Thursday, 12th December 2024

ನಟ ದರ್ಶನ್‌ ಜೊತೆಗೆ ವಿಡಿಯೋ ಕಾಲ್‌: ರೌಡಿ ಜಾನಿ ಪುತ್ರ ವಶಕ್ಕೆ

actor darshan

ಬೆಂಗಳೂರು: ನಟ ದರ್ಶನ್‌ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಂಡಿದ್ದ ಸತ್ಯನನ್ನು ಬ್ಯಾಡರ ಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ವಿಡಿಯೋ ಕಾಲ್‌ ಸಂಬಂಧ ಕಾನೂನು ಕ್ರಮದ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ರೌಡಿ ಜಾನಿ ಎನ್ನುವವನ ಪುತ್ರ ಸತ್ಯನನ್ನು ವಶಪಡೆದುಕೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ರೇಣುಕಸ್ವಾಮಿ ಕೊಲೆ ಸಂಬಂಧ ಪ್ರಮುಖ ಆರೋಪಿ ದರ್ಶನ್‌ ಗೆ ಜೈಲಿನಲ್ಲಿ ಅತಿಥ್ಯ ನೀಡುತ್ತಿರುವ ಸುದ್ದಿ ವೈರಲ್ ಆಗುತ್ತಿದ್ದ ಹಾಗೇ ಪೊಲೀಸ್‌ ಇಲಾಖೆ ಅಲರ್ಟ್‌ ಆಗಿದ್ದು, ಎಲ್ಲಾ ರೀತಿಯಲ್ಲಿ ತನಿಖೆಯನ್ನು ನಡೆಸುತ್ತಿದ್ದಾರೆ. ಇದಲ್ಲದೇ ಸಿಎಂ ಕೂಡ ಪ್ರಕರಣ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಮುಂದೆ ಹೀಗೆ ಆಗದಂತೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.