ಪರ- ವಿರೋಧಗಳು ರಾಜ್ಯ ಸಮಿತಿಗೆ ತಲುಪಿಸಲಾಗುತ್ತದೆ
ಪರಿಸರ ಸಾರ್ವಜನಿಕರ ಒತ್ತಾಯಕ್ಕೆ ಅರಣ್ಯ, ಪ್ರಾಣಿಗಳ ಮತ್ತು ಕಾರ್ಮಿಕರ ಸುರಕ್ಷತೆಗೆ ಜಿಲ್ಲಾಧಿಕಾರಿ ತರನ್ನುಂ ಭರವಸೆ
ಚಿಂಚೋಳಿ: ತೆಲಂಗಾಣದ ಗಡಿ (Telangana Border) ಭಾಗಕ್ಕೆ ಹೊಂದಿಕೊಂಡಿರುವ ಚಿಂಚೋಳಿ(Chincholli) ತಾಲೂಕಿನ ಮಿರಿಯಾಣ ಗ್ರಾಮದ ಮೊಹ್ಮದ್ ಗೌಸ್ ಮೊಹ್ಮದ್ ಒಸ್ಮಾನ್ ಗೆ ಸೇರಿದ ಸರ್ವೇ ನಂಬರ್ 109//1 ರ 1 ಎಕರೆ ಹಾಗೂ ಅಬ್ದುಲ್ ರವೂಫ್ ಅಬ್ದುಲ್ ನಬೀಸಾಬ್ ಗೆ ಸೇರಿದ ಸರ್ವೇ ನಂಬರ್ 106//1 ರ 4 ಎಕರೆ 37 ಗುಂಟೆ ಕೃಷಿ ಜಮೀನು ಮಾರ್ಪಡಿಸಿ ಶಾಹಬಾದ ಕಲ್ಲು ಗಾಣಿಗರಿಕೆ ನಡೆಸುವ ಅನುಮತಿ ಕೋರಿ ಸಲ್ಲಿಸಿದ ಅನುಮತಿಗಾಗಿ ರಾಜ್ಯ ಪರಿಸರ ಮಾಲಿನ್ಯ ಅಧಿಕಾರಿಗಳು ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಫೌಜೀಯಾ ತರನ್ನುಂ ಅವರು ಗಣಿ ಏರಿಯಾ ಮಿರಿಯಾಣ ಗ್ರಾಮದ ವೀರಭದ್ರೇಶ್ವರ್ ದೇವಾಲಯದಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ನಡೆಸಲಾಯಿತು.
ಈ ಆಲಿಕೆ ಸಭೆಯಲ್ಲಿ ಸಾರ್ವಜನಿಕರಾದ ಗೋಪಾಲರಾವ್ ಕಟ್ಟಿಮನಿ, ಅಬ್ದುಲ್ ಬಾಶೀದ್, ಕೆ. ಎಂ ಬಾರಿ, ನರಸಿಂಹಲು ಪೂಜಾರಿ, ರಾಜೇಂದ್ರ ಪ್ರಸಾದ, ಶಾಮರಾವ್ ಚಿಂಚೋಳಿ, ನರಸಿಂಹಲು ಕುಂಬಾರ, ರವಿಶಂಕರ ರೆಡ್ಡಿ ಅವರುಗಳಿಂದ ಗಣಿಗಾರಿಕೆ ನಡೆಸಲು ಪರ – ವಿರೋಧಗಳು ವ್ಯಕ್ತವಾದವು.
ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗ ಸೂಚಿಗಳ ಪ್ರಕಾರವೇ ತಯಾರಿಸಿ ಗಾಣಿಗಾರಿಕೆ ನಡೆಸಲು ಅನುಮತಿಸ ಲಾಗುತ್ತಿದೆ ಎಂದು ರಾಜ್ಯ ಪರಿಸರ ಮಾಲಿನ್ಯ ಅಧಿಕಾರಿಗಳು ಎಲ್ ಡಿ ಸ್ಕ್ರೀನ್ ಪರದೆಯ ಮೇಲೆ ತಿಳಿಸುವ ಮೂಲಕ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಗಾಣಿಗರಿಕೆ ನಡೆಸಲು ಅನುಮತಿ ನೀಡುವುದು ರಾಜ್ಯ ಸಮಿತಿ ಕೈಗೊಳ್ಳುತ್ತದೆ. ಅನುಮತಿ ನಿರ್ಣಯ ನಮ್ಮ ಹಂತ ದಲ್ಲಿ ನಡೆಯುವುದಿಲ್ಲ. ಪ್ರಕ್ರಿಯೆಗಳ ಪರಿಶೀಲನೆ ನಡೆಸಲು ಮಾತ್ರ ಅಧಿಕಾರವಿದೆ. ಆಲಿಕೆ ಸಭೆಯಲ್ಲಿ ಪರ – ವಿರೋಧಗಳು ಬಂದ ಹಿನ್ನೆಲೆಯಲ್ಲಿ ಎಲ್ಲವೂ ರಾಜ್ಯ ಸಮಿತಿಗೆ ತಲುಪಿಸಲಾಗುತ್ತದೆ. ಸಾರ್ವಜನಿಕರು ಅರಣ್ಯ ಮತ್ತು ಪ್ರಾಣಿಗಳ ಹಾಗೂ ಕಾರ್ಮಿಕರ ಸುರಕ್ಷತೆ ಬಗ್ಗೆ ಕಾಳಜಿವಹಿಸುವ ಮಾತುಗಳು ಕೇಳಿಬಂದಿದ್ದು, ಇವುಲ್ಲವೂ ನಡುವಳಿಗಳಲ್ಲಿ ಹಾಕಿಸಿ ಗಣಿ ಮಾಲೀಕರಿಂದ ಕಾನೂನಾತ್ಮಕವಾಗಿ ನಡೆದುಕೊಳ್ಳುವ ಕೆಲಸ ಮಾಡಲಾಗುತ್ತದೆ ಎಂದು ಸಾರ್ವಜನಿಕರಿಗೆ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನುಂ ಭರವಸೆ ನೀಡಿದರು.
ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ರಾಜ್ಯ ಪರಿಸರ ಮಾಲಿನ್ಯ ಅಧಿಕಾರಿ ರೇಖಾ, ಪ್ರಾದೇಶಿಕ ಪರಿಸರ ಅಧಿಕಾರಿ ಸೋಮಶೇಖರ, ಜಿಲ್ಲಾ ಪರಿಸರ ಅಧಿಕಾರಿ ವೆಂಕಟೇಶ, ಸಹಾಯಕ ಪರಿಸರ ಅಧಿಕಾರಿ ಶಾರದಾ, ಡಿ ವೈ ಎಸ್ ಪಿ ಸಂಗಮನಾಥ ಹಿರೇಮಠ್, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ಅವರು ಈ ಸಂಧರ್ಭದಲ್ಲಿ ಇದ್ದರು.
ಇದನ್ನೂ ಓದಿ: Kalaburagi News: ಸಿಎಂ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು-ಆಂದೋಲ ಶ್ರೀ