ಬಾಗೇಪಲ್ಲಿ: ಸದಾ ನಾಗರಿಕರ ಆರೋಗ್ಯ, ಚುಚ್ಚುಮದ್ದು, ಮಾತ್ರೆ, ಔಷಧಿ ಗುಂಗಿನಲ್ಲಿ ಮುಳುಗಿರುವ ಡಾಕ್ಟರೇಟ್ ,ನರ್ಸ್, ಹಾಗೂ ಆಶಾ ಕಾರ್ಯಕರ್ತೆಯರು ಆಸ್ಪತ್ರೆಯಲ್ಲಿ ದುರ್ಗಾದೇವಿಗೆ ಪೂಜೆ ದಸರಾ ಮಾಡಿದರು.
ಆಸ್ಪತ್ರೆ ಸಿಬ್ಬಂದಿ ಒಂದು ದಿನದ ಮಟ್ಟಿಗೆ ಬಿಳಿ ಯೂನಿಫಾರಂಗೆ ರಿಲ್ಯಾಕ್ಸ್ ನೀಡಿ ಸಾಂಪ್ರದಾಯಿಕ ಶೈಲಿಯ ಉಡಿಗೆ ತೊಡಿಗೆ ತೊಟ್ಟು ಮಿಂಚಿದರು.
ಬಾಗೇಪಲ್ಲಿ ತಾಲ್ಲೂಕಿನಿಂದ ಬೇರ್ಪಟ್ಟ ಚೇಳೂರು ಹೊಸ ತಾಲ್ಲೂಕು ಶಿವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇಂದು ಶಿವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಲೂನ್ ಹಾಗೂ ಬಣ್ಣ ಬಣ್ಣದ ಕಾಗದ ಗಳಿಂದ ಹಾಗೂ ಹೂಗಳಿಂದ ಅಲಂಕರಿಸಿ ಆಸ್ಪತ್ರೆಯ ವಸ್ತುಗಳನ್ನು ಇಟ್ಟು ಪೂಜೆ ಮಾಡಲಾಯಿತು.
ಅರ್ಚಕರಿಂದ ದಸರಾ ದಾರ್ಮಿಕ ಪೂಜೆ ವಿಧಿ ವಿಧಾನಗಳಿಂದ ಪೂಜೆ ನೆರವೇರಿಸಿದರು. ತದನಂತರ ಆಸ್ಪತ್ರೆಯ ವಾಹನಗಳು ಹಾಗೂ ಆಂಬೂಲೆನ್ಸಗೆ ವಿಶೇಷ ಪೂಜೆ ನೆರವೇರಿಸಿದರು. ತದನಂತರ ಪ್ರಸಾದ ಹಾಗೂ ಹಬ್ಬದ ಸಿಹಿ ಊಟವನ್ನು ಬಡಿಸಲಾಯಿತು.
ಡಾ.ಸುಜೀತ್ ರೆಡ್ಡಿ ಮಾತನಾಡಿ ನಾಡಿನ ಸಮಸ್ತ ಜನತೆಗೆ ದಸರಾ ಹಾಗೂ ದೀಪಾವಳಿ ಹಬ್ಬದ ಶುಭಾಶಯ ಗಳನ್ನು ತಿಳಿಸಿ ಇಂದು ಚೆನ್ನಾಗಿ ಮಳೆ ಆಗಿದೆ ರೈತಾಪಿ ಜನರು ಹಾಗೂ ಎಲ್ಲಾ ಸಮಸ್ತ ಜನರು ಆರೋಗ್ಯ ದಿಂದ ಇರಬೇಕು ಎಂದು ಹಾರಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧೀಕಾರಿ ಲಾವಣ್ಯ, ಲಕ್ಷ್ಮಿ, ನಾಗಮಣಿ, ಸಮುದಾಯ ಆರೋಗ್ಯದೀಕಾರಿ ನಯನ, ಭವ್ಯ, ಹಾಗೂ ಔಷದಿ ವಿತರಕರಾದ ಶಿಲ್ಪ ಮತ್ತು ಆಶಾಕಾರ್ಯಕರ್ತೆಯರು ಭಾಗವಹಿಸಿದ್ದರು.