Saturday, 12th October 2024

ಅಕ್ಟೋಬರ್ 15-24 ರವರೆಗೆ ದಸರಾ ಮಹೋತ್ಸವ

ಮೈಸೂರು: ಈ ವರ್ಷ ಅಕ್ಟೋಬರ್ 15 ರಿಂದ ಅಕ್ಟೋಬರ್ 24 ರವರೆಗೆ ಉತ್ಸವವನ್ನು ಆಚರಿಸಲಾಗುವುದು.

2023ರ ದಸರಾ ಮಹೋತ್ಸವದ ಕಾರ್ಯಸೂಚಿಯನ್ನು ಅರಮನೆ ಮಂಡಳಿ ಕಚೇರಿ ಯಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಸಲಾಯಿತು.

ಅಕ್ಟೋಬರ್ 15 , ಅಕ್ಟೋಬರ್ 23 ರಂದು ಆಯುಧ ಪೂಜೆ ಮತ್ತು ಅಕ್ಟೋಬರ್ 24 ವಿಜಯದಶಮಿ ಆಚರಣೆಗಳು ಪ್ರಾರಂಭ ವಾಗಲಿವೆ.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯತ್ರಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಉಪಸ್ಥಿತರಿದ್ದರು.

2023ರ ದಸರಾ ಸಿದ್ಧತೆಗಳ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ದಸರಾ ಉನ್ನತಾಧಿಕಾರ ಸಮಿತಿ ಸಭೆಗೂ ಮುನ್ನ ಪೂರ್ವಭಾವಿ ಚರ್ಚೆ ನಡೆಯಿತು. ವಿಧಾನ ಸಭೆ ಅಧಿವೇಶನದ ಬಳಿಕ ವಿಧಾನಸೌಧದಲ್ಲಿ ಉನ್ನತಾಧಿಕಾರ ಸಮಿತಿ ಸಭೆ ನಡೆಯಲಿದೆ.