Saturday, 14th December 2024

ಯೂನಿಯನ್ ಬ್ಯಾಂಕ್‌ನಲ್ಲಿ ಹಿರಿಯ ನಾಗರೀಕರ ದಿನಾಚರಣೆ

ಗೌರಿಬಿದನೂರು : ನಗರದ ಯೂನಿಯನ್ ಬ್ಯಾಂಕ್ ಕಛೇರಿಯಲ್ಲಿ ಹಿರಿಯ ನಾಗರೀಕರ ದಿನಾಚರಣೆಯನ್ನು ಆಚರಿಸಲಾಯಿತು.

ಯೂನಿಯನ್ ಬ್ಯಾಂಕ್ ಪ್ರಬಂಧಕರಾದ ಎಂ. ಚಂದ್ರಶೇಖರ್ ಮಾತನಾಡಿ, ಬ್ಯಾಂಕಿನಿAದ ಹಿರಿಯ ನಾಗರಿಕರಿಗೆ  ದೊರೆಯುವ ಸವಲತ್ತುಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಗೌರಿಬಿದನೂರಿನ ಕೆ.ಇ.ಬಿ ಪಿಂಚಿಣಿದಾರರ  ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ಸಂಘದ ಪದಾಧಿಕಾರಗಳಾದ ಆರ್. ವೀರಣ್ಣ,ಭೀಮಾರೆಡ್ಡಿ, ಚಂದ್ರಶೇಖರ್ ಬಿ. ಸಿ,  ರಾಮರೆಡ್ಡಿ, ಸಿ.ಅರ್. ಕೃಷ್ಣಪ್ಪ, ಬಿ ಸಿ ಶ್ರೀನಿವಾಸಯ್ಯ, ಕಾಂತರಾಜು, ಚಿಕ್ಕಪ್ಪಯ್ಯ ಕೃಷ್ಣೇಗೌಡ, ನಗೀನ್ ತಾಜ್, ಹನುಮಂತು,ಬಸವರಾಜು ರವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಪ್ರಬಂಧಕರಾದ ಗಂಗಾಧರಪ್ಪ ಮತ್ತು ಗ್ರಾಹಕರಾದ ಡಾ. ಕೆ.ವಿ.ಪ್ರಕಾಶ್ ಬ್ಯಾಂಕ್ ಅಧಿಕಾರಿಗಳಾದ ಅನಿಲ್, ಕಿರಣ್, ಅನಿತಾ, ವಸಂತಮ್ಮ,ಮಹೇಶ್,ಶAಕರ್ ಮತ್ತು ಬ್ಯಾಂಕ್ ಗ್ರಾಹಕರು ಉಪಸ್ಥಿತರಿದ್ದರು.