Sunday, 15th December 2024

ಹೇಮಾವತಿ ನಾಲೆ ಸೇತುವೆ ಬಳಿ ಅಪರಿಚಿತ ಶವ ಪತ್ತೆ

ಗುಬ್ಬಿ: ತಾಲ್ಲೂಕು ಸಿಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚೀರನಹಳ್ಳಿ ಗ್ರಾಮದ ಹತ್ತಿರ ಹೇಮಾವತಿ ನಾಲೆಯ ಸೇತುವೆ ಬಳಿ ಕಸಕ್ಕೆ ಸಿಕ್ಕಿಕೊಂಡಿದ್ದ ಅಪರಿಚಿತ 30- 35 ವರ್ಷದ ಗಂಡಸಿನ ಮೃತ ದೇಹ ದೊರೆತಿದ್ದು, ಗಂಡಸಿನ ಚಹರೆ ಸುಮಾರು 5 ರಿಂದ 5 1/2 ಅಡಿ ಎತ್ತರ, ಬಿಳಿ ಕಲರಿನ ಕಪ್ಪು ಡಿಸೈನ್ ಇರುವ ಟೀಶರ್ಟ್, ನೀಲಿ ಕಲರಿನ ಬನಿಯನ್ ಹಸಿರು ಕಲರಿನ ಅಂಡರ್ ವೇರ್, ಬ್ಲೂ ಕಲರಿನ ನೈಟ್ ಪ್ಯಾಂಟ್ ಧರಿಸಿರುತ್ತಾರೆ. ಇಂತಹ ಚಹರೆಯುಳ್ಳ  ವ್ಯಕ್ತಿ ಕಾಣೆಯಾಗಿದ್ದರೆ ತಕ್ಷಣ ಸಿಎಸ್ ಪುರ ಠಾಣೆಯ 08131-246522 / 9480802960 ಸಂಖ್ಯೆಗೆ ತಿಳಿಸುವಂತೆ ಕೋರಿದೆ.