾಗರಾಜ ಕರೆ ತಂದ ಪೊಲೀಸರು. ಎರಡು ಬ್ಯಾಗ್ ಗಳೊಂದಿಗೆ ಬೆಂಗಳೂರು ಜೈಲಿನಿಂದ ಕಲಬುರಗಿ ಜೈಲಿಗೆ ದರ್ಶನ ಆಪ್ತ ಸಹಾಯಕ ನಾಗರಾಜ ಆಗಮಿಸಿದ್ದಾನೆ.

ದರ್ಶನ್ ಆಪ್ತ ನಾಗರಾಜ್ 11ನೇ ಆರೋಪಿಯಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆಯೇ ನಾಗರಾಜ್ ಕಲಬುರಗಿ ಜೈಲಿಗೆ ಶಿಪ್ಟ್ ಆಗಲಿದ್ದಾನೆ ಎನ್ನಲಾಗಿತ್ತು. ಆದರೆ, ನಾಲ್ಕನೇ ದಿನ ಕಲಬುರಗಿ ಕೇಂದ್ರ ಕಾರಾಗೃಕ್ಕೆ ಜೈಲಿಗೆ ಶಿಪ್ಟ್ ಆಗಿದ್ದಾನೆ.